Advertisement

ಕೋವಿಡ್ ವೈರಸ್ ನಿರ್ಮೂಲನೆಗೆ ‘ಪೋಲಿಯೋ ‘ತಂತ್ರ: ಭಾರತದ ನೀತಿಗೆ WHO ಸ್ವಾಗತ

01:10 AM Apr 17, 2020 | Hari Prasad |

ಜಿನೇವಾ: ಕೋವಿಡ್ ವೈರಸ್ ನಿರ್ಮೂಲನೆಗೆ ಜಂಟಿ ಹೋರಾಟಕ್ಕೆ ಮುಂದಾಗಿರುವ ಭಾರತದ ನೀತಿಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಎಚ್‌.ಒ.) ಸ್ವಾಗತಿಸಿದೆ.

Advertisement

ಈ ಹಿಂದೆ ಕೂಡ ಭಾರತದಲ್ಲಿ ಪೋಲೀಯೋ ನಿರ್ಮೂಲನೆ ಆಗಲು ಡಬ್ಲ್ಯುಎಚ್‌ಒ ಘಟಕದ ಜತೆಗಿನ ಜಂಟಿ ಹೆಜ್ಜೆಗಳೇ ನೆರವಿಗೆ ಬಂದಿದ್ದವು ಎಂದು ಸಂಸ್ಥೆ ಮುಖ್ಯಸ್ಥ ಟೆಡ್ರಾಸ್‌ ಅಧಾನೊಮ್‌ ಗೆಬ್ರೆಯೆಸುಸ್‌ ಸ್ಮರಿಸಿದ್ದಾರೆ.

‘ಭಾರತದಲ್ಲಿ ಪೋಲಿಯೋ ನಿರ್ಮೂಲನೆಗೆ ಅನುಸರಿಸಿದ ಕಟ್ಟುನಿಟ್ಟಿನ ಕಾರ್ಯತಂತ್ರಗಳನ್ನೇ ಈ ಕೋವಿಡ್ ಯುದ್ಧದಲ್ಲೂ ಅನುಸರಿಸಲಾಗುವುದು. ರಾಷ್ಟ್ರೀಯ ಪೊಲಿಯೊ ಕಣ್ಗಾವಲು ಜಾಲದ ಸಿಬಂದಿ ಇದಕ್ಕೆ ಸ್ಪಂದಿಸಲಿದ್ದಾರೆ’ ಎಂದು ಟೆಡ್ರಾಸ್‌ ಹೇಳಿದ್ದಾರೆ.

ಭಾರತ, ಪೊಲಿಯೊಗೂ ಮುನ್ನ ಸಿಡುಬನ್ನು ನಿರ್ಮೂಲನೆ ಮಾಡಿದ್ದು ಕೂಡ, ಇದೇ ಡಬ್ಲ್ಯುಎಚ್‌ಒ ಜತೆಗೆ ಸೇರಿಯೇ ಎಂಬುದೂ ಇಲ್ಲಿ ಗಮನಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next