ಲಕ್ನೋ: ಧರ್ಮಶಾಲಾದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಬುಡಮೇಲು ಮಾಡಿದ ನೆದರ್ಲೆಂಡ್ಸ್ ತಂಡ, ಈ ಸಾಧನೆಯ ಬಳಿಕ ಶನಿವಾರ ಶ್ರೀಲಂಕಾವನ್ನು ಎದುರಿಸಲು ಸಜ್ಜಾಗಿದೆ. ಸ್ಕಾಟ್ ಎಡ್ವರ್ಡ್ಸ್ ಬಳಗ ಭಾರೀ ಖುಷಿಯಲ್ಲಿದ್ದರೆ, ಹ್ಯಾಟ್ರಿಕ್ ಸೋಲಿನೊಂದಿಗೆ ಅಂಕಪಟ್ಟಿಯ ತಳ ಕಂಡಿರುವ ಶ್ರೀಲಂಕಾ ಡಚ್ಚರ ಭೀತಿಯಲ್ಲಿದೆ.
ಟೆಸ್ಟ್ ಮಾನ್ಯತೆ ಪಡೆದ ರಾಷ್ಟ್ರದ ವಿರುದ್ಧ ವಿಶ್ವಕಪ್‌ನಲ್ಲಿ ಮೊದಲ ಜಯ ಸಾಧಿಸಿದ ಬಳಿಕ ನೆದರ್ಲೆಂಡ್ಸ್ ತಂಡವನ್ನು ಬಹಳ ಎಚ್ಚರಿಕೆಯಿಂದ ಕಾಣಬೇಕಿದೆ. ಆದರೂ ಅವರ ಅಗ್ರ ಕ್ರಮಾಂಕವಿನ್ನೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿಲ್ಲ. ವಿಕ್ರಮ್‌ಜೀತ್ ಸಿಂಗ್, ಮ್ಯಾಕ್ಸ್ ಓ’ಡೌಡ್, ಕಾಲಿನ್ ಆ್ಯಕರ್‌ಮನ್ ರನ್ ಬರಗಾಲದಲ್ಲೇ ಇದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧವೂ ಇವರೆಲ್ಲ ಕೈಕೊಟ್ಟಿದ್ದರು. ಕೊನೆಯಲ್ಲಿ ಸ್ಕಾಟ್ ಎಡ್ವರ್ಡ್ಸ್ ಮತ್ತು ಬೌಲರ್‌ಗಳ ನೆರವಿನಿಂದ ನೆದರ್ಲೆಂಡ್ಸ್ ಐತಿಹಾಸಿಕ ಗೆಲುವು ಸಾಧಿಸಿತ್ತು.
ಶ್ರೀಲಂಕಾದ ಬ್ಯಾಟಿಂಗ್ ಪರಾÌಗಿಲ್ಲ ಎಂಬ ಮಟ್ಟದ ಲ್ಲಿದೆ. ಮೊದಲೆರಡು ಪಂದ್ಯಗಳಲ್ಲಿ ಮುನ್ನೂರರ ಗಡಿ ದಾಟಿದೆ. ಆದರೆ ಬೌಲಿಂಗ್ ವಿಭಾಗ ಮಾತ್ರ ದುರ್ಬಲ ಗೊಂಡಿದೆ. ಪೇಸರ್ ದಿಲ್ಶನ್ ಮದುಶಂಕ (7 ವಿಕೆಟ್) ಹೊರತುಪಡಿಸಿದರೆ ಉಳಿದವರು ತಮ್ಮ ಕೋಟಾ ಪೂರೈಸ ಲಿಕ್ಕೆ ಮಾತ್ರ ಸೈ ಎಂಬಂತಿದ್ದಾರೆ. ಒಂದು ವೇಳೆ ನೆದರ್ಲೆಂಡ್ಸ್ ಬ್ಯಾಟರ್ ಲಂಕೆಯ ಈ ಬೌಲಿಂಗ್ ದೌರ್ಬಲ್ಯದ ಲಾಭ ಎತ್ತಿದ್ದೇ ಆದರೆ ಮತ್ತೂಂದು ಏರು ಪೇರಿನ ಫಲಿತಾಂಶ ದಾಖಲಾಗುವ ಎಲ್ಲ ಸಾಧ್ಯತೆ ಇದೆ.
ಆರಂಭ: ಬೆ. 10.30
ವಿಶ್ವಕಪ್‌ನಲ್ಲಿ ಮೊದಲ ಮುಖಾಮುಖಿ