Advertisement

ಸ್ಪೇನ್‌ಗೆ ಗೆಲುವು ನಿರಾಕರಿಸಿದ ಕಿವೀಸ್‌

06:55 AM Dec 07, 2018 | |

ಭುವನೇಶ್ವರ್‌: ಬಲಿಷ್ಠ ಸ್ಪೇನ್‌ ವಿರುದ್ಧ ಸೋಲುವ ಹಾದಿಯಲ್ಲಿದ್ದ ನ್ಯೂಜಿಲ್ಯಾಂಡ್‌, ಕೊನೆಯ ಅವಧಿಯಲ್ಲಿ ಬೆನ್ನು ಬೆನ್ನಿಗೆ 2 ಗೋಲು ಬಾರಿಸಿ ಗುರುವಾರದ ವಿಶ್ವಕಪ್‌ ಹಾಕಿ ಪಂದ್ಯಕ್ಕೆ ಡ್ರಾ ಮುದ್ರೆ ಒತ್ತುವಲ್ಲಿ ಯಶಸ್ವಿಯಾಗಿದೆ.

Advertisement

9ನೇ ನಿಮಿಷದಲ್ಲೇ ಆಲ್ಬರ್ಟ್‌ ಬೆಲ್‌ಟ್ರಾನ್‌ ಅವರಿಂದ ಗೋಲು ಖಾತೆ ತೆರೆದ ಸ್ಪೇನ್‌ ಆಕ್ರಮಣ ಆಟಕ್ಕೆ ಮುಂದಾಯಿತು. 27ನೇ ನಿಮಿಷದಲ್ಲಿ ಅಲ್ವಾರೊ ಇಗ್ಲೆàಸಿಯಾಸ್‌ 2ನೇ ಗೋಲು ಸಿಡಿಸಿದರು. ಸ್ಪೇನ್‌ ಈ ಮುನ್ನಡೆಯನ್ನು 50ನೇ ನಿಮಿಷದ ತನಕ ಕಾಯ್ದುಕೊಂಡಾಗ ಕೂಟದ ಮೊದಲ ಗೆಲುವು ದಾಖಲಿಸುತ್ತದೆಂದೇ ಭಾವಿಸಲಾಗಿತ್ತು. ಆದರೆ ಈ ಹಂತದಲ್ಲಿ ನ್ಯೂಜಿಲ್ಯಾಂಡ್‌ ಮುನ್ನುಗ್ಗಿ ಬಂತು. ಹೇಡನ್‌ ಫಿಲಿಪ್ಸ್‌ ಗೋಲೊಂದನ್ನು ಬಾರಿಸಿ ಹಿನ್ನಡೆಯನ್ನು ತಗ್ಗಿಸಿದರು. 56ನೇ ನಿಮಿಷದಲ್ಲಿ ಕೇನ್‌ ರಸೆಲ್‌ ನಿರ್ಣಾಯಕ ಗೋಲನ್ನು ಸಿಡಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಸ್ಪೇನಿಗರ ಗೆಲುವಿನ ಕನಸು ನುಚ್ಚುನೂರಾಯಿತು.

Advertisement

Udayavani is now on Telegram. Click here to join our channel and stay updated with the latest news.

Next