Advertisement

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

12:42 AM Apr 28, 2024 | Team Udayavani |

ಶಾಂಘೈ: ಇಲ್ಲಿ ನಡೆಯುತ್ತಿರುವ ಬಿಲ್ಗಾರಿಕೆ ವಿಶ್ವಕಪ್‌ನ ಹಂತ-1ರಲ್ಲಿ ಭಾರತದ ಬಿಲ್ಗಾರರ ತಂಡ 4 ಚಿನ್ನ ಸೇರಿದಂತೆ ಒಟ್ಟು 5 ಪದಕಗಳನ್ನು ಜಯಿಸಿದೆ. ಬಿಲ್ಗಾರ್ತಿ ಜ್ಯೋತಿ ಸುರೇಖಾ ವೆನ್ನಮ್‌ ಹ್ಯಾಟ್ರಿಕ್‌ ಚಿನ್ನ ಜಯಿಸಿದರು. ಅವರು ಮಹಿಳಾ ತಂಡ, ಮಿಶ್ರ ತಂಡ, ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದರು. ಈ ಮೂಲಕ ಹ್ಯಾಂಗ್‌ಝೂ ಏಷ್ಯಾಡ್‌ನ‌ಲ್ಲಿ ತಾವೇ ಮಾಡಿದ್ದ ಸಾಧನೆಯನ್ನು ಪುನರಾವರ್ತಿಸಿದರು.

Advertisement

ಜ್ಯೋತಿ ಸತತ 3ನೇ ಬಾರಿಗೆ ಚಿನ್ನ ಜಯಿಸುವ ಮೂಲಕ ದೀಪಿಕಾ ಕುಮಾರಿ ಅವರ ಬಳಿಕ ಈ ಸಾಧನೆ ಮಾಡಿದ ಭಾರತೀಯ ಮಹಿಳಾ ಬಿಲ್ಲುಗಾರ್ತಿ ಎನಿಸಿಕೊಂಡಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಮೆಕ್ಸಿಕೋದ ಆ್ಯಂಡ್ರಿಯಾ ಬೆಸೆರಾ ಅವರ ವಿರುದ್ಧ ಜ್ಯೋತಿ ಸ್ವರ್ಣಸಾಧನೆಗೈದರು. 2ನೇ ಬಾರಿ ವಿಶ್ವಕಪ್‌ನಲ್ಲಿ ಆಡಿದ ಪ್ರಿಯಾಂಶ್‌ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಆಸ್ಟ್ರಿಯಾದ ನಿಕೋ ವೀನರ್‌ ವಿರುದ್ಧ ಕೇವಲ 3 ಅಂಕ ಗಳ ಅಂತರದಲ್ಲಿ ಸೋಲನು ಭವಿಸಿದರು.

ಜ್ಯೋತಿ, ಅದಿತಿ ಸ್ವಾಮಿ ಮತ್ತು ಪರಣೀತ್‌ ಕೌರ್‌ ಅವರಿದ್ದ ಮಹಿಳಾ ತಂಡ, ಇಟಲಿಯ ತಂಡ ವನ್ನು 236-225 ಅಂಕಗಳಿಂದ ಕಾಂಪೌಂಡ್‌ ತಂಡ ವಿಭಾಗದಲ್ಲಿ ಸೋಲಿಸಿ ಚಿನ್ನ ಗೆದ್ದಿತು. ಅಭಿಷೇಕ್‌ ವರ್ಮ, ಪ್ರಿಯಾಂಶ್‌ ಮತ್ತು ಪ್ರಥಮೇಶ್‌ ಅವರಿದ್ದ ಪುರುಷರ ತಂಡ ನೆದರ್ಲೆಂಡ್‌ ತಂಡವನ್ನು 238-231 ಅಂಕ ಗಳಿಂದ ಸೋಲಿಸಿ ಚಿನ್ನವನ್ನು ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next