Advertisement

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

09:36 PM Apr 25, 2024 | Team Udayavani |

ಶಾಂಘೈ: ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತದ ಪುರುಷರ ತಂಡ ರಿಕರ್ವ್‌ ವಿಭಾಗದಲ್ಲಿ ಫೈನಲ್‌ ತಲುಪಿದೆ.

Advertisement

ಕಾಂಪೌಂಡ್‌ ವಿಭಾಗದಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಈಗಾಗಲೇ ಫೈನಲ್‌ ತಲುಪಿವೆ. ಭಾರತ ತಂಡದ ತರುಣ್‌ದೀಪ್‌ ರೈ, ಧೀರಜ್‌ ಬೊಮ್ಮದೇವರ ಮತ್ತು ಪ್ರವೀಣ್‌ ಜಾಧವ್‌ ಒಂದು ಪದಕವನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ಇಟಲಿಯ ವಿರುದ್ಧ 55-54, 55-55, 56-55 ಅಂಕಗಳಿಂದ ಗೆದ್ದ ಭಾರತ ತಂಡ ಫೈನಲ್‌ ಪ್ರವೇಶಿಸಿತು. ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಭಾರತ ಎದುರಿಸಲಿದೆ. ಇನ್ನು ರಿಕರ್ವ್‌ ವಿಭಾಗದಲ್ಲಿ ಭಾರತದ ಮಹಿಳಾ ತಂಡ ಮೆಕ್ಸಿಕೋ ವಿರುದ್ಧ ಸೋಲುವ ಮೂಲಕ ಟೂರ್ನಿಯಲ್ಲಿ ಹಿಂದೆ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next