Advertisement

ವಿಶ್ವಕಪ್‌ ಹಾಕಿಗೆ ಕರಾವಳಿಯ ಬೆಳಕಿನ ಮೆರುಗು!

10:05 AM Dec 17, 2018 | Team Udayavani |

ಮಂಗಳೂರು: ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಹಾಕಿ ಪಂದ್ಯಾಟ ಈಗಾಗಲೇ ದೇಶ ವಿದೇಶಗಳ ಲಕ್ಷಾಂತರ ಹಾಕಿ ಪ್ರೇಮಿಗಳ ಮನಸೂರೆಗೊಂಡಿದೆ. ಕಳಿಂಗ ಸ್ಟೇಡಿಯಂ ಹೊರಾಂಗಣದ ಸುತ್ತ ಅಳವಡಿಸಿರುವ ವಿದ್ಯುತ್‌ ದೀಪಾಲಂಕಾರ ಕೂಡ ಅದಕ್ಕೆ ಪ್ರಮುಖ ಕಾರಣ. ವಿಶೇಷ ಅಂದರೆ, ಈ ದೀಪಾಲಂಕಾರ ವ್ಯವಸ್ಥೆ ವಹಿಸಿಕೊಂ ಡಿರುವುದು ನಮ್ಮ ಕರಾವಳಿಯವರು!

Advertisement

ಮೂಡುಬಿದಿರೆಯ ಕುದ್ರಿಪದವಿನಲ್ಲಿರುವ ಲೆಕ್ಸಾ ಲೈಟಿಂಗ್‌ ಟೆಕ್ನಾಲಜಿ ಈ ಅವಕಾಶ ಪಡೆದ ಸಂಸ್ಥೆ. ಈ ಸಂಸ್ಥೆಯು ಕ್ರೀಡಾಂಗಣದ ಹೊರಭಾಗಕ್ಕೆ ವಿಶೇಷ ತಂತ್ರಜ್ಞಾನದಿಂದ ಕೂಡಿದ ವಿದ್ಯುತ್‌ ದೀಪ ಅಳವಡಿಸಿ ವಿಶ್ವ ಮಟ್ಟದಲ್ಲಿ ನಡೆಯುವ ಹಾಕಿ ಪಂದ್ಯಾಟವನ್ನು ಮತ್ತಷ್ಟು ರಂಗೇರಿಸುವಂತೆ ಮಾಡಿದೆ.

ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಹಾಕಿಯ ಎಲ್ಲ ಪಂದ್ಯಗಳು ನಡೆಯುತ್ತಿವೆ. ಅಂತಾರಾಷ್ಟ್ರೀಯ ಟೂರ್ನಿ ಅಂದಮೇಲೆ ಸಾವಿರಾರು ಮಂದಿ ವಿದೇಶಿಗರು ಕೂಡ ವೀಕ್ಷಿಸಲು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಾರಂಭದ ದಿನದಿಂದಲೂ ಕ್ರೀಡಾಂಗಣದ ನಾಲ್ಕು ದ್ವಾರಗಳ ಸಹಿತ ಹೊರಾಂಗಣದ ಸುತ್ತಲಿನ ಪ್ರದೇಶಗಳನ್ನು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ 700 ಲೈಟ್‌ಗಳಿಂದ ಸಿಂಗರಿಸಲಾಗಿದೆ. ಇದರ ಪೂರ್ಣ ಜವಾಬ್ದಾರಿಯನ್ನು ವಹಿಸಿ ಕೊಂಡಿರುವುದು ಕರಾವಳಿ ಮೂಲದ ಸಂಸ್ಥೆ ಎನ್ನುವುದು ವಿಶೇಷ.

ಕರಾವಳಿ ಮೂಲದ ಸುಮಾರು 40ಕ್ಕೂ ಹೆಚ್ಚು ಮಂದಿ ನಿರ್ವಹಣೆಯ ಕಾರ್ಯದಲ್ಲಿ ನಿರತರಾಗಿದ್ದಾರೆ. ಕ್ರೀಡಾಂಗಣದ ನಾಲ್ಕು ಬದಿಗಳಲ್ಲಿ, ಹೊರಾಂಗಣ ಪ್ಯಾನೆಲ್‌ಗ‌ಳನ್ನು ವಿವಿಧ ಬಗೆಯ ದೀಪಗಳಿಂದ ಅಲಂಕರಿಸಿರುವುದು ಪ್ರೇಕ್ಷಕರನ್ನು ಸೆಳೆಯುತ್ತಿದೆ. ದ್ವಾರಗಳಿಗೆ ಹೆಚ್ಚಿನ ಮೆರುಗು ನೀಡುವ ಉದ್ದೇಶದಿಂದ ಕೆಂಪು, ಹಸಿರು, ನೀಲಿ, ಬಿಳಿ ಬಣ್ಣದ ದೀಪಗಳಿಂದ ಅಲಂಕರಿಸಲಾಗಿದೆ. ಹೊರಾಂಗಣ ಅಲಂಕಾರಕ್ಕೆಂದು ಸ್ಪೆಕ್‌
ಲೈಟ್‌, ಲೀನಿಯರ್‌ ವಾಶ್‌ ಲೈಟ್‌, ಸ್ಪಾಟ್‌ಲೆಟ್‌, ಆರ್‌ಜಿಬಿಡಬ್ಲೂ ಸ್ಪಾಟ್‌ಲೆçಟ್‌ಗಳನ್ನು ಬಳಕೆ ಮಾಡಲಾಗಿದೆ.

ಒಂದೆಡೆ ನಿಯಂತ್ರಣ
ಸ್ಟೇಡಿಯಂನ ಹೊರಾಂಗಣ ಲೈಟಿಂಗ್‌ ನಿರ್ವಹಣೆಯನ್ನು ಒಂದೇ ಕಂಟ್ರೋಲ್‌ ರೂಂನಿಂದ ನಿರ್ವಹಿಸಲಾಗುತ್ತಿದೆ. ಡಿಎಂಎಕ್ಸ್‌ ಸಿಗ್ನಲ್‌ ಕಂಟ್ರೋಲ್‌ ಬೋರ್ಡ್‌ ನಿಂದ ಎಲ್ಲ ಎಲ್‌ಇಡಿ ಲೈಟ್‌ಗಳನ್ನು ನಿಯಂತ್ರಣ ಮಾಡಲಾಗುತ್ತಿದೆ. ಅಳವಡಿಸಿರುವ ದೀಪಗಳಲ್ಲಿ ಬಣ್ಣ ಬದಲಾಗುವ ತಂತ್ರಜ್ಞಾನ ಅಳವಡಿಸಲಾಗಿದೆ. ಮಳೆ ಬಂದರೆ ತೊಂದರೆಯಾಗದಂತೆ ಎಲ್ಲ ಕಡೆ ಗಳಲ್ಲಿಯೂ ಎಲ್‌ಇಡಿ ಚಿಪ್‌ಗ್ಳನ್ನು ಬಳಕೆ ಮಾಡಲಾಗಿದೆ. 

Advertisement

ವಿನ್ಯಾಸಕ್ಕೆ ಅವಕಾಶ
ಹೊರಾಂಗಣ ದೀಪಾಲಂಕಾರ ವಿನ್ಯಾಸಕ್ಕೆ ಒರಿಸ್ಸಾ ಸರಕಾರವು ಟೆಂಡರ್‌ ಆಹ್ವಾನಿಸಿತ್ತು. ಟೆಂಡರ್‌ ಸಲ್ಲಿಸಿದ್ದ ಮೂಡುಬಿದಿರೆಯ ಲೆಕ್ಸಾ ಲೈಟಿಂಗ್‌ ಟೆಕ್ನಾಲಜಿ ಸಂಸ್ಥೆಯ ವೈವಿಧ್ಯ, ವಿನ್ಯಾಸವನ್ನು ಗುರುತಿಸಿ ಒರಿಸ್ಸಾ ಸರಕಾರ ಅವಕಾಶವನ್ನು ಲೆಕ್ಸಾ ಸಂಸ್ಥೆಗೆ ನೀಡಿತ್ತು. 

ಈವರೆಗೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳು, ವೇದಿಕೆಗಳು, ಸಿನೆಮಾ, ಧಾರಾವಾಹಿಗಳು ಸೇರಿದಂತೆ ಇನ್ನಿತರ ಸೆಟ್‌ಗಳಲ್ಲಿ ಲೈಟಿಂಗ್‌ ಕೆಲಸಗಳನ್ನು ಮಾಡುತ್ತಿದ್ದೇವೆ. ಆದರೆ ಅಂತಾರಾಷ್ಟ್ರೀಯ ಕ್ರೀಡಾಕೂಟದ ಬೆಳಕಿನ ನಿರ್ವಹಣೆಯ ಅವಕಾಶ ಒದಗಿದ್ದು ಇದೇ ಮೊದಲು.
ರೊನಾಲ್ಡ್‌ ಸಿಲ್ವನ್‌ ಡಿ’ಸೋಜಾ, ಲೆಕ್ಸಾ ಸಂಸ್ಥೆ ಸಿಇಒ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next