Advertisement

ವಿಶ್ವಕಪ್‌ ಫಿಕ್ಸಿಂಗ್‌: ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಡಿ ಸಿಲ್ವ ವಿಚಾರಣೆ

12:05 AM Jul 02, 2020 | Sriram |

ಕೊಲಂಬೊ: 2011ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದ “ಫಿಕ್ಸಿಂಗ್‌ ಪ್ರಕರಣ’ವನ್ನು ಶ್ರೀಲಂಕಾ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ವಿಚಾರಣೆ ತೀವ್ರಗೊಂಡಿದೆ. ಅಂದಿನ ಶ್ರೀಲಂಕಾ ಕ್ರಿಕೆಟ್‌ ಆಯ್ಕೆ ಸಮಿತಿ ಅಧ್ಯಕ್ಷ ಅರವಿಂದ ಡಿ ಸಿಲ್ವ ಅವರನ್ನು ಪೊಲೀಸರು ಸತತ 6 ಗಂಟೆಗಳ ವಿಚಾರಣೆ ನಡೆಸಿದ್ದಾರೆ.

Advertisement

ವಿಶೇಷ ಪೊಲೀಸ್‌ ತನಿಖಾ ದಳ ಅರವಿಂದ ಡಿ ಸಿಲ್ವ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು. ಬಳಿಕ ಅಂದಿನ ನಾಯಕ ಕುಮಾರ ಸಂಗಕ್ಕರ ಅವರಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ. ಸಂಗಕ್ಕರ ಗುರುವಾರ ಬೆಳಗ್ಗೆ 9 ಗಂಟೆಗೆ ತನಿಖಾ ಆಯೋಗದ ಮುಂದೆ ಹಾಜರಾಗಲಿದ್ದಾರೆ.

ಮುಂದಿನ ವಿಚಾರಣೆಯ ಸರದಿ, 2011ರ ಫೈನಲ್‌ ಪಂದ್ಯದ ಆರಂಭಿಕನಾಗಿದ್ದ ಉಪುಲ್‌ ತರಂಗ ಅವರದದ್ದು ಎನ್ನಲಾಗಿದೆ.

ಈ ಪಂದ್ಯವನ್ನು ಶ್ರೀಲಂಕಾ ಭಾರತಕ್ಕೆ ಬಿಟ್ಟುಕೊಟ್ಟಿತ್ತು ಎಂಬ ಲಂಕೆಯ ಅಂದಿನ ಕ್ರೀಡಾ ಸಚಿವ ಮಹಿಂದಾನಂದ ಅಲುತಗಾಮಗೆ ಅವರ ಸ್ಫೋಟಕ ಆರೋಪಕ್ಕೆ ಅರವಿಂದ ಡಿ ಸಿಲ್ವ ಖಾರವಾಗಿ ಪ್ರತಿಕ್ರಿಯಿಸಿದ್ದರು. ಶ್ರೀಲಂಕಾ ಕ್ರಿಕೆಟ್‌ ಮಂಡಳಿ, ಬಿಸಿಸಿಐ ಮತ್ತು ಐಸಿಸಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅಂಕಣವೊಂದರಲ್ಲಿ ಬರೆದಿದ್ದರು. ಬಳಿಕ ಅವರಿಗೆ ಸಮನ್ಸ್‌ ಜಾರಿಗೊಳಿಸಲಾಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next