Advertisement

World Cup; ಭಾರತವನ್ನು ಎದುರಿಸುವುದು ದೊಡ್ಡ ಸವಾಲು: ವಿಲಿಯಮ್ಸನ್‌

12:36 AM Nov 10, 2023 | Team Udayavani |

ಬೆಂಗಳೂರು: ಒಂದು ವೇಳೆ ವಿಶ್ವಕಪ್‌ನ ಸೆಮಿಫೈನಲ್‌ ಹಂತಕ್ಕೆ ನ್ಯೂಜಿಲ್ಯಾಂಡ್‌ ತಂಡ ಏರಿದರೆ ಭಾರತವನ್ನು ಎದುರಿಸುವುದು ನಮ್ಮ ಪಾಲಿಗೆ ದೊಡ್ಡ ಸವಾಲು ಎಂದು ನ್ಯೂಜಿಲ್ಯಾಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಹೇಳಿದ್ದಾರೆ.

Advertisement

ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಅವರು ಸೆಮಿಫೈನಲ್‌ನಲ್ಲಿ ಆಡುವುದು ಯಾವಾಗಲೂ ವಿಶೇಷವೇ. ಆದರೆ ಆತಿಥೇಯ ತಂಡವನ್ನು ಎದುರಿಸುವುದು ದೊಡ್ಡ ಸವಾಲು. ಈಗ ನಾವು ಸೆಮಿಫೈನಲಿಗೇರುವುದನ್ನು ಕಾದು ನೋಡುತ್ತಿದ್ದೇವೆ ಎಂದರು. ಅಘಾ^ನಿಸ್ಥಾನ ಅಂತಿಮ ಲೀಗ್‌ನಲ್ಲಿ ಗೆದ್ದರೂ ಸೆಮಿಫೈನಲಿಗೇರುವುದು ಅನುಮಾನ. ಆದರೆ ಪಾಕಿಸ್ಥಾನ ಬೃಹತ್‌ ಅಂತರದಿಂದ ಗೆದ್ದರೆ ಸೆಮಿಫೈನಲಿಗೇರುವ ಸ್ವಲ್ಪ ಅವಕಾಶವಿದೆ. ಹಾಗಾಗಿ ನ್ಯೂಜಿಲ್ಯಾಂಡ್‌ ಇದೀಗ ಪಾಕಿಸ್ಥಾನದ ಪಂದ್ಯ ಮುಗಿಯುವ ತನಕ ಕಾಯಬೇಕಾಗಿದೆ. ಒಂದು ವೇಳೆ ಇಂಗ್ಲೆಂಡ್‌ ತಂಡವನ್ನು ಪಾಕಿಸ್ಥಾನ 287 ರನ್‌ ಅಂತರದಲ್ಲಿ ಸೋಲಿಸಿದರೆ ಮುನ್ನಡೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next