Advertisement

Mangaluru: ಪಂಪ್‌ವೆಲ್‌ ಟರ್ಮಿನಲ್‌; ಪ್ರಸ್ತಾವನೆ ಒಪ್ಪಿಗೆ ಸಾಧ್ಯತೆ

05:56 PM Nov 11, 2024 | Team Udayavani |

ಮಹಾನಗರ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದ ಪಂಪ್‌ವೆಲ್‌ ಬಸ್‌ ಟರ್ಮಿನಲ್‌ ಯೋಜನೆ ಮತ್ತೆ ಆರಂಭಗೊಳ್ಳುವ ಲಕ್ಷಣ ಕಾಣುತ್ತಿದೆ. ಹಳೆ ಪ್ರಸ್ತಾವನೆಯ ಮೂಲಕವೇ ಯೋಜನೆ ಆರಂಭಕ್ಕೆ ಚಿಂತನೆ ನಡೆಸಲಾಗುತ್ತಿದ್ದು, ‘ಸ್ವಿಸ್‌ ಚಾಲೆಂಜ್‌’ ಮಾದರಿಯಲ್ಲಿ ಕಾಮಗಾರಿಗೆ ಗುತ್ತಿಗೆ ನೀಡಲು ನಿರ್ಧರಿಸಿದೆ.

Advertisement

ಪಂಪ್‌ವೆಲ್‌ನಲ್ಲಿ ಇಂಟಿಗ್ರೇಟೆಡ್‌ ಬಸ್‌ ಟರ್ಮಿನಲ್‌ ಮತ್ತು ವಾಣಿಜ್ಯ ಸಂಕೀರ್ಣ ಯೋಜನೆ ಆರಂಭದಲ್ಲಿ 445 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿತ್ತು. ಮೂರು ಬಾರಿ ಟೆಂಡರ್‌ ಕರೆದರೂ, ಗುತ್ತಿಗೆ ವಹಿಸಲು ಯಾರೂ ಮುಂದೆ ಬಂದರಲಿಲ್ಲ. ಯೋಜನಾ ವೆಚ್ಚದಲ್ಲಿ ಕಡಿಮೆ, ವಿನ್ಯಾಸದಲ್ಲಿ ಬಲಾವಣೆ ಮಾಡಿ ಟೆಂಡರ್‌ ಕರೆಯಲು ನಿರ್ಧರಿಸಿದರೂ ಅದು ಸಾಕಾರಗೊಂಡಿರಲಿಲ್ಲ. ಈ ಹಿನ್ನಲೆಯಲ್ಲಿ ಯೋಜನೆ ಕೈಬಿಡುವ ಹಂತಕ್ಕೆ ಬಂದಿದ್ದು, ಇದೀಗ ‘ಸ್ವಿಸ್‌ ಚಾಲೆಂಜ್‌’ ಮಾದರಿ ಹೊಸ ಭರವಸೆ ಮೂಡತ್ತಿದೆ.

ಸಾಮಾನ್ಯವಾಗಿ ಹಲವು ವರ್ಷಗಳಿಂದ ಕಾರ್ಯಗತಗೊಳ್ಳದ ಯೋಜನೆಯನ್ನು ‘ಸ್ವಿಸ್‌ ಚಾಲೆಂಜ್‌’ ಮಾದರಿಯಲ್ಲಿ ಟೆಂಡರ್‌ ಕರೆದು ಆರಂಭಿಸಲಾಗುತ್ತದೆ. ಪಂಪ್‌ವೆಲ್‌ನಲ್ಲಿ ಕೇಂದ್ರ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ 2009ರಲ್ಲೇ ಖಾಸಗಿ ಜಮೀನು ಸ್ವಾಧೀನ ಪಡಿಸಲಾಗಿತ್ತು. ಆದರೆ ಮುಂದಿನ ಹಂತದ ಪ್ರಕ್ರಿಯೆಗೆ ವೇಗ ಸಿಗದ ಕಾರಣ ಕಾಮಗಾರಿ ಬಾಕಿ ಉಳಿದಿದೆ. ಇದೀಗ ಹೊಸ ಪದ್ಧತಿಯ ಮೊರೆ ಹೋಗಲು ಸ್ಮಾರ್ಟ್‌ಸಿಟಿ ಯೋಚಿಸಿದ್ದು, ಮಾತುಕತೆ ಹಂತದಲ್ಲಿದೆ. ಸದ್ಯದಲ್ಲೇ ಅಂತಿಗೊಳ್ಳುವ ನಿರೀಕ್ಷೆ ಇದೆ.

ಏನಿದು ‘ಸ್ವಿಸ್‌ ಚಾಲೆಂಜ್‌’?
ಸ್ವಿಸ್‌ ಚಾಲೆಂಜ್‌ ಗುತ್ತಿಗೆಗಳನ್ನು ನೀಡುವ ಹೊಸ ಪ್ರಕ್ರಿಯೆಯಾಗಿದೆ. ಯೋಜನೆ ಆರಂಭಿಸಲು ಇಚ್ಚೆ ಇದ್ದವರು ಆ ಯೋಜನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ. ಬಳಿಕ ಈ ಪ್ರಸ್ತಾವನೆ ಪರಿಶೀಲನೆಗೆ ತಜ್ಞರ ಕಮಿಟಿ ಮುಂದೆ ಹೋಗುತ್ತದೆ. ಅದನ್ನು ಮುಂದಿಟ್ಟು ಅದಕ್ಕಿಂತ ಉತ್ತಮವಾಗಿ ಯಾರು ಪ್ರಸ್ತಾವನೆ ಸಲ್ಲಿಕೆ ಮಾಡುತ್ತಾರೆ ಎಂದು ಅಲ್ಲಿ ಸವಾಲು ಹಾಕಲಾಗುತ್ತದೆ. ಹೀಗೆ ಬಳಿಕ ಬಂದಂತಹ ಅತ್ಯುತ್ತಮ ಪ್ರಸ್ತಾವನೆಯನ್ನು ಆಯ್ಕೆ ಮಾಡಿದವರು ಅಥವಾ ಉತ್ತಮ ಯೋಜನೆ ಅನುಷ್ಠಾನಕ್ಕೆ ತಂದವರು ಟೆಂಡರ್‌ಗೆ ಅರ್ಹವಾಗುತ್ತದೆ. ಕೆಲವು ವರ್ಷಗಳ ಹಿಂದೆ ಫೆರಿಫೆರಲ್‌ ವರ್ತುಲ ರಸ್ತೆಯ ಯೋಜನೆಗೆ ಸ್ವಿಸ್‌ ಚಾಲೆಂಜ್‌ ಮೂಲಕ ಗುತ್ತಿಗೆಗೆ ಆಹ್ವಾನಿಸಲಾಗುತ್ತಿದೆ. ಮಂಗಳೂರಿಗೆ ಈ ಪ್ರಕ್ರಿಯೆ ಹೊಸತು.

Advertisement

Udayavani is now on Telegram. Click here to join our channel and stay updated with the latest news.

Next