Advertisement
ಆಸ್ಟ್ರೇಲಿಯ, ಅಫ್ಘಾನಿಸ್ಥಾನ ಮತ್ತು ಪಾಕಿ ಸ್ಥಾನವನ್ನು ಮಣಿಸಿದ ರೋಹಿತ್ ಪಡೆಗೆ ಇದು 4ನೇ ಮುಖಾಮುಖೀ. ತಂಡದ ಫಾರ್ಮ್ ಮತ್ತು ಮೊದಲ ಮೂರು ಪಂದ್ಯಗಳಲ್ಲಿ ನೀಡಿದ ಹೋರಾಟವನ್ನು ಗಮನಿಸಿದರೆ ಬಾಂಗ್ಲಾದೇಶದ ವಿರುದ್ಧ ಭಾರತವೇ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಕಳೆದ 4 ದಿನಗಳಿಂದ ವಿಶ್ವಕಪ್ ಪಂದ್ಯಾ ವಳಿಯ ಚಿತ್ರಣವನ್ನು ಗಮನಿಸುವಾಗ ಇಲ್ಲಿ ಏನೂ ಸಂಭವಿಸಬಹುದು ಎಂಬುದು ಸ್ಪಷ್ಟ ವಾಗ ತೊಡಗಿದೆ. ಟೀಮ್ ಇಂಡಿಯಾ ಈ ಎಚ್ಚರಿಕೆಯಲ್ಲೇ ಬಾಂಗ್ಲಾದೇಶವನ್ನು ಎದುರಿಸ ಬೇಕಾದುದು ಅತ್ಯಗತ್ಯ.ಬಾಂಗ್ಲಾದೇಶ ಕೂಡ ಅಪಾಯಕಾರಿ ತಂಡಗಳಲ್ಲೊಂದು. ವಿಶ್ವಕಪ್‌ನಲ್ಲೇ ಭಾರತಕ್ಕೆ ಇದರ ಅನುಭವವಾಗಿದೆ. ವೆಸ್ಟ್ ಇಂಡೀಸ್‌ನಲ್ಲಿ ನಡೆದ 2007ರ ವರ್ಲ್ಡ್ಕಪ್‌ನ ಪೋರ್ಟ್ ಆಫ್ ಸ್ಪೇನ್ ಮುಖಾಮುಖೀಯಲ್ಲಿ ಬಾಂಗ್ಲಾದೇಶ 5 ವಿಕೆಟ್‌ಗಳಿಂದ ಭಾರತವನ್ನು ಮಗುಚಿತ್ತು. ಇದರಿಂದ ಭಾರತ ಲೀಗ್ ಹಂತ ದಲ್ಲೇ ಹೊರಬೀಳುವ ದುರಂತಕ್ಕೆ ಸಿಲುಕಿ ದ್ದನ್ನು ಮರೆಯುವಂತಿಲ್ಲ. ಅಂದಹಾಗೆ ಇದು ವಿಶ್ವಕಪ್‌ನಲ್ಲಿ ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಸ್ಪರ್ಧೆ ಕೂಡ ಆಗಿತ್ತು.
Related Articles
Advertisement
ಭಾರತದ ವಿರುದ್ಧ ಏನು ಸಾಧಿಸೀತು ಎಂಬ ಕುತೂಹಲ ಸಹಜ.ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಫಾರ್ಮ್ ಬಗ್ಗೆ ಯಾವ ಚಿಂತೆಯೂ ಇಲ್ಲ. ರೋಹಿತ್ ಶರ್ಮ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಅವರನ್ನೊಳಗೊಂಡ ಬ್ಯಾಟಿಂಗ್ ಲೈನ್‌ಅಪ್ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತ ಬಂದಿದೆ. ಆಸ್ಟ್ರೇಲಿಯ ವಿರುದ್ದದ ಮೊದಲ ಪಂದ್ಯ ದಲ್ಲಿ 2 ರನ್ನಿಗೆ 3 ವಿಕೆಟ್ ಉರುಳಿದ್ದು ಟೀಮ್ ಇಂಡಿಯಾ ಪಾಲಿಗೊಂದು “ಅಲಾರ್ಮ್’ ಆಗಿತ್ತು. ಇದರಿಂದ ಇಡೀ ತಂಡವೇ ಎಚ್ಚೆತ್ತುಕೊಂಡಿದೆ.
ಹಾಗೆಯೇ ಆಲ್‌ರೌಂಡ್ ವಿಭಾಗ. ಇಲ್ಲಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ನಿರ್ಣಾ ಯಕವಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಭಾರೀ ಜೋಶ್‌ನಲ್ಲಿದ್ದಾರೆ. ಪಾಕಿ ಸ್ಥಾನ ವನ್ನು 191ಕ್ಕೆ ಹಿಡಿದು ನಿಲ್ಲಿಸಿದ ಆ ಉತ್ಸಾಹ ಕೆಲವು ಪಂದ್ಯ ಗಳಿಗಾಗುವಷ್ಟು ಸಾಕು. ಈ ಪಂದ್ಯದಲ್ಲಿ ಸಮ ಪಾಲು-ಸಮ ಬಾಳು ಎಂಬಂತೆ 5 ಮಂದಿ ಬೌಲರ್ ತಲಾ 2 ವಿಕೆಟ್ ಉರುಳಿಸಿದ್ದರು. ಆದರೆ ಶಾರ್ದೂಲ್ ಠಾಕೂರ್ ಔಚಿತ್ಯ ಇನ್ನೂ ಅರಿವಾಗುತ್ತಿಲ್ಲ. ಇದರಿಂದ ಮೊಹಮ್ಮದ್ ಶಮಿ ಮತ್ತು ಆರ್. ಅಶ್ವಿನ್‌ಗೆ ಅನ್ಯಾಯವಾಗುತ್ತಿರುವುದು ಸ್ಪಷ್ಟ.
ಬ್ಯಾಟಿಂಗ್ ಟ್ರ್ಯಾಕ್ಪುಣೆಯ “ಎಂಸಿಎ ಸ್ಟೇಡಿಯಂ’ ಬ್ಯಾಟಿಂಗ್‌ಗೆ ಧಾರಾಳ ನೆರವು ನೀಡಿದ ದಾಖಲೆ ಹೊಂದಿದೆ. ಇಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡದ ಸರಾಸರಿ ಸ್ಕೋರ್ 307 ರನ್. ಇಲ್ಲಿ ದಾಖಲಾದ ಸರ್ವಾಧಿಕ ಮೊತ್ತ 356 ರನ್. ಬಾಂಗ್ಲಾ ಹಾದಿ ಸುಗಮವಲ್ಲ
ಬಾಂಗ್ಲಾದೇಶ ಹ್ಯಾಟ್ರಿಕ್ ಸೋಲಿನ ಹಾದಿಯಲ್ಲಿದೆ. ಭಾರತ ವಿರುದ್ಧ ಎಡವಿದರೆ ಮುಂದಿನ ಹಾದಿ ಸುಗಮವಲ್ಲ ಎಂಬ ಅರಿವು ಶಕಿಬ್ ಪಡೆಗೆ ಇದೆ. ಆದರೆ ತಂಡದ ಈಗಿನ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ. ಲಿಟನ್ ದಾಸ್ ಮತ್ತು ಮೆಹಿದಿ ಹಸನ್ ಮಿರಾಜ್ ಒಂದೊಂದು ಫಿಫ್ಟಿ ಹೊಡೆದಿದ್ದಾರೆ. ಆದರೂ ಅಗ್ರ ಕ್ರಮಾಂಕ ಅದುರುತ್ತಿದೆ. ಮಧ್ಯಮ ಸರದಿಯಲ್ಲಿ ನಜ್ಮುಲ್ ಹುಸೇನ್, ತೌಹಿದ್ ಹೃದಯ್ ಪ್ರಯತ್ನ ಸಾಲದು. ಹೀಗಾಗಿ ರಹೀಂ ಮೇಲೆ ಒತ್ತಡ ಹೆಚ್ಚುತ್ತಿದೆ. ನಾಯಕ ಶಕಿಬ್ ಕೂಡ ಶಕ್ತಿ ತುಂಬುತ್ತಿಲ್ಲ. ಬೌಲಿಂಗ್‌ನಲ್ಲಿ ಟಸ್ಕಿನ್ ಅಹ್ಮದ್ ಅವರ ಫಾರ್ಮ್ ಕೈಕೊಟ್ಟದ್ದು ಬೌಲಿಂಗ್ ವಿಭಾಗಕ್ಕೆ ಎದುರಾಗಿರುವ ದೊಡ್ಡ ಹಿನ್ನಡೆ.