Advertisement

World Cup 2023; ಸೆಮಿ ಫೈನಲ್ ದಿನ ಮಳೆ ಬಂದರೆ ಯಾವ ತಂಡಕ್ಕೆ ಲಾಭ? ಮೀಸಲು ದಿನದ ನಿಯಮವೇನು?

01:14 PM Nov 14, 2023 | Team Udayavani |

ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಕೂಟವು ಇದೀಗ ಲೀಗ್ ಹಂತವನ್ನು ಮುಗಿಸಿ ಸೆಮಿ ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಹತ್ತು ತಂಡಗಳು ಭಾಗವಹಿಸಿದ್ದ ಕೂಟದಲ್ಲಿ ಇದೀಗ ಅಂತಿಮವಾಗಿ ನಾಲ್ಕು ತಂಡಗಳು ಕಣದಲ್ಲಿ ಉಳಿದಿವೆ.

Advertisement

ಲೀಗ್ ಹಂತದ ಅಗ್ರಸ್ಥಾನಿ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಮಿ ಫೈನಲ್ ಪ್ರವೇಶ ಮಾಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾದರೆ, ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯುವ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರಾಗಲಿದೆ.

ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಳೆ ಎದುರಾದರೆ ಏನಾಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ. ಈ ಬಗ್ಗೆ ಐಸಿಸಿ ಮಂಗಳವಾರ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು, ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರುತ್ತದೆ ಎಂದಿದೆ. ಮೊದಲ ದಿನ ಪಂದ್ಯ ಯಾವ ಹಂತದಲ್ಲಿ ಅಂತ್ಯವಾಗಿತ್ತೋ ಅಲ್ಲಿಂದಲೇ ಮೀಸಲು ದಿನದಂದು ಆರಂಭವಾಗಲಿದೆ. 2019ರ ವಿಶ್ವಕಪ್ ನ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸೆಮಿ ಫೈನಲ್ ಪಂದ್ಯವನ್ನು ನೆನಪಿಸಬಹುದು.

ಒಂದು ವೇಳೆ ಮೀಸಲು ದಿನದಂದೂ ಮಳೆ ಬಂದರೆ? ಈ ಪ್ರಶ್ನೆಗೆ ಐಸಿಸಿ ಉತ್ತರಿಸಿದ್ದು, ಸೆಮಿ ಫೈನಲ್ ನ ಮೀಸಲು ದಿನದಂದೂ ಮಳೆ ಬಂದರೆ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಫೈನಲ್ ಪ್ರವೇಶ ಪಡೆಯಲಿದೆ. ಮುಂದಿನ ರವಿವಾರ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next