Advertisement

World Cup 2023; ಭಾರತ ವಿರುದ್ಧ ಹೀನಾಯ ಸೋಲು; ತಂಡದಿಂದ ವಿವರಣೆ ಕೇಳಿದ ಲಂಕಾ ಮಂಡಳಿ

02:55 PM Nov 04, 2023 | Team Udayavani |

ಕೊಲಂಬೊ: ಐಸಿಸಿ ಏಕದಿನ ವಿಶ್ವಕಪ್ ಕೂಟದ ಭಾರತದ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ ಶ್ರೀಲಂಕಾ ತಂಡದ ಬಗ್ಗೆ ಮ್ಯಾನೇಜ್ ಮೆಂಟ್ ಗರಂ ಆಗಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಇದೀಗ ಸೋಲಿನ ಬಗ್ಗೆ ವಿವರಣೆ ಕೇಳಿದೆ.

Advertisement

ಕಳೆದ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಲಂಕಾವು 302 ರನ್ ಗಳ ಬೃಹತ್ ಅಂತರದಿಂದ ಸೋಲನುಭವಿಸಿತ್ತು. ಮೊದ;ಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 357 ರನ್ ಪೇರಿಸಿದ್ದರೆ, ಗುರಿ ಬೆನ್ನತ್ತಿದ್ದ ಲಂಕಾವು ಭಾರತದ ವೇಗಿಗಳ ದಾಳಿಗೆ ಪತರುಗಟ್ಟಿ ಕೇವಲ 55 ರನ್ ಗಳಿಗೆ ಆಲೌಟಾಗಿತ್ತು.

ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಪ್ರಕಾರ, ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಇಡೀ ಕೋಚಿಂಗ್ ಸಿಬ್ಬಂದಿ ಮತ್ತು ಆಯ್ಕೆಗಾರರಿಂದ ತುರ್ತು ಮತ್ತು ಸಮಗ್ರ ವಿವರಣೆಯನ್ನು ಕೇಳಿದೆ. ಇತ್ತೀಚಿನ ಸೋಲುಗಳು ಆಘಾತಕಾರಿ ಎಂದು ಮಂಡಳಿ ಹೇಳಿದ್ದು, ತಂಡದ ಸಿದ್ಧತೆ, ತಂತ್ರಗಳು ಮತ್ತು ಪ್ರದರ್ಶನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಇದನ್ನೂ ಓದಿ:Actress: 37ರ ವಯಸ್ಸಿನಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟಿ; ಸಾವಿನ ಹಿಂದೆ ಅನುಮಾನದ ಹುತ್ತ

“ಶ್ರೀಲಂಕಾ ಕ್ರಿಕೆಟ್ ಮಂಡಳಿಯು ನಡೆಯುತ್ತಿರುವ ವಿಶ್ವಕಪ್ 2023 ರ ಸಂದರ್ಭದಲ್ಲಿ ಶ್ರೀಲಂಕಾ ರಾಷ್ಟ್ರೀಯ ತಂಡದ ಪ್ರದರ್ಶನದ ಬಗ್ಗೆ ವಿಶೇಷವಾಗಿ ಭಾರತದ ವಿರುದ್ಧದ ನಿರಾಶಾದಾಯಕ ಸೋಲಿನ ಬಗ್ಗೆ ತನ್ನ ಆಳವಾದ ಕಳವಳ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದೆ. ಹೀಗಾಗಿ ಸಂಪೂರ್ಣ ಕೋಚಿಂಗ್ ಸ್ಟಾಫ್ ಮತ್ತು ಸೆಲೆಕ್ಟರ್‌ ಗಳಿಂದ ಸಮಗ್ರ ವಿವರಣೆ ಕೇಳಿದೆ” ಎಂದು ಎಸ್‌ಎಲ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.

Advertisement

ನಡೆಯುತ್ತಿರುವ ಏಕದಿನ ವಿಶ್ವಕಪ್ 2023 ರಲ್ಲಿ ಕಳಪೆ ಪ್ರದರ್ಶನಗಳ ಹೊರತಾಗಿ, ಶ್ರೀಲಂಕಾ ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಶ್ರೀಲಂಕಾದ ನಾಯಕ ದಸುನ್ ಶನಕ ಮತ್ತು ವೇಗದ ಬೌಲರ್‌ಗಳಾದ ಮಥೀಶ ಪತಿರಣ ಮತ್ತು ಲಹಿರು ಕುಮಾರ ಪಂದ್ಯಾವಳಿಯಲ್ಲಿ ಹೊರಗುಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next