ಅಹ್ಮದಾಬಾದ್: ಇಂಡೋ – ಪಾಕ್ ವಿಶ್ವಕಪ್ ಕದನಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ರೆಡಿಯಾಗಿದೆ. ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ಭಾರತ – ಪಾಕಿಸ್ತಾನ ತಂಡಗಳು ಸೆಟಸಾಟ ನಡೆಸಲಿದೆ.
ಬೌಲಿಂಗ್ – ಬ್ಯಾಟಿಂಗ್ ಎರಡು ವಿಭಾಗದಲ್ಲೂ ಲಯ ಕಂಡುಕೊಂಡಿರುವ ಭಾರತ ಪಾಕ್ ತಂಡವನ್ನು ಎಂಟನೇ ಬಾರಿ ಸೋಲಿಸುವ ತವಕದಲ್ಲಿದೆ.
ಭಾರತದ ಸ್ಟಾರ್ ಆಟಗಾರ ‘ಗೇಮ್ ಚೇಂಜರ್’ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.
‘ಸ್ಕೈ ಸ್ಪೋರ್ಟ್ಸ್’ ಜೊತೆ ಮಾತನಾಡಿರುವ ಅವರು, “ಸದ್ಯ ಭಾರತದ ಬೌಲಿಂಗ್ ಲೈನ್ ಅಪ್ ಸ್ಟ್ರಾಂಗ್ ಹಾಗೂ ಹೆಚ್ಚಿನ ಫಾರ್ಮ್ ನಲ್ಲಿದೆ. ಜಸ್ಪ್ರೀತ್ ಬುಮ್ರಾ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಬುಮ್ರಾ ನಿಜಕ್ಕೂ ಒಬ್ಬ ಗೇಮ್ ಚೇಂಜರ್ ಬೌಲರ್ ಎಂದರೆ ತಪ್ಪಾಗದು. ಅಫ್ಘಾನಿಸ್ತಾನದ ವಿರುದ್ಧ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಆಟದ ವಿವಿಧ ಹಂತದಲ್ಲಿ ಒತ್ತಡವನ್ನು ಹೆಚಿಸುತ್ತಾರೆ” ಎಂದರು.
ಜಡೇಜಾ, ಕುಲದೀಪ್, ಶಾರ್ದೂಲ್ ಠಾಕೂರ್ ಅವರನ್ನೊಳಗೊಂಡ ಭಾರತದ ಬೌಲಿಂಗ್ ಬ್ಯಾಲೆನ್ಸಿಂಗ್ ಆಗಿದೆ. ಇದಲ್ಲದೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವುದು ತಂಡಕ್ಕೆ ಪ್ಲಸ್” ಎಂದು ಮಾರ್ಗನ್ ಹೇಳಿದರು.
ಜಸ್ಪ್ರೀತ್ ಬುಮ್ರಾ ಆಡಿದ ಎರಡು ಪಂದ್ಯಗಳಲ್ಲಿ ಒಟ್ದಟು 6 ವಿಕೆಟ್ ಪಡೆದಿದ್ದಾರೆ. 13.71ರ ಸರಾಸರಿಯಲ್ಲಿ ಆರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದವರು ಸಾಲಿನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ 10 ಓವರ್ ನಲ್ಲಿ 39 ರನ್ ಕೊಟ್ಟು 4 ವಿಕೆಟ್ ಗಳನ್ನು ಪಡೆದು ಬುಮ್ರಾ ಮಿಂಚಿದ್ದರು.