Advertisement

ವಿಶ್ವಕಪ್‌ ಫ‌ುಟ್‌ಬಾಲ್‌ ವೇಳೆ ಸೆಕ್ಸ್‌ ನಿಷೇಧ

06:05 AM Jun 07, 2018 | |

ಮಾಸ್ಕೊ: 2006ರ ವಿಶ್ವಕಪ್‌ ಮುಗಿದ 9 ತಿಂಗಳಲ್ಲಿ ಜರ್ಮನಿಯಲ್ಲಿ ಜನನ ಪ್ರಮಾಣ ಶೇ. 10ರಷ್ಟು ಏರಿತ್ತಂತೆ. ಇದಕ್ಕೆ ಕಾರಣ ಬೀಯರ್‌, ಫ‌ುಟ್‌ಬಾಲ್‌ ಉನ್ಮಾದ, ಗೆಲುವಿನ ಖುಷಿ ಹಾಗೂ ಸೆಕ್ಸ್‌!

Advertisement

2018ರ ವಿಶ್ವಕಪ್‌ ಸಮೀಪಿಸುತ್ತಿದೆ. ವಿವಿಧ ತಂಡಗಳ ಕೋಚ್‌ಗಳು ದಿಟ್ಟ ನಿರ್ಧಾರವೊಂದಕ್ಕೆ ಬಂದಿದ್ದು, ಪಂದ್ಯಾವಳಿ ವೇಳೆ ಯಾವುದೇ ಆಟಗಾರರು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತಿಲ್ಲ ಎಂಬ ಕಟ್ಟಪ್ಪಣೆ ಹೊರಡಿಸಿದ್ದಾರೆ. ಮುಖ್ಯವಾಗಿ ಜರ್ಮನಿ, ಸ್ಪೇನ್‌, ಮೆಕ್ಸಿಕೊ ಮತ್ತು ಚಿಲಿ ತಂಡದ ತರಬೇತುದಾರರು ಇಂಥದೊಂದು ನಿರ್ಧಾರಕ್ಕೆ ಬಂದಿದ್ದಾರೆ. ಸೆಕ್ಸ್‌ ಮಾಡುವುದರಿಂದ ಆಟಗಾರರ ಶಕ್ತಿ ಕುಂದುತ್ತದೆ, ಆಗ ಆಟದ ಸಾಮರ್ಥ್ಯವೂ ಕುಗ್ಗುತ್ತದೆ ಎಂಬುದು ಇವರ ಲೆಕ್ಕಾಚಾರ.

ಆದರೆ ಬ್ರಝಿಲ್‌ ಕೋಚ್‌ ಲೂಯಿಸ್‌ ಫೆಲಿಪ್‌ ಸ್ಕಾಲರಿ ಈ ಕುರಿತು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಟಗಾರರ ಲೈಂಗಿಕ ಕ್ರಿಯೆಗೆ ತನ್ನ ಆಕ್ಷೇಪವಿಲ್ಲ, ಆದರೆ “ಲಂಗುಲಾಗಾಮಿಲ್ಲದ’ ರೀತಿಯಲ್ಲಿ ಸೆಕ್ಸ್‌ನಲ್ಲಿ ತೊಡಗಬಾರದು ಎಂದಿದ್ದಾರೆ. ಈ “ಲಂಗುಲಾಗಾಮಿಲ್ಲದ ರೀತಿ’ ಅಂದರೇನು ಎಂದು ಮಾಧ್ಯಮದವರು ದಯವಿಟ್ಟು ತನ್ನಲ್ಲಿ ಪ್ರಶ್ನಿಸದಿರಲಿ ಎಂದೂ ತಮಾಷೆ ಮಾಡಿದ್ದಾರೆ,.ಅಮೆರಿಕದ ಫ‌ುಟ್ಬಾಲಿಗರು ಈ ವಿಷಯದಲ್ಲಿ ಅದೃಷ್ಟಶಾಲಿಗಳು. 
ಇವರಿಗೆ ಕೋಚ್‌ ಜರ್ಗನ್‌ ಕ್ಲಿನ್ಸ್‌ಮನ್‌ ಯಾವುದೇ ಸೆಕ್ಸ್‌ ಬಿರ್ಬಂಧ ಹೇರಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next