Advertisement
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆಯ ಸೌಲಭ್ಯ ಗಳನ್ನು ಅಳವಡಿಸಿಕೊಂಡು ಮರು ಅಭಿವೃದ್ಧಿ ಗೊಳಿಸುವ ಯೋಜನೆ ರೂಪುಗೊಳ್ಳುತ್ತಿದೆ. ಮಂಗಳೂರು ಜಂಕ್ಷನ್ ಬದಲು ಮಂಗ ಳೂರು ಸೆಂಟ್ರಲ್ ನಿಲ್ದಾಣವನ್ನೇ ವಿಶ್ವ ದರ್ಜೆ ನಿಲ್ದಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿ ನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೇ ಸಚಿವಾಲಯ ರೈಲು ಭೂಅಭಿವೃದ್ಧಿ ಪ್ರಾಧಿಕಾರಕ್ಕೆ (ಆರ್‌ಎಲ್‌ಡಿಎ) ಸೂಚಿಸಿದೆ.
Related Articles
Advertisement
ವಿಶ್ವದರ್ಜೆ ರೈಲು ನಿಲ್ದಾಣ :
ವಿಶ್ವದರ್ಜೆ ಮಟ್ಟದ ರೈಲು ನಿಲ್ದಾಣ ಬಹುಮಾದರಿ ಸಂಚಾರ ಕೇಂದ್ರ (ಮಲ್ಟಿ ಮೊಡೆಲ್ ಟ್ರಾನ್ಸಿಟಿ ಹಬ್) ರೀತಿಯಲ್ಲಿ ವಿನ್ಯಾಸವನ್ನು ಹೊಂದಿರುತ್ತದೆ. ವಿಮಾನ ನಿಲ್ದಾಣ ಮಾದರಿಯಲ್ಲಿ ಪ್ರತ್ಯೇಕ ಆಗಮನ, ನಿರ್ಗಮನ ಲಾಂಜ್‌ಗಳು, ಶಾಪಿಂಗ್ ಮಾಲ್, ಮಲ್ಟಿ ಫ್ಲೆಸ್, ಸುಸಜ್ಜಿತ ರೆಸ್ಟೋರೆಂಟ್, ಕಚೇರಿಗಳನ್ನು ಹೊಂದಿರುತ್ತದೆ. ಪ್ರಯಾಣಿಕರಿಗೆ ವಿಶಾಲ ವೈಟಿಂಗ್ ಲಾಂಜ್, ಸಾಕಷ್ಟು ಆಸನಗಳು, ನಿಲ್ದಾಣಕ್ಕೆ ವಿಶಾಲ ಸಂಪರ್ಕ ರಸ್ತೆಗಳು, ವಿಶಾಲ ಪಾರ್ಕಿಂಗ್ ವ್ಯವಸ್ಥೆ ಮುಂತಾದ ಅಂಶಗಳನ್ನು ಹೊಂದಿರುತ್ತದೆ. ವಿಶ್ವದರ್ಜೆ ರೈಲು ನಿಲ್ದಾಣ ನಿರ್ಮಾಣವನ್ನು ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವದಲ್ಲಿ (ಪಿಪಿಮಾದರಿ)ಕೈಗೊಳ್ಳುವುದು ಪ್ರಸ್ತಾವನೆ ಯಲ್ಲಿದೆ. ಇದರಲ್ಲಿ ಗಣನೀಯ ಮೊತ್ತದ ಹೊಡಿಕೆ ಅವಶ್ಯವಿರುವುದರಿಂದ ಆಸಕ್ತ ಪಾಲುದಾರರನ್ನು ಸೇರಿಸಿಕೊಂಡು ಯೋಜನೆಯನ್ನು ಕೈಗೆತ್ತಿಕೊಳ್ಳುವ ಚಿಂತನೆ ರೈಲ್ವೇ ಇಲಾಖೆಯದ್ದಾಗಿದೆ.
ಮಂಗಳೂರಿನಲ್ಲಿ ವಿಶ್ವದರ್ಜೆ ಮಟ್ಟದ ರೈಲು ನಿಲ್ದಾಣ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಪೂರಕ ಕ್ರಮಗಳು ನಡೆಯುತ್ತಿವೆ. ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಈ ನಿಟ್ಟಿನಲ್ಲಿ ಮರು ಅಭಿವೃದ್ಧಿ ಪಡಿಸುವ ಯೋಜನೆ ಸಿದ್ಧಪಡಿಸಲಾಗಿದೆ. –ನಳಿನ್ ಕುಮಾರ್ ಕಟೀಲು, ಸಂಸದರು, ದ.ಕ. ಲೋಕಸಭಾ ಕ್ಷೇತ್ರ
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆ ಸೌಲಭ್ಯ ಗಳೊಂದಿಗೆ ಅಭಿವೃದ್ಧಿಪಡಿಸುವ ಕೆಲವು ವರ್ಷಗಳ ಹಿಂದಿನ ಯೋಜನೆಯನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ರೈಲು ಭೂಅಭಿವೃದ್ಧಿ ಪ್ರಾಧಿಕಾರ ಕಾರ್ಯಯೋಜನೆ ರೂಪಿಸಲಿದೆ. ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ ಯೋಜನೆ ವರ್ಗಾ ವಣೆ ಯಾಗುತ್ತಿದ್ದು, ಹಿಂದಿನ ಮೂಲ ಯೋಜನೆ ಸಾಕಾಗಬ ಹುದೇ ಅಥವಾ ಇದರಲ್ಲಿ ಈಗಿನ ಆವಶ್ಯಕತೆಗಳಿಗನುಗುಣವಾಗಿ ಬದಲಾವಣೆಗಳು ಅವಶ್ಯವಿದೆಯೇ ಎಂಬುದನ್ನು ಪರಿಶೀಲಿಸಿ ಯೋಜನೆ ಕಾರ್ಯಗತಗೊಳ್ಳಲಿದೆ.–ತ್ರಿಲೋಕ್ ಕೊಠಾರಿ,ಡಿಆರ್‌ಎಂ ಪಾಲ್ಗಾಟ್ ವಿಭಾಗ