Advertisement

ಐಎಸ್‌ಎಸ್‌ಎಫ್ ಜೂನಿಯರ್‌ ಶೂಟಿಂಗ್‌: ತೋಮರ್‌ ವಿಶ್ವದಾಖಲೆ

10:38 PM Oct 05, 2021 | Team Udayavani |

ಲಿಮಾ (ಪೆರು): ಐಎಸ್‌ಎಸ್‌ಎಫ್ ಜೂನಿಯರ್‌ ಶೂಟಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಐಶ್ವರಿ ಪ್ರತಾಪ್‌ ಸಿಂಗ್‌ ತೋಮರ್‌ ನೂತನ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ. 50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ ಅವರು ಈ ದಾಖಲೆ ಸ್ಥಾಪಿಸಿದರು.

Advertisement

ತೋಮರ್‌ ಅರ್ಹತಾ ಸುತ್ತಿನಲ್ಲಿ 1,185 ಅಂಕಗಳೊಂದಿಗೆ ವಿಶ್ವದಾಖಲೆಯನ್ನು ಸರಿಗಟ್ಟಿದರು. ಬಳಿಕ ಫೈನಲ್‌ನಲ್ಲಿ 463.4 ಅಂಕ ಸಂಪಾದಿಸಿ ನೂತನ ವಿಶ್ವದಾಖಲೆ ಸ್ಥಾಪಿಸಿದರು.

ಫ್ರಾನ್ಸ್‌ನ ಲುಕಾಸ್‌ ಕ್ರೈಜ್‌ ಬೆಳ್ಳಿ (456.5), ಅಮೆರಿಕದ ಗಾವಿನ್‌ ಬಾರ್ನಿಕ್‌ ಕಂಚು ಗೆದ್ದರು (446.6). ಬಾಕರ್‌ಗೆ ಸಡ್ಡು ಹೊಡೆದ ನಾಮ್ಯಾ
ವನಿತೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ನವತಾರೆಯೊಂದರ ಉದಯವಾಗಿದೆ. 14 ವರ್ಷದ ನಾಮ್ಯಾ ಕಪೂರ್‌ ಚಿನ್ನದ ಪದಕ ಗೆದ್ದು ಮನು ಭಾಕರ್‌ಗೆ ಸಡ್ಡು ಹೊಡೆದರು. ಮನು ಶೂಟೌಟ್‌ನಲ್ಲಿ ಕಂಚಿಗೆ ತೃಪ್ತಿಪಟ್ಟರು. ಫೈನಲ್‌ನಲ್ಲಿ ನಾಮ್ಯಾ 36 ಅಂಕ, ಫ್ರಾನ್ಸ್‌ನ ಕ್ಯಾಮಿಲೆ ಜೆದ್ರೇವ್‌ಸ್ಕಿ 33 ಹಾಗೂ ಮನು ಭಾಕರ್‌ 31 ಅಂಕ ಗಳಿಸಿದರು.

ಇದನ್ನೂ ಓದಿ:ವಿಶ್ವ ಬಾಕ್ಸಿಂಗ್‌: ಲವ್ಲಿನಾಗೆ ನೇರ ಪ್ರವೇಶ

Advertisement

Udayavani is now on Telegram. Click here to join our channel and stay updated with the latest news.

Next