Advertisement

ವಿಶ್ವ ಬಂಟರ ಸಮ್ಮಿಲನ: ಶಾಶ್ವತ ದತ್ತಿನಿಧಿ ಯೋಜನೆ ಅನಾವರಣ

03:42 PM Feb 27, 2018 | Team Udayavani |

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ವಿಶ್ವ ಬಂಟರ ಸಮಾವೇಶ -2018 ಸಂಭ್ರಮವು ಫೆ. 24 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದ ಮುನಿಯಾಲ್‌ ಉದಯ್‌ಕೃಷ್ಣ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು. 

Advertisement

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಇವರ ಉಪಸ್ಥಿತಿಯಲ್ಲಿ ಸಂಜೆ ನಡೆದ ಸಮಾರಂಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ  ಶಾಶ್ವತ ನಿಧಿ ಯೋಜನೆಗಳನ್ನು ಅನಾವರಣಗೊಳಿಸಲಾಯಿತು.

ಸಮಾರಂಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವ ಬಂಟ ಕುಟುಂಬಗಳಿಗೆ ನೆರವು ನೀಡಲು ಕೈಗೆತ್ತಿಕೊಂಡಿರುವ ಶಾಶ್ವತ ದತ್ತಿನಿಧಿ ಯೋಜನೆಗಳಾದ ಆರೋಗ್ಯ ದತ್ತಿನಿಧಿಯನ್ನು ಕುಸುಮೋದರ ಡಿ. ಶೆಟ್ಟಿ ಮತ್ತು ಸರಿತಾ ಕುಸುಮೋದರ ಶೆಟ್ಟಿ, ವಿವಾಹ ದತ್ತಿನಿಧಿಯನ್ನು ಪ್ರವೀರ್‌  ಆನಂದ್‌ ಶೆಟ್ಟಿ ಮತ್ತು  ಶ್ರೀತಾ ಪ್ರವೀರ್‌  ಶೆಟ್ಟಿ, ಶಿಕ್ಷಣ ದತ್ತಿನಿಧಿಯನ್ನು ಶಶಿಕಿರಣ್‌ ಶೆಟ್ಟಿ ಹಾಗೂ ಕ್ರೀಡಾ ದತ್ತಿನಿಧಿಯನ್ನು ಕೃಷ್ಣ ವೈ. ಶೆಟ್ಟಿ ಮತ್ತು ಉಮಾ ಕೃಷ್ಣ ಶೆಟ್ಟಿ ದಂಪತಿಗಳು ಫಲಕ ಅನಾವರಣಗೊಳಿಸಿ ಶುಭಹಾರೈಸಿದರು.

ಆ ಬಳಿಕ ದತ್ತಿನಿಧಿ ದಾನಿಗಳನ್ನು ಗ್ರಾಮೀಣ ಸಾಂಪ್ರದಾಯಿಕ ರೀತಿಯಲ್ಲಿ ಡೊಂಬಿವಲಿ ಪ್ರಾದೇಶಿಕ ವಿಭಾಗದ ಸಹಕಾರದೊಂದಿಗೆ ಸಮ್ಮಾನಿಸಲಾಯಿತು. 

ಸಮಾರಂಭದಲ್ಲಿದ್ದ ಗಣ್ಯರು
ಶ್ರೀ ದೇವಿ ಎಜುಕೇಶನ್‌ ಟ್ರಸ್ಟ್‌ ಮಂಗಳೂರು ಕಾರ್ಯಾಧ್ಯಕ್ಷ ಎ. ಸದಾನಂದ ಶೆಟ್ಟಿ, ಗೌರವ ಅತಿಥಿ ವರ್ಲ್ಡ್ ಬಂಟ್ಸ್‌ ಫೌಂಡೇಶನ್‌ ಟ್ರಸ್ಟ್‌ ಇದರ ಕಾರ್ಯಾಧ್ಯಕ್ಷ ಸಚ್ಚಿದಾನಂದ ಶೆಟ್ಟಿ,  ಬಂಟ್ಸ್‌ ನ್ಯಾಯಮಂಡಳಿ ಮುಂಬಯಿ ಇದರ ಗೌರವಾಧ್ಯಕ್ಷ ಎಂ. ಡಿ. ಶೆಟ್ಟಿ, ಗೌರವ ಅತಿಥಿಗಳಾದ ಪ್ರವೀರ್‌ ಆನಂದ ಶೆಟ್ಟಿ, ಕುಸುಮೋದರ ಡಿ. ಶೆಟ್ಟಿ, ತುಂಗಾಗ್ರೂಪ್‌ ಆಫ್‌ ಹೊಟೇಲ್ಸ್‌ನ ಸಿಎಂಡಿ ಸುಧಾಕರ ಎಸ್‌. ಹೆಗ್ಡೆ, ಬಂಟ್ಸ್‌ ಸಂಘ ಎಸ್‌. ಎಂ. ಶೆಟ್ಟಿ  ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಶಂಕರ್‌ ಬಿ. ಶೆಟ್ಟಿ, ವಿ. ಕೆ. ಗ್ರೂಪ್‌ ಆಫ್‌ ಕಂಪೆನೀಸ್‌ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಎಂ. ಶೆಟ್ಟಿ, ಈಸ್ಟ್‌ವೆಲ್‌ ಆ್ಯಸ್‌ಬೆಸ್ಟಸ್‌ ಪ್ರೈ. ಲಿ. ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರಭಾಕರ ಶೆಟ್ಟಿ ಉಲ್ಲಾಸ್‌ ನಗರ, ಫಾರ್‌ಚೂನ್‌ ಗ್ರೂಪ್‌ಆಫ್‌ ಹೊಟೇಲ್ಸ್‌ ದುಬಾಯಿ ಇದರ ಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ವಕ್ವಾಡಿ,  ಸಾಯಿ ಪ್ಯಾಲೇಸ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರವಿ ಎಸ್‌. ಶೆಟ್ಟಿ, ಬಂಟ್ಸ್‌ ಸಂಘ ಕತಾರ್‌ ಇದರ ಸ್ಥಾಪಕ ಅಧ್ಯಕ್ಷ  ರವಿ ಶೆಟ್ಟಿ, ರೀಜೆನ್ಸಿ  ಗ್ರೂಪ್‌ ಆಫ್‌ ಹೊಟೇಲ್ಸ್‌ನ ಜಯರಾಮ ಎನ್‌. ಶೆಟ್ಟಿ , ಬಂಟರ ಸಂಘ ವಿಶ್ವಸ್ಥ ಕರ್ನಿರೆ ವಿಶ್ವನಾಥ ಶೆಟ್ಟಿ, ಮಾತೃಭೂಮಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಲಿಮಿಟೆಡ್‌ ಇದರ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ತುಳು ಸಂಘ ಬರೋಡ ಇದರ ಅಧಕ್ಷ ಶಶಿಧರ್‌ ಶೆಟ್ಟಿ  ಬರೋಡ,  ಪೆನಿನ್ಸುಲಾ ಗ್ರೂಪ್‌ಆಫ್‌ ಹೊಟೇಲ್ಸ್‌ ಇದರ ಕಾರ್ಯಾಧ್ಯಕ್ಷ  ಮತ್ತು ಆಡಳಿತ ನಿರ್ದೇಶಕ ಕರುಣಾಕರ ಶೆಟ್ಟಿ, ಬಾಬಾಸ್‌ ಗ್ರೂಪ್‌ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮಹೇಶ್‌ ಎಸ್‌. ಶೆಟ್ಟಿ, ಸಂಗೀತ  ಹಾಸ್ಪಿಟಲ್‌ ಮುಲುಂಡ್‌ ಇದರ ಡಾ| ಸತ್ಯಪ್ರಕಾಶ ಶೆಟ್ಟಿ, ಯೂನಿವರ್ಸಲ್‌ ಸ್ಕೂಲ್‌ಆಫ್‌ ಬೆಂಗಳೂರು ಎಡ್ಮಿಸ್ಟ್ರೇಶನ್‌ ಇದರ ಕಾರ್ಯಾಧ್ಯಕ್ಷ ಆರ್‌. ಉಪೇಂದ್ರ ಶೆಟ್ಟಿ, ಬೆಳಗಾಂವ್‌ನ ಉದ್ಯಮಿ ಸಾಂತೂರು ಭಾಸ್ಕರ್‌ ಶೆಟ್ಟಿ, ಮಾತೃಭೂಮಿ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ನಿರ್ದೇಶಕಿ ಉಮಾ ಕೃಷ್ಣ  ಶೆಟ್ಟಿ, ಹೊಟೇಲ್‌ ಕೃಷ್ಣ ಪ್ಯಾಲೇಸ್‌ ಕಾರ್ಯಾಧ್ಯಕ್ಷ ಕೃಷ್ಣ ವೈ. ಶೆಟ್ಟಿ, ಅದಾನಿ ಗ್ರೂಪ್‌ನ ಕಿಶೋರ್‌ ಆಳ್ವ, ರತ್ನಾ ಪಿ. ಶೆಟ್ಟಿ ಸಾಂತಾಕ್ರೂಜ್‌, ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ , ಗೌರವ ಕಾರ್ಯದರ್ಶಿ  ಸಿಎ ಸಂಜೀವ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿ  ಮಹೇಶ್‌ ಎಸ್‌ ಶೆಟ್ಟಿ,   ಜೊತೆ ಕೋಶಾಧಿಕಾರಿ ಗುಣಪಾಲ್‌ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ  ಸುಧಾಕರ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ವಿ ಶೆಟ್ಟಿ, ಜಾಗತಿಕ ಬಂಟರ ಒಕ್ಕೂಟ ಸಂಘಗಳ  ಗೌರವ ಕಾರ್ಯದರ್ಶಿ ವಿಜಯ್‌ ಪ್ರಸಾದ್‌ ಆಳ್ವ, ಗೌರವ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ  ರೈ, ಗೌರವ ಜತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ,  ಕಾರ್ಯಕ್ರಮ ಸಂಚಾಲಕ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಕಾರಿ ಕಾರ್ಯಾಧ್ಯಕ್ಷ ಎರ್ಮಾಳ್‌ ಹರೀಶ್‌ ಶೆಟ್ಟಿ, ಕಾರ್ಯಕ್ರಮ ಸಮಿತಿಯ  ಯುವ ವಿಭಾಗ ಸಮನ್ವಯಕ ಗಿರೀಶ್‌ ಶೆಟ್ಟಿ ತೆಳ್ಳಾರ್‌  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

Advertisement

ಚಿತ್ರ-ವರದಿ :  ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next