Advertisement

ಮೇರಿ ಸಾಲಿಗೆ ಏರಿದ ಸೋನಿಯಾ ಚಾಹಲ್‌

06:00 AM Nov 24, 2018 | Team Udayavani |

ಹೊಸದಿಲ್ಲಿ: ವನಿತಾ ವಿಶ್ವ  ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ 57 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಸೋನಿಯಾ ಚಾಹಲ್‌ ಫೈನಲ್‌ಗೆ ಲಗ್ಗೆ ಇರಿಸಿದ್ದು, ಸ್ವರ್ಣ ಪದಕದ ನಿರೀಕ್ಷೆ ಮೂಡಿಸಿದ್ದಾರೆ. ಇದರೊಂದಿಗೆ ಭಾರತದ ಚಿನ್ನದ ಸಾಧ್ಯತೆ ಎರಡಕ್ಕೇರಿದೆ. ಶನಿವಾರದ 48 ಕೆಜಿ ವಿಭಾಗದಲ್ಲಿ ಮೇರಿ ಕೋಮ್‌ ಕೂಡ ಚಿನ್ನಕ್ಕಾಗಿ ಹೋರಾಡಲಿದ್ದಾರೆ. 

Advertisement

ಇದೇ ಮೊದಲ ಸಲ ವಿಶ್ವ ಬಾಕ್ಸಿಂಗ್‌ ಚಾಂಪಿ ಯನ್‌ಶಿಪ್‌ನಲ್ಲಿ ಸ್ಪರ್ಧೆಗಿಳಿದಿರುವ ಸೋನಿಯಾ ಚಾಹಲ್‌ ಶುಕ್ರವಾರದ ಸೆಮಿಪೈನಲ್‌ನಲ್ಲಿ ಉತ್ತರ ಕೊರಿಯಾದ ಜೊ ಸೊನ್‌ ಹ್ವಾ ವಿರುದ್ಧ 5-0 ಅಂತರದ ಜಯ ಸಾಧಿಸಿದರು. ಸೊನ್‌ ಹ್ವಾ ಕಳೆದ ಜಕಾರ್ತಾ ಏಶ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಶನಿವಾರ ನಡೆಯಲಿರುವ ಚಿನ್ನದ ಸ್ಪರ್ಧೆಯಲ್ಲಿ ಸೋನಿಯಾ ಜರ್ಮನಿಯ ವಾಹ್ನರ್‌ ಓರ್ನೆಲ್ಲಾ ಗ್ಯಾಬ್ರಿಯಲ್‌ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಚಿನ್ನಕ್ಕಾಗಿ ಮೇರಿ ಕೋಮ್‌-ಉಕ್ರೇನಿನ ಹನ್ನಾ ಒಖೋಟಾ ನಡುವೆ ಸ್ಪರ್ಧೆ ಏರ್ಪಡಲಿದೆ. 

ಹರ್ಯಾಣದ ಭಿವಾನಿ ಜಿಲ್ಲೆಯ 21ರ ಹರೆಯದ ಸೋನಿಯಾ ಚಾಹಲ್‌ 2011ರಲ್ಲಿ ಬಾಕ್ಸಿಂಗ್‌ ಸ್ಪರ್ಧೆಗೆ ಧುಮುಕಿದ್ದರು. ಶಾಲಾ ದಿನಗಳಲ್ಲಿ ಸಬ್‌ ಜೂನಿಯರ್‌ ವಿಭಾಗಗಳಲ್ಲಿ ಮಿಂಚತೊಡಗಿದ ಸೋನಿಯಾ, 2016ರಲ್ಲಿ ದೊಡ್ಡ ಮಟ್ಟದ ಸ್ಪರ್ಧೆಗಳಲ್ಲಿ ಪದಕ ಬೇಟೆ ಆರಂಭಿಸಿದರು. ಕಳೆದ ವರ್ಷದ “ಸರ್ಬಿಯಾ ಕಪ್‌’ನಲ್ಲಿ ಚಿನ್ನದ ಪದಕ ಗೆದ್ದ ಹೆಗ್ಗಳಿಕೆ ಸೋನಿಯಾ ಪಾಲಿಗಿದೆ. 

64 ಕೆಜಿ ವಿಭಾಗದ ಸೆಮಿಫೈನಲ್‌ ಸ್ಪರ್ಧೆಯಲ್ಲಿ ಸಿಮ್ರನ್‌ಜಿàತ್‌ ಚೀನದ ಡಾನ್‌ ಡೂ ವಿರುದ್ಧ 1-4 ಅಂತರದಿಂದ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next