Advertisement

ಅಪಘಾತ ತಡೆಯಲು ರೈಲಿಗೆ ಹಳದಿ ಬಣ್ಣ ಹಚ್ಚಿ!

07:50 AM Sep 02, 2017 | |

ಹೊಸದಿಲ್ಲಿ: ರೈಲುಗಳಿಗೆ ಹಳದಿ ಬಣ್ಣ ಹಚ್ಚುವ ಜೊತೆಗೆ, ಹೆಚ್ಚು ಪ್ರಕಾಶಮಾನವಾಗಿರುವ ದೀಪಗಳನ್ನು (ಲೈಟ್‌) ಬಳಸುವುದರಿಂದ ರೈಲು ಅಪಘಾತಗಳನ್ನು ತಡೆಯಲು ನೆರವಾಗಲಿದೆ ಎಂದು ವಿಶ್ವ ಬ್ಯಾಂಕ್‌ ಭಾರತೀಯ ರೈಲ್ವೆಗೆ ಸಲಹೆ ನೀಡಿದೆ.

Advertisement

“ಭಾರತೀಯ ರೈಲ್ವೆ ವ್ಯವಸ್ಥೆಯಲ್ಲಿ ಸುರಕ್ಷತೆ ಹೆಚ್ಚಿಸುವಿಕೆ’ ಎಂಬ ಶೀರ್ಷಿಕೆಯ ವರದಿಯೊಂದನ್ನು ವಾರದ ಹಿಂದೆ ರೈಲ್ವೆ ಇಲಾಖೆಗೆ ಕಳುಹಿಸಿರುವ ವಿಶ್ವ ಬ್ಯಾಂಕ್‌, ರೈಲ್ವೆ ಸುರಕ್ಷತೆಗೆ ಸಂಬಂಧಿಸಿ ಹಲವು ಸಲಹೆಗಳನ್ನು ನೀಡಿದೆ. “ರೈಲ್ವೆ ನೌಕರರು ಎದ್ದು ಕಾಣುವಂತಹ ಬಟ್ಟೆಗಳನ್ನು ಧರಿಸಬೇಕು. ಪ್ರತಿ ರೈಲಿನಲ್ಲಿ ಕನಿಷ್ಠ 5 ತುರ್ತು ನಿರ್ಗಮನ ಅಥವಾ ಬೆಂಕಿ ನಿರ್ಗಮನ ದ್ವಾರಗಳಿರಬೇಕು. 

ಸುರಕ್ಷತೆಯ ದೃಷ್ಟಿಯಿಂದ ರೈಲುಗಳ ಮುಂಭಾಗದಲ್ಲಿ ಪ್ರಕಾಶಮಾನವಾದ “ಡಿಚ್‌ ಲೈಟ್‌’ಗಳನ್ನು ಅಳವಡಿಸಬೇಕು ಎಂದು ವಿಶ್ವ ಬ್ಯಾಂಕ್‌ ಹೇಳಿದೆ. ರೈಲ್ವೆ ಕ್ರಾಸಿಂಗ್‌ಗಳಲ್ಲಿ ಕಣ್ಣಿಗೆ ರಾಚುವಂಥ ಗಾಢ ಬಣ್ಣಗಳನ್ನು ಬಳಸಿ ಕ್ರಾಸ್‌ ಲೈನ್‌ಗಳನ್ನು ಬರೆಯುವ ಮೂಲಕ ಆ ಪ್ರದೇಶ ಅಪಾಯಕಾರಿ ಎಂದು ಬಿಂಬಿಸಬೇಕು. ರೈಲುಗಳು ದೂರದಿಂದಲೂ ಕಾಣಲು ಅನುಕೂಲವಾಗುವಂತೆ ಎಲ್ಲ ರೈಲುಗಳಿಗೆ ಹಳದಿ ಬಣ್ಣ ಹಚ್ಚಲು ಸಲಹೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next