ಹೊಸದಿಲ್ಲಿ : ಭಾರತ 2026ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಆತಿಥ್ಯ ವಹಿಸಲಿದೆ ಎಂದು ಬಿಡಬ್ಲ್ಯುಎಫ್ ಪ್ರಕಟಿಸಿದೆ. 2023ರ ಸುದೀರ್ಮನ್ ಕಪ್ ಟೂರ್ನಿಯ (ವಿಶ್ವ ಮಿಕ್ಸೆಡ್ ಡಬಲ್ಸ್ ಸ್ಪರ್ಧೆ) ಆತಿಥ್ಯ ಚೀನಕ್ಕೆ ಲಭಿಸಿದೆ.
ಭಾರತಕ್ಕೆ ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಆತಿಥ್ಯ ಲಭಿಸುತ್ತಿರುವುದು ಎರಡನೇ ಸಲ. 2009ರ ಕೂಟ ಹೈದರಾಬಾದ್‌ನಲ್ಲಿ ನಡೆದಿತ್ತು.
ಭಾರತಕ್ಕೆ ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಆತಿಥ್ಯ ಲಭಿಸಿರುವುದು ಅತ್ಯಂತ ಖುಷಿ ಹಾಗೂ ಹೆಮ್ಮೆಯ ಸಂಗತಿ ಎಂಬುದಾಗಿ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಹಿಮಂತ್ ಬಿಸ್ವ ಶರ್ಮ ಹೇಳಿದ್ದಾರೆ.
ಭಾರತ ಈ ಸ್ಪರ್ಧೆಯನ್ನು ಎಲ್ಲಿ ನಡೆಸಲಿದೆ ಎಂಬುದನ್ನು ಮುಂದೆ ನಿರ್ಧರಿಸಲಾಗುವುದು.
ಇದನ್ನೂ ಓದಿ : ಮಂಗಳೂರು ನನ್ನ ಫೇವರಿಟ್: ಕುಡ್ಲದ ಬಗ್ಗೆ ಅಭಿಮಾನ ಮೆರೆದ ರಾಹುಲ್