ಸಿಂಧುವಿನತ್ತ ಎಲ್ಲರ ಚಿತ್ತ ವಿಶ್ವ ಕೂಟದಲ್ಲಿ ಭಾರತಕ್ಕೆ ಗರಿಷ್ಠ ಪದಕ ತಂದಿತ್ತ ಹೆಗ್ಗಳಿಕೆ ಪಿ.ವಿ. ಸಿಂಧು ಅವರದು. ಕಳೆದ ಸಲ ಗ್ಲಾಸೊYàದಲ್ಲಿ ನಡೆದ ಕೂಟದಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು.
Advertisement
ಫೈನಲ್‌ನಲ್ಲಿ ಜಪಾನ್‌ನ ನಜೋಮಿ ಒಕುಹರಾ ವಿರುದ್ಧ ಸೋಲು ಕಂಡಿದ್ದರು. ಇದೇ ಕೂಟದಲ್ಲಿ ಭಾರತದ ಮತ್ತೋರ್ವ ಆಟಗಾರ್ತಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು. ಇದಕ್ಕೂ ಮೊದಲು 2015ರ ಫೈನಲ್‌ನಲ್ಲಿ ಸೈನಾ ಸ್ಪೇನ್‌ನ ಮರಿನ್ ವಿರುದ್ಧ ಸೋತು ಬೆಳ್ಳಿ ಪದಕ ಗೆದ್ದಿದ್ದರು. 2 ಕಂಚು, 1 ಬೆಳ್ಳಿ ಸಹಿತ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 3 ಪದಕ ಗೆದ್ದಿರುವ ಸಿಂಧು ಈ ಕೂಟದ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಈವರೆಗೆ ಭಾರತ ಚಿನ್ನ ಅಥವಾ ಬೆಳ್ಳಿ ಪದಕ ಗೆದ್ದಿಲ್ಲ. 1983ರಲ್ಲಿ ಡೆನ್ಮಾರ್ಕ್ ನಲ್ಲಿ ನಡೆದ ಕೂಟದಲ್ಲಿ ಪ್ರಕಾಶ್ ಪಡುಕೋಣೆ ಕಂಚಿನ ಪದಕ ಗೆದ್ದಿದ್ದರು. ಅದೇ ಕೊನೆ, ಬಳಿಕ ಯಾವುದೇ ಸ್ಪರ್ಧಿಗಳಿಗೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಕೆ. ಶ್ರೀಕಾಂತ್ ಈ ಸಲ ನಿರೀಕ್ಷೆ ಹುಟ್ಟಿಸಿದ್ದು, 35 ವರ್ಷಗಳ ಬಳಿಕ ದೇಶಕ್ಕೆ ಪದಕ ತರಬಲ್ಲರೇ ಎನ್ನುವುದನ್ನು ಕಾದು ನೋಡಬೇಕಿದೆ.