Advertisement
ವಿಶ್ವದ ಎರಡನೇ ರ್‍ಯಾಂಕಿನ ಸಾತ್ವಿಕ್-ಚಿರಾಗ್ ಅವರು ಇಂಡೋನೇಶ್ಯದ ಲಿಯೊ ರಾಲಿ ಕಾರ್ನಾಂಡೊ ಮತ್ತು ಡೇನಿಯಲ್ ಮಾರ್ಟಿನ್ ಅವರನ್ನು 21-15, 19-21, 21-9 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು. ಕಳೆದ ಋತುವಿನಲ್ಲಿ ಇಲ್ಲಿ ಚೊಚ್ಚಲ ಬಾರಿ ಕಂಚಿನ ಪದಕ ಜಯಿಸಿದ್ದ ಸಾತ್ವಿಕ್-ಚಿರಾಗ್ ಈ ಋತುವಿನಲ್ಲಿ ಭಾರೀ ಫಾರ್ಮ್ನಲ್ಲಿದ್ದಾರೆ. ನಾಲ್ಕು ಪ್ರಶಸ್ತಿ ಗೆದ್ದಿರುವ ಅವರು ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಕೂಡ ಆಗಿದ್ದಾರೆ.
ಭಾರತದ ತ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ವನಿತಾ ಡಬಲ್ಸ್ ವಿಭಾಗದ ಪ್ರಿ- ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕಠಿನ ಹೋರಾಟ ನಡೆಸಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ. ವಿಶ್ವದ 19ನೇ ರ್‍ಯಾಂಕಿನ ತ್ರೀಸಾ- ಗಾಯತ್ರಿ ಅವರು 42 ನಿಮಿಷಗಳ ಹೋರಾಟದಲ್ಲಿ ಅಗ್ರ ಶ್ರೇಯಾಂಕದ ಚೀನದ ಚೆನ್ ಕ್ವಿಂಗ್ ಚೆನ್ ಮತ್ತು ಜಿಯಾ ಯಿ ಫಾನ್ ಅವರ ವಿರುದ್ಧ 14-21, 9-21 ಗೇಮ್‌ಗಳಿಂದ ಶರಣಾ ದರು.ಭಾರತದ ಜೋಡಿಯು ಚೀನದ ಎದುರಾಳಿಯನ್ನು ಎದುರಿಸುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಜರ್ಮನ್ ಓಪನ್‌ನಲ್ಲೂ ಭಾರತೀಯ ಜೋಡಿ ಎದುರಾಗಿದ್ದು ಸೋತಿದ್ದರು.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಬಾರಿ ಚಿನ್ನ ಗೆದ್ದಿರುವ ಚೆನ್-ಜಿಯಾ ಅವರು ಮೂರು ಬಾರಿ ಬಿಡಬ್ಲ್ಯುಎಫ್ ಪ್ರಶಸ್ತಿ ಗೆದ್ದಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ಬೈ ಸಿಕ್ಕಿತ್ತು. ಆರಂಭದಲ್ಲಿ 5-2 ಮುನ್ನಡೆ ಸಾಧಿಸುವ ಮೂಲಕ ಚೆನ್-ಜಿಯಾ ಅವರು ಉತ್ತಮ ಆರಂಭ ಪಡೆದಿದ್ದರು.