ಕೋಪನ್‌ಹೆಗನ್ (ಡೆನ್ಮಾರ್ಕ್): ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಎಚ್.ಎಸ್. ಪ್ರಣಯ್ ಕಂಚಿನ ಪದಕ ಜಯಿಸಿ ದ್ದಾರೆ. ಶನಿವಾರದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ
ಕುನ್ಲವುತ್ ವಿಟಿಡ್ಸರ್ನ್ ವಿರುದ್ಧ ಪರಾಭವಗೊಂಡ ಅವರು ದೊಡ್ಡ ಪದಕದಿಂದ ವಂಚಿತರಾಗ ಬೇಕಾಯಿತು. ವಿ
ಟಿಡ್ಸರ್ನ್ 18-21, 21-13, 21-14ರಿಂದ ಗೆದ್ದರು.
ಭಾರತಕ್ಕೆ 14ನೇ ಪದಕ
ಇದು ವಿಶ್ವ ಬ್ಯಾಡ್ಮಿಂಟನ್ ಸ್ಪರ್ಧೆ ಯಲ್ಲಿ ಪ್ರಣಯ್‌ಗೆ ಒಲಿದ ಮೊದಲ ಹಾಗೂ ಭಾರತ ಗೆದ್ದ 14ನೇ ಪದಕ.
ಪ್ರಸಕ್ತ ಸೀಸನ್‌ನಲ್ಲಿ ಪ್ರಚಂಡ ಫಾರ್ಮ್ ನಲ್ಲಿರುವ ಎಚ್.ಎಸ್. ಪ್ರಣಯ್ ಕಳೆದ ರಾತ್ರಿಯ ಕ್ವಾರ್ಟರ್ ಫೈನಲ್‌ನಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್, ಆತಿಥೇಯ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಮಣಿಸಿ ಪದಕವನ್ನು ಖಚಿತಗೊಳಿಸಿದ್ದರು. ತವರಿನ ಅಭಿಮಾನಿಗಳ ಅಪಾರ ಬೆಂಬಲದ ಹೊರತಾಗಿಯೂ ಅಕ್ಸೆಲ್ಸೆನ್‌ಗೆ ಮೇಲುಗೈ ಸಾಧಿಸಲಾಗಲಿಲ್ಲ. ಪ್ರಣಯ್ ಈ ಪಂದ್ಯ ವನ್ನು 68 ನಿಮಿಷಗಳ ಹೋರಾಟದ ಬಳಿಕ 13-21, 21-15, 21-16 ಅಂತರದಿಂದ ಗೆದ್ದರು.
ಕೇರಳದ 31 ವರ್ಷದ ಶಟ್ಲರ್ ಎಚ್.ಎಸ್. ಪ್ರಣಯ್ ಪ್ರಸಕ್ತ ಋತುವಿನಲ್ಲಿ ಮಲೇಷ್ಯಾ ಮಾಸ್ಟರ್ ಸೂಪರ್-500 ಚಾಂಪಿಯನ್ ಆಗಿ ಮೂಡಿಬಂದಿದ್ದರು. ಆಸ್ಟ್ರೇಲಿಯನ್ ಓಪನ್-500 ಫೈನಲ್ ಕೂಡ ಪ್ರವೇಶಿಸಿದ್ದರು. ಈಗ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸಾಧನೆ.
ಭಾರತದ ಈವರೆಗಿನ 13 ಪದಕ ಗಳಲ್ಲಿ ಅತೀ ಹೆಚ್ಚು 5 ಪದಕ ಗೆದ್ದ ಸಾಧನೆ ಪಿ.ವಿ. ಸಿಂಧು ಅವರದು. ಇದರಲ್ಲಿ ಒಂದು ಚಿನ್ನದ ಪದಕವೂ ಸೇರಿದೆ. ಜತೆಗೆ 2 ಬೆಳ್ಳಿ, 2 ಕಂಚು ಕೂಡ ಒಲಿದಿದೆ. ಸೈನಾ ನೆಹ್ವಾಲ್ ಎರಡು ಪದಕ (ಬೆಳ್ಳಿ, ಕಂಚು), ಕೆ. ಶ್ರೀಕಾಂತ್ (ಬೆಳ್ಳಿ), ಲಕ್ಷ್ಯ ಸೇನ್ (ಕಂಚು), ಬಿ. ಸಾಯಿ ಪ್ರಣೀತ್ (ಕಂಚು) ಮತ್ತು ಪ್ರಕಾಶ್ ಪಡುಕೋಣೆ (ಕಂಚು) ತಲಾ ಒಂದು ಪದಕ ಜಯಿಸಿದ್ದಾರೆ. ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ-ಅಶ್ವಿನಿ ಪೊನ್ನಪ್ಪ ಮತ್ತು ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.