ಹೊಸದಿಲ್ಲಿ: ಇದೇ ತಿಂಗಳ 19ರಿಂದ 27ರ ತನಕ ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆಯಲಿರುವ ವಿಶ್ವ ಆ್ಯತ್ಲೆ ಟಿಕ್ಸ್ ಚಾಂಪಿಯನ್‌ಶಿಪ್‌ಗಾಗಿ ಭಾರತದ 28 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ. ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತ ಗಾರ ನೀರಜ್ ಚೋಪ್ರಾ ಈ ತಂಡದ ಸಾರಥ್ಯ ವಹಿಸಲಿದ್ದಾರೆ.
ಅಚ್ಚರಿಯೆಂದರೆ, ಆ್ಯತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ ಬದಲು ಕ್ರೀಡಾ ಸಚಿವಾಲಯ ಈ ತಂಡವನ್ನು ಪ್ರಕಟಿಸಿದ್ದು. ಏಷ್ಯನ್ ದಾಖಲೆ ಹೊಂದಿರುವ ಶಾಟ್‌ಪುಟರ್ ತೇಜಿಂದರ್‌ಪಾಲ್ ಸಿಂಗ್ ತೂರ್ ತೊಡೆಯ ಸ್ನಾಯು ಸೆಳೆತದಿಂದಾಗಿ ಈ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ.
ರಾಷ್ಟ್ರೀಯ ದಾಖಲೆ ಹೊಂದಿರುವ ಹೈಜಂಪರ್ ತೇಜಸ್ವಿನ್ ಶಂಕರ್, 800 ಮೀ. ಓಟಗಾರ ಕೆ.ಎಂ. ಚಂದ, 20 ಕಿ.ಮೀ. ರೇಸ್ ವಾಕರ್ ಪ್ರಿಯಾಂಕಾ ಗೋಸ್ವಾಮಿ ಕೂಡ ಈ ಕೂಟವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಅನಂತರದ ಏಷ್ಯಾಡ್ ಪಂದ್ಯಾವಳಿಗೆ ಹೆಚ್ಚಿನ ಗಮನ ಕೊಡುವುದು ಇವರ ಉದ್ದೇಶ.
ಡೈಮಂಡ್ ಲೀಗ್ ಚಾಂಪಿಯನ್ ಆಗಿರುವ ನೀರಜ್ ಚೋಪ್ರಾ ಬುಡಾಪೆಸ್ಟ್ ಕೂಟದಲ್ಲೂ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 2022ರ ಯೂಜೀನ್ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಬೆಳ್ಳಿ ಜಯಿಸಿದ್ದರು.
ಪುರುಷರ ತಂಡ: ಕೃಷ್ಣ ಕುಮಾರ್ (800 ಮೀ.), ಅಜಯ್ ಕುಮಾರ್ ಸರೋಜ್ (1,500 ಮೀ.), ಸಂತೋಷ್ ಕುಮಾರ್ ತಮಿಳರಸನ್ (400 ಮೀ. ಹರ್ಡಲ್ಸ್), ಅವಿನಾಶ್ ಮುಕುಂದ್ ಸಬ್ಲೆ (3,000 ಮೀ. ಸ್ಟೀಪಲ್‌ಚೇಸ್), ಸರ್ವೇಶ್ ಅನಿಲ್ ಕುಶಾರೆ (ಹೈಜಂಪ್), ಜೆಸ್ವಿನ್ ಅಲ್ಡಿನ್, ಮುರಳಿ ಶ್ರೀಶಂಕರ್ (ಲಾಂಗ್‌ಜಂಪ್), ಪ್ರವೀಣ್ ಚಿತ್ರವೇಲ್ (ಟ್ರಿಪಲ್ ಜಂಪ್), ಅಬ್ದುಲ್ಲ ಅಬೂಬಕರ್ (ಟ್ರಿಪಲ್ ಜಂಪ್), ಎಲೊªàಸ್ ಪೌಲ್ (ಟ್ರಿಪಲ್ ಜಂಪ್), ನೀರಜ್ ಚೋಪ್ರಾ, ಡಿ.ಪಿ. ಮನು, ಕಿಶೋರ್ ಕುಮಾರ್ ಜೀನ (ಜಾವೆಲಿನ್ ತ್ರೊ), ಆಕಾಶ್‌ದೀಪ್ ಸಿಂಗ್, ವಿಕಾಸ್ ಸಿಂಗ್, ಪರಮ್‌ಜೀತ್ ಸಿಂಗ್ (20 ಕಿ.ಮೀ. ರೇಸ್ ವಾಕ್), ರಾಮ್‌ಬಾಬು (35 ಕಿ.ಮೀ. ರೇಸ್‌ವಾಕ್), ಅಮೋಜ್ ಜೇಕಬ್, ಮುಹಮ್ಮದ್ ಅಜ್ಮಲ್, ಮುಹಮ್ಮದ್ ಅನಾಸ್, ರಾಜೇಶ್ ರಮೇಶ್, ಅನಿಲ್ ರಾಜಲಿಂಗಂ, ಮಿಜೊ ಚಾಕೊ ಕುರಿಯನ್ (4/400 ಮೀ. ರಿಲೇ).
ವನಿತಾ ತಂಡ: ಜ್ಯೋತಿ ಯರ್ರಾಜಿ (100 ಮೀ. ಹರ್ಡಲ್ಸ್), ಪಾರುಲ್ ಚೌಧರಿ (3,000 ಮೀ. ಸ್ಟೀಪಲ್‌ಚೇಸ್), ಶೈಲಿ ಸಿಂಗ್ (ಲಾಂಗ್‌ಜಂಪ್), ಅನ್ನು ರಾಣಿ (ಜಾವೆಲಿನ್ ತ್ರೊ), ಭಾವನಾ ಜಾಟ್ (20 ಕಿ.ಮೀ. ರೇಸ್‌ವಾಕ್).