Advertisement
ಧಾರವಾಡದ ರಂಗಾಯಣ ವತಿಯಿಂದ ಖಾಸಗಿ ರೆಸಾರ್ಟ್‌ವೊಂದರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಂಗಭೂಮಿ ಮತ್ತು ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ರಂಗ ವಿಮರ್ಶಕ ತ್ಯಾಗಟೂರ ಸಿದ್ಧೇಶ ಮಾತನಾಡಿ, ರಂಗಭೂಮಿ ಜಗತ್ತಿನ ಎಲ್ಲ ಕ್ರಾಂತಿಗಳ ಕುರಿತು ಜನಜಾಗೃತಿ ಮೂಡಿಸಿದ ಮಾಧ್ಯಮ. ಇಂತಹ ಮಾಧ್ಯಮ ಆಧುನಿಕ ಮಾಧ್ಯಮಗಳ ಸುಳಿಗೆ ಸಿಲುಕಿ ಅವಸಾನದತ್ತ ಸಾಗುತ್ತಿದ್ದು, ಉಳಿಸುವ ಕೈಂಕರ್ಯ ನಡೆಯಬೇಕು ಎಂದರು. ಈ ಹಿಂದೆ ರಂಗಭೂಮಿ, ಸಾಂಸ್ಕೃತಿಕ ಕಲೆಗೆ ಪತ್ರಿಕೆಗಳು ಒಂದೊಂದು ಪುಟ ಮೀಸಲಿಡುತ್ತಿದ್ದವು. ಆದರೆ ಇಂದು ಬಹುತೇಕ ಪತ್ರಿಕೆಗಳಲ್ಲಿ ಸಾಂಸ್ಕೃತಿಕ ವರದಿಗೆ ಮನ್ನಣೆ ನೀಡುತ್ತಿಲ್ಲ. ಕಲಾವಿದರಿಗೆ ಉತ್ತೇಜಿಸಲು ಪ್ರಚಾರ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ, ಧಾರವಾಡ ರಂಗಾಯಣ ಏಳು ಜಿಲ್ಲೆಗಳ ಆಸ್ತಿ. ಇದನ್ನು ಬೆಳೆಸುವಂತಹ ಕೈಂಕರ್ಯ ಮಾಡಿದ್ದು, ಮುಂದೆಯೂ ಉತ್ತಮ ಚಟುವಟಿಕೆ ಆಯೋಜಿಸುವ ಬಗ್ಗೆ ತಿಳಿಸಿದರು.
ನಂತರ ನಡೆದ ಗೋಷ್ಠಿಯಲ್ಲಿ ರಂಗಭೂಮಿ ಗೃಹಿಕೆ-ಅವಲೋಕನ-ವಿಮರ್ಶೆ ಮತ್ತು ಮಾಧ್ಯಮ ಬಗ್ಗೆ ಪತ್ರಕರ್ತ ಡಾ| ಬಂಡು ಕುಲಕರ್ಣಿ, ರಂಗಭೂಮಿ ಮತ್ತು ಮಾಧ್ಯಮ-ಸಮಕಾಲಿನ ಸವಾಲುಗಳು ಬಗ್ಗೆ ತ್ಯಾಗಟೂರ ಸಿದ್ಧೇಶ ವಿಷಯ ಮಂಡಿಸಿದರು. ರವಿ ಕುಲಕರ್ಣಿ ನಿರ್ದೇಶನದಲ್ಲಿ “ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕ ಪ್ರದರ್ಶನಗೊಂಡಿತು.