Advertisement

ಹೊಸ ವರ್ಷಕ್ಕೆ ಕೃತಿ- ಸ್ಫೂರ್ತಿ

12:30 AM Jan 20, 2019 | Team Udayavani |

ಹೊಸ ವರ್ಷದ ಹೊತ್ತಿಗೆ ಪ್ರತಿಜ್ಞೆಗಳನ್ನು, ಸಂಕಲ್ಪಗಳನ್ನು ಮಾಡುತ್ತೇವೆ. ಕುಡಿತ ಬಿಡುತ್ತೇನೆ, ಧೂಮಪಾನ ಮಾಡುವುದಿಲ್ಲ, ತಡರಾತ್ರಿಯ ತನಕ ಗೆಳೆಯರ ಜೊತೆ ಮೋಜು ಮಾಡುವುದಿಲ್ಲ- ಹೀಗೆ. ಹೇಳುವುದು ಸುಲಭ, ವಚನಗಳನ್ನು ಮರೆತುಬಿಡುವುದು ಮತ್ತೂ ಸುಲಭ ! ರಾಜ್ಯದ ಖ್ಯಾತ ಮನೋವೈದ್ಯರಲ್ಲಿ ಒಬ್ಬರಾದ ಡಾ. ಪಿ. ವಿ. ಭಂಡಾರಿಯವರ ಬಾಳುವಂಥ ಹೂವೇ, ಬಾಡುವಾಸೆ ಏಕೆ ಪುಸ್ತಕ ಕಳೆದ ಜನವರಿ ಒಂದನೆಯ ತಾರೀಕಿನಂದು ಬಿಡುಗಡೆಯಾಗಿದೆ. ಕಾವ್ಯಾತ್ಮಕ ಹೆಸರಿನ ಈ ಪುಸ್ತಕ ಕೆಟ್ಟ ಚಟಗಳಿಗೆ ದಾಸರಾದವರ ಪಾಲಿಗೆ ಹಿತೋಪದೇಶಿಯಾದ ಕಾವ್ಯವಾಗಿದೆ.

Advertisement

ಶೀರ್ಷಿಕೆಯೇ ಸೂಚಿಸುವಂತೆ ಕುಡಿತದ ಚಟ ಅಂಟಿಸಿಕೊಂಡ ವರನ್ನು ಗುರಿಯಾಗಿಟ್ಟು ಬರೆದ ಪುಸ್ತಕ. ಇಲ್ಲಿನ ಹತ್ತಾರು ಸ್ಫೂರ್ತಿಯುತ ಕತೆಗಳು ಕೇವಲ ಕುಡಿತದ ಚಟ ಇರುವವರಿಗೆ ನಿಜ ಮಾರ್ಗದರ್ಶಕ ಮಾತ್ರವಲ್ಲ , ಬದುಕಿನಲ್ಲಿ ಸಾಕಷ್ಟು ಬಾರಿ ಮಾಡಿದ ಸಂಕಲ್ಪಗಳನ್ನು , ಪ್ರತಿಜ್ಞೆಗಳನ್ನು ನೆನಪಿಸಿಕೊಳ್ಳುವಲ್ಲಿಯೂ ಉಪಕಾರಿ.

ಡಾ. ಪಿ.ವಿ. ಭಂಡಾರಿ ಮತ್ತು ಸಹೋದ್ಯೋಗಿ ನಾಗರಾಜ್‌ಮೂರ್ತಿ ತಮ್ಮ ವೈದ್ಯಕೀಯ ವೃತ್ತಿಯ ಸಮಯದಲ್ಲಿ ಕಂಡು, ಚಿಕಿತ್ಸೆ ನೀಡಿ, ನೈಜ ಅನುಭವದಲ್ಲಿ ಬರೆದ ಬರಹಗಳಿವು. ಆಪ್ತ ಭಾಷೆಯಲ್ಲಿ, ಸಾಮಾನ್ಯರಿಗೂ ನಿಲುಕುವ ಧಾಟಿಯಲ್ಲಿ ಇಲ್ಲಿನ ಕತೆಗಳ ನಿರೂಪಣೆ ಇದೆ. ಕುಡಿತದ ಚಟ ಬಿಡಬೇಕು ಎಂದು ಪ್ರತಿಯೊಬ್ಬ ಕುಡುಕನೂ ಅಂದುಕೊಳ್ಳುತ್ತಾನೆ. ಅದಕ್ಕೆ ಕುಟುಂಬ- ಸಮಾಜದ ಸಹಕಾರವಿರುವುದಿಲ್ಲ. ಆತನ ಕುಟುಂಬ, ಗೆಳೆಯರು, ಹೆತ್ತವರು- ಒಟ್ಟಾರೆ ಇಡೀ ಸಮಾಜ ಯಾವ ರೀತಿಯಲ್ಲಿ ಅವನಿಗೆ /ಅವಳಿಗೆ ನೆರವಾಗಬಹುದು ಎಂಬ ಮಾಹಿತಿಯೂ ಇಲ್ಲಿ ಅಡಕವಾಗಿದೆ. 

ಮಾನವೀಯ, ಸಾಮಾಜಿಕ ಕಳಕಳಿಯ ಕೃತಿ ಇದು.

ಬಾಳುವಂಥ ಹೂವೇ, ಬಾಡುವಾಸೆ ಏಕೆ?
(ಮದ್ಯವ್ಯಸನ ರೋಗ-ಪರಿಣಾಮಗಳ ಕುರಿತ ಲೇಖನಗಳು)
ಲೇ.: ಡಾ|| ಪಿ.ವಿ.ಭಂಡಾರಿ, ನಾಗರಾಜ್‌ ಮೂರ್ತಿ
ಪ್ರ.: ಸಾವಣ್ಣ ಎಂಟರ್‌ಪ್ರೈಸಸ್‌, ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು-560004
ಮೊಬೈಲ್‌: 8026607011, 9036312786
ಮೊದಲ ಮುದ್ರಣ: 2019 ಬೆಲೆ: ರೂ. 160

Advertisement

– ರಹೀಂ ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next