Advertisement

ವಿವಿಧ ಬೇಡಿಕೆ ಈಡೇರಿಕೆಗೆ ಕಾರ್ಮಿಕರ ಆಗ್ರಹ

05:43 PM May 02, 2020 | Suhan S |

ಬೈಲಹೊಂಗಲ: ಮೇ ದಿನಾಚರಣೆಯು ಹಲವಾರು ಮಹನೀಯರ ತ್ಯಾಗ, ಬಲಿದಾನಗಳ ಪ್ರತೀಕವಾಗಿದ್ದು, ಅದರ ಪ್ರತಿಫಲವಾಗಿ ಈವತ್ತು ಕಾರ್ಮಿಕರೆಲ್ಲರೂ 8 ಗಂಟೆ ಅವಧಿಯ ಕೆಲಸವನ್ನು ನಿರ್ವಹಿಸುತ್ತಿದ್ದಾರೆಂದು ಕಾರ್ಮಿಕ ಮುಖಂಡ ರುದ್ರಗೌಡ ಪಾಟೀಲ ಹೇಳಿದರು.

Advertisement

ಶುಕ್ರವಾರ ತಾಲೂಕಿನ ಅಮಟೂರ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಗ್ರಾಮ ಪಂಚಾಯ್ತಿ ನೌಕರರು, ಅಂಗನವಾಡಿ, ಆಶಾ, ಅಕ್ಷರ ದಾಸೋಹ ಕಾರ್ಯಕರ್ತೆಯರು ಕೂಡಿಕೊಂಡು ಮೇ-1 ಕಾರ್ಮಿಕ ದಿನಾಚರಣೆ ಅಂಗವಾಗಿ ಸಾಂಕೇತಿಕವಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಿ ಮಾತನಾಡಿ, ಎಲ್ಲ ಕಾರ್ಮಿಕರು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಹೋರಾಡಿ ಬೇಡಿಕೆಗಳನ್ನ ಈಡೇರಿಸಿ ಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.

ರಾಜ್ಯ ಸಮಿತಿಯ ಕರೆಯ ಮೇರೆಗೆ ಸಾಂಕೇತಿಕವಾಗಿ ಅತ್ಯಂತ ಸರಳವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಮೇ ದಿನ ಆಚರಿಸಲಾಯಿತು. ಪಿಡಿಓಗಳಾದ ಎಸ್‌.ಎಮ್‌. ಹಾರೂಗೊಪ್ಪ, ಎಲ್‌.ಎಮ.ವಗ್ಗರ, ಪಿ.ಎಮ್‌.ಕಮ್ಮಾರ, ಸಿಬ್ಬಂದಿ ಮಹಾಂತೇಶ, ವರ್ಧಮಾನ, ಬಸವರಾಜ, ಬಸವ್ವ ದೊಡಮನಿ, ಶಕುಂತಲಾ ಹರ್ತಿ, ದೀಪಾ ಮುತವಾಡ, ಪಾರವ್ವ ನಾಗನೂರ, ಅನಸೂಯಾ ನಾವಲಗಿ, ಮಹಾದೇವಿ ಈಟಿ, ಸುಲೋಚನಾ ಬೇವಿನಕೊಪ್ಪಮಠ, ಲಕ್ಷ್ಮೀ ತಳವಾರ, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next