Advertisement

ಮನೆ ಹಕ್ಕು  ಪತ್ರ ನೀಡಲು ಮೀನಮೇಷ: ಆಕ್ರೋಶ

03:33 PM Oct 03, 2022 | Team Udayavani |

ಗುಂಡ್ಲುಪೇಟೆ: ಪೌರ ಕಾರ್ಮಿಕರನ್ನು ಒಕ್ಕಲೆಬ್ಬಿಸಬೇಕು ಎಂಬ ಉದ್ದೇಶದಿಂದ ತಾಲೂಕಿನ ತೆರಕಣಾಂಬಿ, ಬೇಗೂರು ಗ್ರಾಮದ ಪೌರ ಕಾರ್ಮಿಕ ಕುಟುಂಬಗಳು ವಾಸವಿರುವ ಮನೆಗಳಿಗೆ ಹಕ್ಕು ಪತ್ರ ನೀಡದೆ ಇರುವುದು ಖಂಡನೀಯ ಎಂದು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್‌. ರಾಜು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ಟಿಎಪಿಸಿಎಂಎಸ್‌ ಕಚೇರಿ ರಸ್ತೆಯ ತಾಪಂ ಸಭಾಂಗಣದಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಶ್ರೀಕಂಠರಾಜೇ ಅರಸ್‌ ಹಾಗೂ ಪೌರ ಕಾರ್ಮಿಕರ ಕುಂದು ಕೊರತೆ ಸಭೆಗೂ ಮುನ್ನ ಮಾತನಾಡಿ, ತಾಲೂ ಕಿನ ಬೇಗೂರು ಪೌರ ಕಾರ್ಮಿಕರ ಕಾಲೋ ನಿಯ ಸರ್ವೆ ನಂ.93ರಲ್ಲಿ 5 ದಶಕಗಳಿಂದ ವಾಸ ಮಾಡುತ್ತಿರುವ ಏಳು ಕುಟುಂಬಗಳಿಗೆ ಹಕ್ಕುಪತ್ರ, ಸ್ವಾಧೀನ ಪತ್ರವಾಗಲೀ ನೀಡಿಲ್ಲ. ಇದನ್ನು ಗಮನಿಸಿದರೆ ಕೆಲವು ಪ್ರಭಾವಿಗಳು ಪೌರ ಕಾರ್ಮಿಕರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದರೂ ಕೂಡ ಪೌರ ಕಾರ್ಮಿಕರ ಹಕ್ಕು ಪತ್ರ, ಸ್ವಾಧೀನ ಪತ್ರ ವಿತರಣೆಗೆ ಅಧಿಕಾರಿಗಳು ಮುಂದಾಗಿಲ್ಲ. ಆದ್ದರಿಂದ ಕೂಡಲೇ ಹಕ್ಕು ಪತ್ರ, ಸ್ವಾಧೀನ ಪತ್ರ ನೀಡದಿದ್ದಲ್ಲಿ ಪೌರ ಕಾರ್ಮಿಕರ ರಾಜ್ಯ ಸಂಘ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ತಾಲೂಕಿನ 11 ಗ್ರಾಪಂಗಳಲ್ಲಿ ಪೌರ ಕಾರ್ಮಿಕರ ಮನೆಗಳಿಲ್ಲ. ಕನಿಷ್ಠ ವೇತನವಿಲ್ಲ. ಯೋಗ್ಯ ಮನೆ ನಿರ್ಮಿಸಿ ಕೊಟ್ಟಿಲ್ಲ. ಪ್ರಧಾನ ಮಂತ್ರಿ ಭೀಮಾ ಯೋಜನೆಯಡಿ ಪೌರ ಕಾರ್ಮಿಕರಿಗೆ ವಿಮೆ ಮಾಡಿಸುವುದು. ಗುರುತಿನ ಚೀಟಿ, ಬಾಕಿ ವೇತನ, ಸೇವಾ ಪುಸ್ತಕ ತೆರೆತ್ತಿಲ್ಲ ಎಂದು ಹೇಳಿದರು.

ರಾಜ್ಯ ಕಾರ್ಯಾ ಧ್ಯಕ್ಷ ಮಂಚಯ್ಯ, ಉಪಾಧ್ಯಕ್ಷ ಜಿ.ಎನ್‌. ಚಾಮ, ಸಂಘದ ದಿನೇಶ್‌ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next