Advertisement

ಕಾರ್ಮಿಕರು ಸ್ವಂತ ಖರ್ಚಿನಲ್ಲೇ ರಾಜ್ಯಕ್ಕೆ ಬರಬೇಕು: ಡಿಸಿಎಂ ಕಾರಜೋಳ

08:17 AM May 03, 2020 | keerthan |

ಕಲಬುರಗಿ: ದೇಶದ ಯಾವುದೇ ರಾಜ್ಯದಲ್ಲಿರುವ ಕಾರ್ಮಿಕರು ಮತ್ತು ವಲಸೆಗಾರರು ತಂತಮ್ಮ ಖರ್ಚಿನಲ್ಲಿ ಬರಬೇಕೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ನಗರದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಂತಾರಾಜ್ಯ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ಸರ್ಕಾರದ ಮಾರ್ಗಸೂಚಿಯಂತೆ ತಮ್ಮ ರಾಜ್ಯಗಳಿಗೆ ಮರಳಬಹುದು. ಈ ಸಂಬಂಧ ರಾಜ್ಯ ಸರ್ಕಾರ 11 ಜನ ಅಧಿಕಾರಿಗಳ ತಂಡ ರಚಿಸಿದೆ ಎಂದರು.

ಬೇರೆ ರಾಜ್ಯಗಳಿಂದ ಬರುವವರು ಯಾರೇ ಆಗಲಿ ತಮ್ಮ ಸ್ವಂತ ಖರ್ಚಿನಲ್ಲಿ ಬರಬೇಕು. ಸರ್ಕಾರ ವಾಹನಗಳ ವ್ಯವಸ್ಥೆ ಮಾಡುವುದಿಲ್ಲ. ಕಾರ್ಮಿಕರು ಸಾಮೂಹಿಕವಾಗಿ ಒಂದೇ ಸ್ಥಳಕ್ಕೆ ಬರುವವರಿಗೆ ಬೇಕಾದರೆ ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ. ಇದರ ವೆಚ್ಚವನ್ನು ಅವರೇ ಭರಿಸಬೇಕೆಂದು ತಿಳಿಸಿದರು.

ಹಾಗೆ ಬರುವ ಕಾರ್ಮಿಕರನ್ನು ಗಡಿಯಲ್ಲೇ ತಡೆದು ತಪಾಸಣೆ ‌ನಡೆಸಬೇಕು. ನಂತರ ಅವರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಮಾಡಬೇಕೆಂದು ಡಿಸಿಎಂ ಕಾರಜೋಳ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next