ಬೆಂಗಳೂರು: ಬಿಡದಿಯಲ್ಲಿರುವ ಟೊಯೊಟಾಕಿರ್ಲೋಸ್ಕರ್ ಮೋಟಾರ್ ಕಾರ್ಖಾನೆಯು ಎರಡನೇ ಬಾರಿಗೆ ಘೋಷಿಸಿರುವ ಲಾಕೌಟ್ ವಾಪಸ್ ಪಡೆಯಬೇಕು ಹಾಗೂ ಅಮಾನತುಗೊಳಿಸಿರುವ ಎಲ್ಲ ಕಾರ್ಮಿಕರನ್ನುಕೂಡಲೇ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿಯು ಒತ್ತಾಯಿಸಿದೆ.
ಈ ಸಂಬಂಧ ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಟೊಯೊಟಾ ಕಾರ್ಖಾನೆ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಆಗುತ್ತಿರುವ ಹಿಂಸೆ, ಅನ್ಯಾಯವನ್ನು ಪ್ರಶ್ನಿಸಿದ ಕಾರಣಕ್ಕಾಗಿ 40ಕ್ಕೂ ಅಧಿಕ ಕಾರ್ಮಿಕ ಮುಖಂಡರನ್ನು ಕಾರ್ಖಾನೆಯಿಂದ ಅಮಾನತುಗೊಳಿಸಲಾಗಿದೆ. ಸಂಸ್ಥೆ ಇಂತಹ ನಿರ್ಧಾರ ಕಾರ್ಮಿಕರಲ್ಲಿ ಸಾಕಷ್ಟು ಮಾನಸಿಕ ಹಿಂದೆ ನೀಡುತ್ತಿದೆ. ಆದಷ್ಟು ಬೇಗ ಎಲ್ಲರನ್ನು ಕೆಲಸಕ್ಕೆ ಮರು ನಿಯೋಜಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆಯಲ್ಲಿ ಕೆಲಸದ ಅವಧಿಯಲ್ಲಿ ತೀರಾ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಎರಡು ಗಂಟೆ ನಿರಂತರ ಕೆಲಸದ ಬಳಿಕ ಕೇವಲ 10 ನಿಮಿಷ ವಿಶ್ರಾಂತಿ ನೀಡಲಾಗುತ್ತದೆ. ಈ ಅವಧಿಯಲ್ಲಿನೀರು ಕುಡಿಯಲು ಹಾಗೂ ಶೌಚಾಲಯಕ್ಕೆ ತೆರಳಲು ಸಮಯವೂ ಸಾಲದು. ಮಧ್ಯದಲ್ಲಿ ನೀರುಕುಡಿಯಲು ಹೋದರೆ ವೇತನ ಕಡಿತ ಮಾಡುತ್ತಾರೆ. ಕೆಲಸದ ಒತ್ತಡಹೆಚ್ಚಾಗಿದ್ದು, ಹೆಚ್ಚಿನ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಮಿಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಾರ್ಮಿಕ ಸಂಘದ ಪ್ರತಿನಿಧಿಗೆ ಅಮಾನತು ಶಿಕ್ಷೆ ನೀಡಲಾಗಿದೆ ಎಂದು ದೂರಿದರು.
ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಕಾರ್ಮಿಕರನ್ನು ಪ್ರಶ್ನಿಸಿದ್ದಕ್ಕೆಅಮಾನತುಗೊಳಿಸಿದ್ದನ್ನುಖಂಡಿಸಿಪ್ರತಿಭಟನೆ ನಡೆಸುತ್ತಿದ್ದವು. ಆ ವೇಳೆ ಏಕಾಏಕಿ ನ.9ರಂದು ಕಾರ್ಖಾನೆಯಲ್ಲಿ ಲಾಕೌಟ್‌ಘೋಷಿಸಿದರು. ಅನಂತರ ಸರ್ಕಾರ ಕ್ಕೆ ಮನವಿ ಮಾಡಿದ ಸಂದರ್ಭದಲ್ಲಿ, ಲಾಕೌಟ್ ವಾಪಸ್ ಪಡೆಯುವಂತೆ ಹೇಳಿದ್ದರು. ಆದರೆ, ಕಾರ್ಖಾನೆಯ ಆಡಳಿತ ಮಂಡಳಿಯು ಕಾರ್ಮಿಕರನ್ನು ಒಳಗೆ ಬಿಟ್ಟುಕೊಳ್ಳದೇ 2ನೇಬಾರಿಗೆ ಲಾಕೌಟ್ ಘೋಷಿಸಿದ್ದಾರೆ.ಆದಷ್ಟು ಬೇಗ ಲಾಕೌಟ್ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರ್ ಮಾತನಾಡಿ, ಸರ್ಕಾರದ ಸಹಕಾರದಿಂದ ಕಾರ್ಖಾನೆಯನ್ನು ಸ್ಥಾಪಿಸಿರುವ ಬಂಡವಾಳ ಶಾಹಿಯೊಬ್ಬರು ಸರ್ಕಾರದ ಆದೇಶವನ್ನೇ ಉಲ್ಲಂ ಸಿ ಸರ್ವಾಧಿಕಾರತ್ವವನ್ನು ಪ್ರದರ್ಶಿಸುತ್ತಿದ್ದಾರೆ. ಇಷ್ಟಾದರೂ ಸರ್ಕಾರವು ಕೇವಲ ಆದೇಶವನ್ನು ನೀಡಿ, ಮೌನಕ್ಕೆ ಶರಣಾಗಿದ್ದು, ಪರೋಕ್ಷವಾಗಿ ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ ವರ್ತಿಸುತ್ತಿದೆ. ಕೂಡಲೇ ಎಲ್ಲರನ್ನೂ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಹಾಗೂ ಲಾಕೌಟ್ ವಾಪಸ್ ಪಡೆಯಬೇಕು ಎಂದರು. ಎಐಟಿಯುಸಿನ ವಿಜಯ ಭಾಸ್ಕರ್, ಕಾರ್ಮಿಕ ಮುಖಂಡರಾದ ಶಿವಶಂಕರ್, ಪುಟ್ಟಸ್ವಾಮಿ ಇದ್ದರು.
ವಿಧಾನಸೌಧ ಚಲೋ :
ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕಾರ್ಖಾನೆಯು ಮತ್ತೂಂದು ಬಾರಿ ಲಾಕೌಟ್ ಘೋಷಿಸಿರುವುದು ಅಕ್ರಮವಾಗಿದೆ. ಹೀಗಾಗಿ,ಕಾರ್ಖಾನೆಯ ಆಡಳಿತ ಮಂಡಳಿಯುಕೂಡಲೇ ಲಾಕೌಟ್ ಹಿಂಪಡೆಯಬೇಕು ಹಾಗೂ ಹೊರಗಿಟ್ಟಿರುವ ಎಲ್ಲಕಾರ್ಮಿಕರನ್ನು ವಾಪಸ್ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ವಾರ ಬಿಡದಿಯಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುತ್ತದೆ ಎಂದುಕಾರ್ಮಿಕರ ಸಂಘ ಎಚ್ಚರಿಕೆ ನೀಡಿದೆ.
ರೈತ ಸಂಘದ ಎಚ್ಚರಿಕೆ! :
ಟೊಯೋಟಾ ಕಾರ್ಮಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಅಥವಾ ಜಿಲ್ಲಾಧಿಕಾರಿಗಳು ಪ್ರಯತ್ನ ಪಡುತ್ತಿಲ್ಲ ಎಂದು ರೈತ ಸಂಘದ ಪ್ರಮುಖರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಮುಂದಿನ ಸೋಮವಾರದೊಳಗೆ ಬಗೆಹರಿಸದಿದ್ದಲ್ಲಿ,ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಜಿಲ್ಲಾಧಿಕಾರಿಗಳಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತ ಮುಖಂಡರು ಎಚ್ಚರಿಸಿದ್ದಾರೆ.
ಟೊಯೊಟಾ ಕಾರ್ಖಾನೆಯು ಕಾರ್ಮಿಕರನ್ನುಯಂತ್ರಗಳಂತೆ ಬಳಸಿಕೊಳ್ಳುತ್ತಿದೆ. ಮನುಷ್ಯತ್ವವಿಲ್ಲದೇ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಪ್ರಶ್ನಿಸುವವರು ಏಕಾಏಕಿ ಹೊರಗೆಹಾಕುವ ಮೂಲಕ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ.
–ಮೀನಾಕ್ಷಿ ಸುಂದರ್, ಸಿಐಟಿಯು ಪ್ರಧಾನ ಕಾರ್ಯದರ್ಶಿ