Advertisement

ಹಿಂದೂ ಸಂಘಟನೆಗೆ ಶ್ರಮಿಸಿದ ಮಹಾತ್ಮರು

10:34 AM Apr 06, 2022 | Team Udayavani |

ಮಾನ್ವಿ: ಹಿಂದೂ ಸಮಾಜ ಅಭಿವೃದ್ಧಿಗೊಳಿಸಲು, ಸಂಘಟಿಸಲು ಎಲ್ಲಾ ಮಹಾತ್ಮರು ಶ್ರಮಿಸಿದ್ದಾರೆಂದು ಮೂಡಲಗಿ ಧ್ಯಾನ ಯೋಗ ಪೀಠದ ಅಧ್ಯಕ್ಷ ದಯಾನಂದ ಸವದಿ ತಿಳಿಸಿದರು.

Advertisement

ಪಟ್ಟಣದ ಬಸವ ವೃತ್ತದಲ್ಲಿ ಆಗಮಿಸಿದ ಶಿವಜ್ಯೋತಿ ರಥಯಾತ್ರೆಯಲ್ಲಿ ಮಾತನಾಡಿದ ಅವರು, ಇಂದು ಅಗತ್ಯವಿರುವ ಸೌಲಭ್ಯ, ಮೀಸಲಾತಿ ಹೆಸರಿನಲ್ಲಿ ಇಂದು ವೀರಶೈವ ಲಿಂಗಾಯತ ಸಮಾಜ ಒಡೆಯುವ ಪ್ರಯತ್ನಮಾಡಲಾಗುತ್ತಿದೆ. ಅಖಂಡ ಸಮಾಜ ಒಡೆದು ರಾಜಕೀಯ ಲಾಭ ಪಡೆಯಲು ಕೆಲವರು ಹೊರಟಿದ್ದಾರೆ ಎಂದು ಹೇಳಿದರು.

ಆಧ್ಯಾತ್ಮಿಕತೆ ಅಡಿಯಲ್ಲಿ ಮೂಲ ಪರಂಪರೆಯನ್ನು ಉಳಿಸಿಕೊಂಡು ಸಮಾಜ ಬಲಪಡಿಸುವ ಉದ್ದೇಶದಿಂದ ಯುಗಾದಿ ಹಬ್ಬದ ಪ್ರಯುಕ್ತ ನಾಡಿನಲ್ಲಿ ಭಕ್ತಿ-ಸಂಸ್ಕಾರ ಜಾಗೃತಿ ಮತ್ತು ನಾಡಿನಲ್ಲಿ ಸುಖ-ಶಾಂತಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಿಂದ ಬೆಳಗಾವಿ ಜಿಲ್ಲೆಯ ಶ್ರೀ ಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನವರೆಗೆ 11 ದಿನಗಳವರೆಗೆ ಶಿವಜ್ಯೋತಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಿವಜ್ಯೋತಿ ರಥಯಾತ್ರೆಯನ್ನು ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಬರಮಾಡಿಕೊಂಡು ನೀರಮಾನ್ವಿ ಗ್ರಾಮ ಮಾರ್ಗದ ಮೂಲಕ ನೂರಾರು ಭಕ್ತರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಅಖೀಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಅರುಣ ಚಂದಾ, ರಾಜೇಶ ಮಲ್ಲಟ್‌, ಶಿವಕುಮಾರ, ಸುವರ್ಣಗಿರಿ ಮಠದ ಶ್ರೀ ಚಂದ್ರಶೇಖರಯ್ಯ ಸ್ವಾಮಿ, ಡಾ|ಚಂದ್ರಶೇಖರಯ್ಯ ಸ್ವಾಮಿ, ಡಾ|ಶರಣಪ್ಪ ಬಲಟ್ಟಗಿ, ಡಾ|ಬಸವಪ್ರಭು ಪಾಟೀಲ್‌ ಬೆಟ್ಟದೂರು, ನಯೋಪ್ರಾ ಅಧ್ಯಕ್ಷ ಶರಣಪ್ಪ ನಕ್ಕುಂದಿ, ಸಂತೋಷ ಹೂಗಾರ, ವೀರನಗೌಡ, ಶ್ರೀಕಾಂತ ಗೂಳಿ, ಗುರುಸಿದ್ದನಗೌಡ ಕಣ್ಣೂರು, ಸೂಗೂರಯ್ಯಸ್ವಾಮಿ, ತಿಮ್ಮರೆಡ್ಡಿ ಭೋಗವತಿ, ಸಿದ್ದನಗೌಡ ಆಲ್ದಾಳ್‌, ಹರೀಶ್‌, ಹೆಚ್‌.ಮೌನೇಶ, ಹನುಮನಗೌಡ, ಸುರೇಶ ನಾಡಗೌಡ, ಚಂದ್ರಮೌಳೇಶ್ವರ, ಅಮರೇಶ, ವೈ. ಬಸವನಗೌಡ ಸೇರಿದಂತೆ ಸಮಾಜದ ಮುಖಂಡರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next