ಕಾರ್ಕಳ: ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಪೂರಕ ವಾತಾವರಣ ಇದೆ. ಕಾರ್ಯಕರ್ತರು ಈ ಪರಿಸ್ಥಿತಿಯ ಲಾಭ ಪಡೆದು ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಹೇಳಿದರು.
ಬೋಳದ ಮೇಲಂಗಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಸಿದ್ದರಾಮಯ್ಯ ಅವರದು ಐತಿಹಾಸಿಕ ಸಾಧನೆಯ ಸರಕಾರ. ಪ್ರತಿ ಯೋಜನೆ ಸಮಾಜದ ಪ್ರತಿಯೊಂದು ವರ್ಗವನ್ನು ತಲುಪಿದೆ. ಆಡಳಿತ ದಿಂದ ಸಂತುಷ್ಟರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲುವು ಕಾಂಗ್ರೆಸ್‌ನದೇ ಆಗಲಿದೆ. ಕಾರ್ಕಳದಲ್ಲಿಯೂ ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣವಿದೆ ಎಂದರು.
ಮಾಜಿ ಶಾಸಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್. ಗೋಪಾಲ ಭಂಡಾರಿ ಮಾತನಾಡಿ, ಕಾರ್ಯಕರ್ತರು ಪಕ್ಷವನ್ನು ಗೆಲ್ಲಿಸಲು ಕಟಿಬದ್ಧರಾಗಬೇಕು ಎಂದರು.
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸುಬೋಧ ಶೆಟ್ಟಿ ಪ್ರಸ್ತಾವನೆಗೈದು, ಪ್ರಚಾರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಎನ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಹೆಬ್ರಿ ಬ್ಲಾಕ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹಿರಿಯ ಕಾಂಗ್ರೆಸ್ ಮುಖಂಡ ಕುಟ್ಟಿ ಪೂಜಾರಿ, ವಾರ್ಡ್ ಅಧ್ಯಕ್ಷ ಸತೀಶ ಕುಲಾಲ್, ಕುಶ ಮೂಲ್ಯ, ಶ್ರೀಧರ ಸನಿಲ್, ಲಕ್ಷ್ಮೀಶ ಕಾಮತ್ ಬೋಳ, ಅವಿನಾಶ್ ಮಲ್ಲಿ ಸ್ವಾಗತಿಸಿ, ಚಂದ್ರಹಾಸ ಪುತ್ರನ್ ವಂದಿಸಿದರು.