Advertisement

ಮಾಡಾವು ವಿದ್ಯುತ್‌ ಸಬ್‌ಸ್ಟೇಷನ್ ಕಾಮಗಾರಿ: ಶಾಸಕರಿಂದ ವೀಕ್ಷಣೆ

11:58 AM Sep 03, 2018 | Team Udayavani |

ಕೆಯ್ಯೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಾಡಾವು 110 ಕೆ.ವಿ ವಿದ್ಯುತ್‌ ಸಬ್‌ಸ್ಟೇಷನ್‌ ನಿರ್ಮಾಣ ಕಾಮಗಾರಿ ಮತ್ತೆ ಆರಂಭಗೊಂಡಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಶನಿವಾರ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಕಾಮಗಾರಿಗೆ ಇರುವ ಅಡೆತಡೆಗಳ ಬಗ್ಗೆ ಶಾಸಕರು ಸ್ಥಳೀಯರಿಂದ ಮಾಹಿತಿ ಪಡಕೊಂಡರು.

Advertisement

ಕೆಯ್ಯೂರು ಗ್ರಾ.ಪಂ. ಅಧ್ಯಕ್ಷ ಬಾಬು ಬಿ., ಉಪಾಧ್ಯಕ್ಷ ರಾಧಕೃಷ್ಣ ಗೌಡ ಕೆಯ್ಯೂರು, ಸದಸ್ಯರಾದ ಕಿಟ್ಟ ಅಜಿಲ ಕಣಿಯಾರು, ಮೋಹನ್‌ ರೈ ಬೇರಿಕೆ, ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಸುರೇಶ್‌ ಆಳ್ವ, ಬಿಜೆಪಿ ಕೆಯ್ಯೂರು ಗ್ರಾಮ ಸಮಿತಿ ಅಧ್ಯಕ್ಷ ಪ್ರಕಾಶ್‌ ಆಳ್ವ ಇಳಾಂತಜೆ, ದುರ್ಗಾ ಯುವಕ ಮಂಡಲ ಮಾಜಿ ಅಧ್ಯಕ್ಷ ಶರತ್‌ ಕುಮಾರ್‌ ಮಾಡಾವು, ಪದ್ಮನಾಭ ರೈ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next