Advertisement

ಎಲ್ಲಿಂದ ಬೇಕಾದರೂ ಕೆಲಸ ಮಾಡಿ! ಸಿಬಂದಿಗೆ ಸೂಚನೆ ನೀಡಿದ ಎಸ್‌ಬಿಐ

12:25 AM Jun 22, 2020 | Sriram |

ಹೊಸದಿಲ್ಲಿ: ಕೋವಿಡ್-19 ಲಾಕ್‌ಡೌನ್‌ ಜಾರಿಗೆ ಬಂದ ಬಳಿಕ ಮನೆಯಿಂದಲೇ ಕೆಲಸದ ಪದ್ಧತಿ ಪ್ರಚಲಿತಕ್ಕೆ ಬಂದಿದೆ. ಈಗ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಇದಕ್ಕಿಂತಲೂ ಕೊಂಚ ಭಿನ್ನವಾದ ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ.

Advertisement

ಸರಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಸಿಬಂದಿ ಇನ್ನುಮುಂದೆ ಎಲ್ಲಿಂದ ಬೇಕಾದರೂ ಕರ್ತವ್ಯ ನಿರ್ವಹಿಸಬಹುದು. ಬ್ಯಾಂಕ್‌ನ 19 ವಿದೇಶಿ ಕಚೇರಿಗಳ ಸಿಬಂದಿ ಈಗಾಗಲೇ ತಾವಿರುವ ಸ್ಥಳದಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ಹೊಸ ಪದ್ಧತಿ ಇದುವರೆಗೆ ದೇಶದೊಳಗಿನ ಎಸ್‌ಬಿಐ ಶಾಖೆಗಳಲ್ಲಿ ಜಾರಿಗೆ ಬಂದಿರಲಿಲ್ಲ.

ಎಸ್‌ಬಿಐ ಅಧ್ಯಕ್ಷರಿಂದ ಪತ್ರ ಇನ್ನು ದೇಶಾದ್ಯಂತ ಇರುವ ಎಸ್‌ಬಿಐಯ 2.5 ಲಕ್ಷ ಸಿಬಂದಿ ಮನೆಯಿಂದ ಕೆಲಸ ಮಾಡುವ ವಿಧಾನ ಬಿಟ್ಟು, ಎಲ್ಲಿಂದ ಬೇಕಾದರೂ ಕೆಲಸ ಮಾಡುವ ಹೊಸ ವಿಧಾನಕ್ಕೆ ಅಪ್‌ ಗ್ರೇಡ್ ಆಗಲಿದ್ದಾರೆ. ಈ ಕುರಿತು ಬ್ಯಾಂಕ್‌ ಅಧ್ಯಕ್ಷ ರಜನೀಶ್‌ ಕುಮಾರ್‌ ಷೇರುದಾರರಿಗೆ ಪತ್ರ ಬರೆದಿದ್ದಾರೆ. ವರ್ಕ್‌ ಫ್ರಂ ಎನಿವೇರ್‌ ಪದ್ಧತಿಯಿಂದ ಪ್ರಯಾಣ ಸಮಯ ಉಳಿತಾಯವಾಗುತ್ತದೆ. ಗುಣಮಟ್ಟದ ಸೇವೆಗೆ ಇದು ಪೂರಕ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next