Advertisement
ಕಳೆದ 10ದಿನಗಳಿಂದ ಬಿದ್ದ ಭಾರೀ ಪ್ರಮಾಣದ ಮಳೆಗಾಳಿಯಿಂದಾಗಿ ನದಿ ಹೊಳೆಗಳಲ್ಲಿ ಪ್ರವಾಹ ಉಂಟಾಗಿ ಸಮುದ್ರ ಸೇರಿತ್ತು. ಸಮುದ್ರದ ಆಲೆಗಳೊಂದಿಗೆ ಬಂದ ಕಸಕಡ್ಡಿಗಳು ಕಡಲತೀರದಲ್ಲಿ ರಾಶಿ ಕಂಡು ಬಂದಿವೆ. ಇದರಲ್ಲಿ ಕೊಳೆತ ಮರಗಿಡಗಳ ಎಲೆಗಳು, ಪ್ಲಾಸಿಕ್ ಬಾಟಲುಗಳು, ಚಪ್ಪಲಿಗಳು ಸೇರಿವೆ.
Related Articles
Advertisement
ಇತ್ತೀಚಿನ ವರ್ಷಗಳಲ್ಲಿ ನದಿಗಳೊಂದಿಗೆ ಬಂದ ಈ ಮರಮಟ್ಟುಗಳು ನಗರ ಪ್ರದೇಶದಲ್ಲಿ ನದಿಗಳಿಗೆ ಎಸೆಲಾಗುವುವ ಪ್ಲಾಸಿಕ್ ಹಾಗೂ ಇನ್ನಿತರ ವಿಷಯುಕ್ತ ಪದಾರ್ಥಗಳೊಂದಿಗೆ ಸೇರಿ ಸಮುದ್ರ ಸೇರುವುದರಿಂದ ಮೀನುಗಳಿಗೆ ಹಾನಿಕಾರಕ ವಾಗುತ್ತಿದೆ. ಕಣ್ಣಿಗೆ ಕಾಣದ ಕೆಲವೊಂದು ಸಣ್ಣಗಾತ್ರದ ಪ್ಲಾಸ್ಟಿಕ್‌ಗಳು ಮೀನಿನ ಹೊಟ್ಟೆ ಸೇರಿ ಮೀನು ನಾಶವಾಗುತ್ತಿದೆ ಎನ್ನಲಾಗಿದೆ.
ಕಡಲ ಅಬ್ಬರದ ಸಮಯದಲ್ಲಿ ಸಮುದ್ರವು ಕಸದ ರಾಶಿಯನ್ನೆ ತೀರಕ್ಕೆ ತಂದು ಹಾಕುತ್ತದೆ. ಇದಕ್ಕೆ ಮಡಿ ಬೀಳುವುದು ಎಂದು ಹೇಳಲಾಗುತ್ತದೆ. ಈ ವೇಳೆ ಸಮುದ್ರವು ಶಾಂತ ಸ್ವರೂಪವನ್ನು ಪಡೆದುಕೊಳ್ಳುವುರಿಂದ ಮೀನುಗಾರಿಕೆಗೂ ಇದು ಪೂರಕ. ಕಸಗಳು ಕೊಳೆತು ಮತ್ತೆ ಸಮುದ್ರ ಸೇರುವುದರಿಂದ ಮೀನುಗಳಿಗೆ ಆಹಾರವೂ ಆಗುತ್ತದೆ ಎಂದು ಮಲ್ಪೆ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ ಪಿ. ಸಾಲ್ಯಾನ್ ತಿಳಿಸುತ್ತಾರೆ.
ಪ್ಲಾಸ್ಟಿಕ್ ತ್ಯಾಜ್ಯ ಎಸೆಯದಿರಿ: ಹೇರಳ ಪ್ರಮಾಣದಲ್ಲಿ ಮಡಿ ಕಸ ಬೀಳುತ್ತಿದೆ. ಕಡಲತೀರದಲ್ಲಿರುವ ಮಡಿ ಕಸವನ್ನು ಬಿಟ್ಟು ಪ್ಲಾಸ್ಟಿಕ್ ಬಾಟಲಿ, ಬಲೆ ತುಂಡುಗಳನ್ನುಅಲ್ಲಿಂದ ತೆರವು ಮಾಡುತ್ತಿದ್ದೇವೆ. ಹೊಳೆ ನದಿಗಳಿಗೆ ಪ್ಲಾಸ್ಟಿಕ್, ಇನ್ನಿತರ ಜಲಚರಗಳಿಗೆ ಹಾನಿಕಾರಕವಾಗುವ ವಸ್ತುಗಳನ್ನು ಎಸೆಯುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತಾಗಬೇಕು.- ಸುದೇಶ್ ಶೆಟ್ಟಿ, ಬೀಚ್ ನಿರ್ವಹಕರು,ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ