Advertisement

ದೇಶದ್ರೋಹಿ ಮಗನ ಶವ ಸ್ವೀಕರಿಸಲ್ಲ! ಶಂಕಿತ ಉಗ್ರ ಸೈಫುಲ್ಲಾ ತಂದೆ

04:03 PM Mar 08, 2017 | Team Udayavani |

ಲಕ್ನೋ:ಉತ್ತರಪ್ರದೇಶದ ಉಗ್ರ ನಿಗ್ರಹ ದಳ ಮಂಗಳವಾರ ರಾತ್ರಿ ಲಕ್ನೋದಲ್ಲಿ ನಡೆಸಿದ ಕಾರ್ಯಾಚರಣೆಯ ಎನ್ ಕೌಂಟರ್ ಗೆ ಬಲಿಯಾದ ಐಸಿಸ್ ಸಂಘಟನೆಗೆ ಸೇರಿದ್ದಾನೆ ಎನ್ನಲಾದ ಉಗ್ರ ಸೈಫುಲ್ಲಾನ ಶವವನ್ನು ಪಡೆಯಲು ತಂದೆ ನಿರಾಕರಿಸಿದ್ದಾರೆ. 

Advertisement

ಕಾನ್ಪುರದಲ್ಲಿ ವಾಸವಾಗಿರುವ ಸರ್ತಾಜ್ ಅವರು, ಈ ದೇಶದ್ರೋಹಿ ಯಾವತ್ತೂ ನಮ್ಮ ಮಗನಲ್ಲ. ನಾವು ಭಾರತೀಯರು, ನಾವು ಹುಟ್ಟಿರುವುದು ಇಲ್ಲೇ. ಹಾಗಾಗಿ ಯಾರೇ ಆಗಲಿ ದೇಶದ್ರೋಹಿ ಕೆಲಸ ಮಾಡಿದ ಮೇಲೆ ಆತ ನಮ್ಮ ಮಗ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ನಾವು ಆತನ ಶವವನ್ನು ಪಡೆಯಲ್ಲ ಎಂದು ಸೈಫುಲ್ಲಾ ತಂದೆ ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಐಸಿಸ್ ಸೆಲ್ ನ ಒಂಬತ್ತು ಮಂದಿ ಸದಸ್ಯರಲ್ಲಿ ಸೈಫುಲ್ಲಾ ಒಬ್ಬನಾಗಿದ್ದಾನೆ ಎಂದು ವರದಿಯೊಂದು ತಿಳಿಸಿದೆ. ಮಂಗಳವಾರ ಲಕ್ನೋದ ಠಾಕೂರ್ ಗಂಜ್ ಪ್ರದೇಶದಲ್ಲಿರುವ ಕಟ್ಟಡದೊಳಗೆ ಅಡಗಿ ಕುಳಿತಿದ್ದ ಸೈಫುಲ್ಲಾನನ್ನು ಕಮಾಂಡೋ ಕಾರ್ಯಾಚರಣೆಯಲ್ಲಿ ಹತ್ಯೆಗೈಯಲಾಗಿತ್ತು.

ಸುಮಾರು 12ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಸೈಫುಲ್ಲಾನನ್ನು ಜೀವಂತವಾಗಿ ಸೆರೆಹಿಡಿಯಲು ಪ್ತಯತ್ನಿಸಲಾಗಿತ್ತು. ಆದರೆ ಶರಣಾಗಲು ಆತ ನಿರಾಕರಿಸಿದ್ದ. ಬಳಿಕ ನಡೆದ ಎನ್ ಕೌಂಟರ್ ನಲ್ಲಿ ಸೈಫುಲ್ಲಾ ಸಾವನ್ನಪ್ಪಿದ್ದ. 

ಐಸಿಸ್ ಸಂಪರ್ಕ ಇಲ್ಲ:

Advertisement

ಎನ್ ಕೌಂಟರ್ ಗೆ ಬಲಿಯಾಗಿರುವ ಉಗ್ರ ಸೈಫುಲ್ಲಾನಿಗೆ ಐಸಿಸ್ ಭಯೋತ್ಪಾದನಾ ಸಂಘಟನೆ ಜೊತೆ ಸಂಪರ್ಕ ಇದೆ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಈತ ತನ್ನನ್ನು ತಾನು ಐಸಿಸ್ ಎಂದು ಘೋಷಿಸಿಕೊಂಡಿರುವುದಾಗಿ ಉತ್ತರಪ್ರದೇಶ ಪೊಲೀಸ್ ವರಿಷ್ಠಾಧಿಕಾರಿ ದಲ್ಜೀತ್ ಚೌಧರಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next