Advertisement

ಹೊಸ ಸಖ್ಯ ಏರ್ಪಡಬಹುದೇ ಎಂಬ ಕುತೂಹಲ: ಎಚ್‌ಡಿಕೆ ದಿಲ್ಲಿಗೆ?

11:56 PM Jul 14, 2023 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಶನಿವಾರ ದಿಲ್ಲಿಗೆ ತೆರಳಲಿದ್ದಾರೆ ಎಂಬ ಸುದ್ದಿ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಎನ್‌ಡಿಎ ಮೈತ್ರಿಕೂಟದ ಸಭೆಗೆ ಮುನ್ನವೇ ಬಿಜೆಪಿ-ಜೆಡಿಎಸ್‌ ಮಧ್ಯೆ ಸಖ್ಯ ಏರ್ಪಡಬಹುದೇ ಎಂಬ ಕುತೂಹಲ ನಿರ್ಮಾಣವಾಗಿದೆ.

Advertisement

ಕಳೆದೆರಡು ದಿನಗಳಿಂದ ಕುಮಾರ ಸ್ವಾಮಿ ದಿಲ್ಲಿ ಪ್ರವಾಸದ ಬಗ್ಗೆ ಗುಸುಗುಸು ಪ್ರಾರಂಭವಾಗಿದೆ. ದಿಲ್ಲಿಯಲ್ಲಿ ಎಚ್‌ಡಿಕೆ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಕುಮಾರಸ್ವಾಮಿ ಎರಡು ಬಾರಿ ದಿಲ್ಲಿಯಲ್ಲಿ ರಹಸ್ಯ ಸಭೆ ನಡೆಸಿದ್ದು, ಬಿಜೆಪಿ ಸಾಂಗತ್ಯಕ್ಕೆ ತೋಳು ಚಾಚಿರುವುದು ಖಚಿತ ಎನ್ನಲಾಗುತ್ತಿದೆ. ಜೆಡಿಎಸ್‌ ಹಾಗೂ ಬಿಜೆಪಿ ಪಾಳಯಗಳಿಂದಲೇ ಈ ಸುದ್ದಿ ಸೋರಿಕೆಯಾಗಿದ್ದು, ರಾಜಕೀಯ ಸಂದೇಶ ರವಾನೆಯೇ ಇದರ ಉದ್ದೇಶ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಮಧ್ಯೆ ಮೈತ್ರಿ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ವರಿಷ್ಠರು ಜೆಡಿಎಸ್‌ ಅನ್ನು ವಿಲೀನ ಮಾಡಿಕೊಳ್ಳುವ ಪ್ರಸ್ತಾವ ಮುಂದಿಟ್ಟಿದ್ದಾರೆ. ಆದರೆ ಇದರಿಂದ ಆಗುವ ಲಾಭ-ನಷ್ಟದ ಪರಿಣಾಮದ ಬಗ್ಗೆ ದಳಪತಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

ಕೇಂದ್ರ ಸಚಿವ ಸ್ಥಾನ?
ಮೈತ್ರಿ ನಡೆದರೆ ಕುಮಾರಸ್ವಾಮಿಯವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬಹುದು. ಆಗ ಲಿಂಗಾಯತರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ಹಿಂದುಳಿದ ವರ್ಗದ ನಾಯಕರನ್ನು ವಿಪಕ್ಷ ನಾಯಕ ಸ್ಥಾನದಲ್ಲಿ ಕುಳ್ಳಿರಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next