Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್‌ಗೆ ಕಾಂಗರೂ ದಾಳಿಯನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಅದು 45.5 ಓವರ್‌ಗಳಲ್ಲಿ 131 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿಯಿತು. ಜವಾಬಿತ್ತ ಆಸ್ಟ್ರೇಲಿಯ 30.2 ಓವರ್‌ಗಳಲ್ಲಿ 3 ವಿಕೆಟಿಗೆ 132 ರನ್ ಬಾರಿಸಿತು.
ಮಧ್ಯಮ ವೇಗಿ ಎಲ್ಲಿಸ್ ಪೆರ್ರಿ ಮತ್ತು ಆಫ್‌ಸ್ಪಿನ್ನರ್ ಆ್ಯಶ್ಲಿ ಗಾರ್ಡನರ್ ಕೆರಿಬಿಯನ್ ಸರದಿಯ ಮೇಲೆ ಘಾತಕವಾಗಿ ಎರಗಿದರು. ಇಬ್ಬರೂ 3 ವಿಕೆಟ್ ಉಡಾಯಿಸಿದರು. ಪೆರ್ರಿ ತಮ್ಮ ಮೊದಲ ಓವರ್‌ನಲ್ಲೇ ಹ್ಯಾಲಿ ಮ್ಯಾಥ್ಯೂಸ್ ಮತ್ತು ಕೈಸಿಯಾ ನೈಟ್ ಅವರನ್ನು ಸತತ ಎಸೆತಗಳಲ್ಲಿ ಕೆಡವಿ ವಿಂಡೀಸಿಗೆ ಬಲವಾದ ಆಘಾತವಿಕ್ಕಿದರು. ಇಬ್ಬರೂ ಖಾತೆ ತೆರೆದಿರಲಿಲ್ಲ.
Related Articles
Advertisement
ಹೇನ್ಸ್ ಅಜೇಯ ಆಟಆಸ್ಟ್ರೇಲಿತ ಕೂಡ 2 ವಿಕೆಟ್‌ಗಳನ್ನು 7 ರನ್ ಆಗುವುದರೊಳಗೆ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಎಲ್ಲಿಸ್ ಪೆರ್ರಿ (10) ಕೂಡ ಅಗ್ಗಕ್ಕೆ ಔಟಾದರು. ಆದರೆ ಓಪನರ್ ರಶೆಲ್ ಹೇನ್ಸ್ ಅಜೇಯ 83 ರನ್ ಬಾರಿಸಿ ತಂಡಕ್ಕೆ ಯಾವುದೇ ಆತಂಕ ಎದುರಾಗದಂತೆ ನೋಡಿಕೊಂಡರು (95 ಎಸೆತ, 9 ಬೌಂಡರಿ). ಇವರೊಂದಿಗೆ ಬೆತ್ ಮೂನಿ 28 ರನ್ ಮಾಡಿ ಅಜೇಯರಾಗಿ ಉಳಿದರು. ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-45.5 ಓವರ್‌ಗಳಲ್ಲಿ 131 (ಟೇಲರ್ 50, ಕ್ಯಾಂಬೆಲ್ 20, ಡಾಟಿನ್ 16, ಪೆರ್ರಿ 22ಕ್ಕೆ 3, ಗಾರ್ಡನರ್ 25ಕ್ಕೆ 3, ಜೊನಾಸೆನ್ 18ಕ್ಕೆ 2). ಆಸ್ಟ್ರೇಲಿಯ-30.2 ಓವರ್‌ಗಳಲ್ಲಿ 3 ವಿಕೆಟಿಗೆ 132 (ಹೇನ್ಸ್ ಔಟಾಗದೆ 83, ಮೂನಿ ಔಟಾಗದೆ 28, ಹೆನ್ರಿ 20ಕ್ಕೆ 1, ಮ್ಯಾಥ್ಯೂಸ್ 31ಕ್ಕೆ 1, ಕಾನೆಲ್ 32ಕ್ಕೆ 1). ಪಂದ್ಯಶ್ರೇಷ್ಠ: ಎಲ್ಲಿಸ್ ಪೆರ್ರಿ.