Advertisement

ವನಿತಾ ಟಿ20 ವಿಶ್ವಕಪ್‌-2024: ಭಾರತ ತಂಡಕ್ಕೆ ನೇರ ಪ್ರವೇಶ

11:42 PM Feb 28, 2023 | Team Udayavani |

ದುಬಾೖ: ಬಾಂಗ್ಲಾದೇಶದ ಆತಿಥ್ಯದಲ್ಲಿ ನಡೆಯುವ 2024ರ ವನಿತಾ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಭಾರತ ಸೇರಿದಂತೆ 8 ತಂಡಗಳು ನೇರ ಪ್ರವೇಶ ಪಡೆದಿವೆ.

Advertisement

ದಕ್ಷಿಣ ಆಫ್ರಿಕಾದಲ್ಲಿ ಮೊನ್ನೆ ಮುಗಿದ ವಿಶ್ವಕಪ್‌ ಬೆನ್ನಲ್ಲೇ ಐಸಿಸಿ 2024ರ 8 ತಂಡಗಳನ್ನು ಪ್ರಕಟಿಸಿತು. ಎರಡೂ ಗ್ರೂಪ್‌ಗ್ಳಲ್ಲಿ ಮೊದಲ 3 ಸ್ಥಾನ ಪಡೆದ ತಂಡಗಳೊಂದಿಗೆ ಆತಿಥೇಯ ಬಾಂಗ್ಲಾದೇಶಕ್ಕೆ ನೇರ ಅರ್ಹತೆ ಸಿಕ್ಕಿತು.

ಇನ್ನೊಂದು ತಂಡ ಪಾಕಿಸ್ಥಾನ. ಮೊದಲ 6 ರ್‍ಯಾಂಕಿಂಗ್‌ ಯಾದಿಯ ಆಚೆಗಿನ ಟಾಪ್‌ ತಂಡದ ಮಾನದಂಡದಂತೆ ಪಾಕಿಸ್ಥಾನಕ್ಕೆ ಪ್ರವೇಶ ಲಭಿಸಿತು.

ಮೊನ್ನೆಯ ವಿಶ್ವಕಪ್‌ನಲ್ಲಿ ಆಡಿದ ಶ್ರೀಲಂಕಾ ಮತ್ತು ಐರ್ಲೆಂಡ್‌ ತಂಡಗಳಷ್ಟೇ 2024ರ ಕೂಟಕ್ಕೆ ಅರ್ಹತೆ ಸಂಪಾದಿಸಲು ವಿಫ‌ಲವಾದವು. ಶ್ರೀಲಂಕಾ ಮತ್ತು ಐರ್ಲೆಂಡ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ 8ನೇ ಹಾಗೂ 10ನೇ ಸ್ಥಾನದಲ್ಲಿವೆ.

2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳೆಂದರೆ, ಗ್ರೂಪ್‌ ಒಂದರ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್‌; ಗ್ರೂಪ್‌ ಎರಡರ ಇಂಗ್ಲೆಂಡ್‌, ಭಾರತ ಮತ್ತು ವೆಸ್ಟ್‌ ಇಂಡೀಸ್‌.

Advertisement

ಉಳಿದೆರಡು ತಂಡಗಳನ್ನು ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಆಯ್ಕೆ ಮಾಡಲಾಗುವುದು. ಇದರ ದಿನಾಂಕ ಮತ್ತು ಸ್ಥಳವನ್ನು ಮುಂದೆ ನಿರ್ಧರಿಸಲಾಗುವುದು ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next