Advertisement

Women’s T20; ಇಂಗ್ಲೆಂಡ್‌ ಎದುರು ಮುಗ್ಗರಿಸಿದ ಭಾರತ

11:44 PM Dec 06, 2023 | Team Udayavani |

ಮುಂಬಯಿ: ಪ್ರವಾಸಿ ಇಂಗ್ಲೆಂಡ್‌ ಎದುರಿನ ವನಿತಾ ಟಿ20 ಸರಣಿಯನ್ನು ಭಾರತ ಸೋಲಿನೊಂದಿಗೆ ಆರಂಭಿಸಿದೆ. ಮುಂಬಯಿಯಲ್ಲಿ ನಡೆದ ಬುಧವಾರದ ಪಂದ್ಯವನ್ನು ಹರ್ಮನ್‌ಪ್ರೀತ್‌ ಕೌರ್‌ ಬಳಗ 38 ರನ್ನುಗಳಿಂದ ಕಳೆದುಕೊಂಡಿತು.

Advertisement

ಇಂಗ್ಲೆಂಡ್‌ 6 ವಿಕೆಟಿಗೆ 197 ಪೇರಿಸಿ ಸವಾಲೆಸೆದರೆ, ಭಾರತ 6 ವಿಕೆಟಿಗೆ 159 ರನ್‌ ಗಳಿಸಿತು. ಚೇಸಿಂಗ್‌ ವೇಳೆ ಶಫಾಲಿ ವರ್ಮ ಅರ್ಧ ಶತಕ ಬಾರಿಸಿ ಮಿಂಚಿದರು (42 ಎಸೆತ, 52 ರನ್‌, 9 ಬೌಂಡರಿ). ನಾಯಕಿ ಕೌರ್‌ 25, ರಿಚಾ ಘೋಷ್‌ 21 ರನ್‌ ಮಾಡಿದರು.

ರೇಣುಕಾ ಸಿಂಗ್‌ ಮೊದಲ ಓವರ್‌ನಲ್ಲೇ, ಸತತ ಎಸೆತಗಳಲ್ಲಿ ಸೋಫಿಯಾ ಡಂಕ್ಲಿ (1) ಮತ್ತು ಅಲೈಸ್‌ ಕ್ಯಾಪ್ಸಿ (0) ವಿಕೆಟ್‌ ಉದುರಿಸಿದಾಗ ಇಂಗ್ಲೆಂಡ್‌ ಸಾಮಾನ್ಯ ಮೊತ್ತಕ್ಕೆ ಕುಸಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ 3ನೇ ವಿಕೆಟಿಗೆ ಜತೆಗೂಡಿದ ಡೇನಿಯಲ್‌ ವ್ಯಾಟ್‌ (75) ಮತ್ತು ನ್ಯಾಟ್‌ ಸ್ಕಿವರ್‌ ಬ್ರಂಟ್‌ (77) ಡೆತ್‌ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು 138 ರನ್‌ ಜತೆಯಾಟ ನಿಭಾಯಿಸಿದರು. ಪರಿಣಾಮ, ಇಂಗ್ಲೆಂಡ್‌ ಮೊತ್ತ ಇನ್ನೂರರ ಗಡಿಯತ್ತ ಮುಖ ಮಾಡಿತು.

27ಕ್ಕೆ 3 ವಿಕೆಟ್‌ ಕಿತ್ತ ರೇಣುಕಾ ಸಿಂಗ್‌ ಭಾರತದ ಯಶಸ್ವಿ ಬೌಲರ್‌. ನಾಯಕಿ ಹೀತರ್‌ ನೈಟ್‌ (6) ಮತ್ತು ಜೋನ್ಸ್‌ ವಿಕೆಟ್‌ ಶ್ರೇಯಾಂಕಾ ಪಾಟೀಲ್‌ ಪಾಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next