Advertisement
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮಿಥಾಲಿ ರಾಜ್ ಅವರ ಅಜೇಯ 97 ರನ್ ಸಾಹಸದಿಂದ 3 ವಿಕೆಟಿಗೆ 169 ರನ್ ಪೇರಿಸಿದರೆ, ಮಲೇಶ್ಯ 13.4 ಓವರ್‌ಗಳಲ್ಲಿ ಕೇವಲ 27 ರನ್ನಿಗೆ ಗಂಟುಮೂಟೆ ಕಟ್ಟಿತು. ಭಾರತ ಎಸೆದ 13.4 ಓವರ್‌ಗಳಲ್ಲಿ 5 ಓವರ್ ಮೇಡನ್ ಆಗಿದ್ದವು. ಪೂನಂ ಯಾದವ್ ಎರಡೂ ಓವರ್‌ಗಳನ್ನು ಮೇಡನ್ ಮಾಡಿ ಒಂದೂ ರನ್ ನೀಡದೆ 2 ವಿಕೆಟ್ ಕಿತ್ತರು. 6 ರನ್ನಿಗೆ 3 ವಿಕೆಟ್ ಕಿತ್ತ ಪೂಜಾ ವಸ್ತ್ರಾಕರ್ ಭಾರತದ ಯಶಸ್ವೀ ಬೌಲರ್. ಅನುಜಾ ಪಾಟೀಲ್ 9ಕ್ಕೆ 2, ಶಿಖಾ ಪಾಂಡೆ 2 ರನ್ನಿಗೆ ಒಂದು ವಿಕೆಟ್ ಸಂಪಾದಿಸಿದರು.
ಭಾರತ ಸ್ಮತಿ ಮಂಧನಾ (2) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡ ಮಿಥಾಲಿ ರಾಜ್ ಅಜೇಯವಾಗಿ ಉಳಿದು 97 ರನ್ ಹೊಡೆದರು. 69 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ ಪಂದ್ಯದ ಏಕೈಕ ಸಿಕ್ಸರ್ ಒಳಗೊಂಡಿತ್ತು.
ಅಂತಿಮ ಓವರಿನಲ್ಲಿ ಮಿಥಾಲಿ ಶತಕಕ್ಕೆ 4 ರನ್ನುಗಳ ಅಗತ್ಯವಿತ್ತು. ಆದರೆ ಗಳಿಸಲು ಸಾಧ್ಯವಾದದ್ದು ಒಂದು ರನ್ ಮಾತ್ರ. ಈ ಓವರಿನ 4 ಎಸೆತಗಳನ್ನು ಎದುರಿಸಿದ ದೀಪ್ತಿ ಶರ್ಮ 2 ಬೌಂಡರಿ ಸಹಿತ 11 ರನ್ ಹೊಡೆದರು. ದೀಪ್ತಿ ಗಳಿಕೆ ಅಜೇಯ 18 ರನ್. ಪೂಜಾ ವಸ್ತ್ರಾಕರ್ 16 ರನ್ ಮಾಡಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 32 ರನ್ ಹೊಡೆದು ಅಜೇಯರಾಗಿ ಉಳಿದರು. ಉಳಿದ ಪಂದ್ಯಗಳಲ್ಲಿ ಪಾಕಿಸ್ಥಾನ, ಶ್ರೀಲಂಕಾ ಜಯ ಸಾಧಿಸಿವೆ. ಬಾಂಗ್ಲಾದೇಶ ಮತ್ತು ಥಾಯ್ಲೆಂಡ್ ಸೋಲನುಭವಿಸಿವೆ. ಸಂಕ್ಷಿಪ್ತ ಸ್ಕೋರ್
ಭಾರತ-20 ಓವರ್‌ಗಳಲ್ಲಿ 3 ವಿಕೆಟಿಗೆ 169 (ಮಿಥಾಲಿ ಔಟಾಗದೆ 97, ಹರ್ಮನ್‌ಪ್ರೀತ್ 32, ದೀಪ್ತಿ ಔಟಾಗದೆ 18, ಪೂಜಾ 16, ಐನಾ ಹಾಶಿಂ 30ಕ್ಕೆ 1, ನೂರ್ ಝಕಾರಿಯ 30ಕ್ಕೆ 1). ಮಲೇಶ್ಯ-13.4 ಓವರ್‌ಗಳಲ್ಲಿ 27 ಆಲೌಟ್ (ಸಶಾ ಅಜ್ಮಿ 9, ಪೂಜಾ 6ಕ್ಕೆ 3, ಪೂನಂ 0ಗೆ 2, ಅನುಜಾ 9ಕ್ಕೆ 2, ಶಿಖಾ 2ಕ್ಕೆ 1). ಪಂದ್ಯಶ್ರೇಷ್ಠ: ಮಿಥಾಲಿ ರಾಜ್.
Related Articles
ಮಲೇಶ್ಯ ಬ್ಯಾಟಿಂಗ್ ಸರದಿಯಲ್ಲಿ ಯಾವ ಆಟಗಾರ್ತಿಯೂ ಎರಡಂ ಕೆಯ ಸ್ಕೋರ್ ದಾಖಲಿಸಲಿಲ್ಲ. ಆರಂಭಿಕರಿಬ್ಬರ ಸಹಿತ ಒಟ್ಟು 6 ಮಂದಿ ಖಾತೆಯನ್ನೇ ತೆರೆಯಲಿಲ್ಲ. 9 ರನ್ ಮಾಡಿದ ಸಶಾ ಅಜ್ಮಿ ಅವರದೇ ಹೆಚ್ಚಿನ ಗಳಿಕೆ. 10 ಎಸೆತ ಎದುರಿಸಿದ ಅಜ್ಮಿ 2 ಬೌಂಡರಿ ಹೊಡೆದರು. ಇನ್ನೊಂದು ಬೌಂಡರಿ ಝುಮಿಕಾ ಅಜ್ಮಿ ಅವರಿಂದ ದಾಖಲಾಯಿತು.
Advertisement