Advertisement

ಮಹಿಳಾ ಸಂಘಗಳ ಸಾಲ ವಿಮಾ ವ್ಯಾಪ್ತಿಗೆ

05:34 PM May 29, 2017 | |

ಕೋಲಾರ: ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸಂಘಗಳಿಗೆ ನೀಡುತ್ತಿರುವ ಸಾಲಸೌಲಭ್ಯವನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲು ಇಪ್ಕೋಟೋಕಿಯೋ ವಿಮಾ ಕಂಪನಿ ಒಪ್ಪಿಗೆ ನೀಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು. ಭಾನುವಾರ ಬ್ಯಾಂಕಿನ ಆವರಣದಲ್ಲಿ ಶೂನ್ಯ ಬಡ್ಡಿ ಸಾಲಕ್ಕಾಗಿ ಮನವಿ ಮಾಡಲು ಬಂದಿದ್ದ ನಗರದ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ನೂರಾರು ಮಹಿಳೆಯರನ್ನುದ್ದೇಶಿಸಿ ಅವರು ಮಾತನಾಡಿದರು.

Advertisement

ಇಪ್ಕೋ ಟೋಕಿಯೋ ವಿಮಾ ಕಂಪನಿ ಅಧ್ಯಕ್ಷ ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮಹಿಳೆಯರು ಪಡೆಯುವ ಶೂನ್ಯ ಬಡ್ಡಿಯ 50 ಸಾವಿರ ಸಾಲಕ್ಕೆ ಕೇವಲ 60 ರೂ. ಒಮ್ಮೆ ಪಾವತಿಸಿದರೆ ಸಾಕು ಅವರ ಸಾಲ ತೀರುವವರೆಗೂ ಮೂರು ವರ್ಷಗಳ ಕಾಲ ಆ ಹಣಕ್ಕೆ ವಿಮಾ ರಕ್ಷಣೆ ಸಿಗುತ್ತದೆ ಎಂದು ತಿಳಿಸಿದರು. 

ಯಾವುದೇ ಭದ್ರತೆಯಿಲ್ಲದೇ ಮಹಿಳಾ ಪ್ರತಿನಿಧಿಗಳಿಗೆ ನೀಡುವ ಈ ಸಾಲದ ಹಣ ತೀರಿಸಲಾಗದೇ ಯಾರಾದರೂ ಮೃತಪಟ್ಟರೆ ಅಂತಹವರ ಸಾಲದ ಬಾಬ್ತು ಹಣವನ್ನು ವಿಮಾ ಕಂಪನಿ ತುಂಬಿಕೊಡುತ್ತದೆ ಎಂದು ತಿಳಿಸಿದರು. ಇದರಿಂದಾಗಿ ಸಾಲ ತೀರಿಸಲಾಗದೇ ಇಡೀ ಮಹಿಳಾ ಸಂಘದ ಇತರೆ ಸದಸ್ಯರಿಗೂ ಮರು ಸಾಲ ಸೌಲಭ್ಯ ಸಿಗದ ದುಸ್ಥಿತಿಯಿಂದ ಪಾರಾಗಲು ಇದು ಉತ್ತಮ ಯೋಜನೆಯಾಗಿದೆ ಎಂದು ವಿವರಿಸಿದರು.

ಶೂನ್ಯಬಡ್ಡಿ ಸಾಲಕ್ಕಾಗಿ ಮಹಿಳೆಯರ ಮೊರೆ: ಇತರೆ ವಾಣಿಜ್ಯ ಬ್ಯಾಂಕುಗಳಿಂದ ತಮ್ಮ ವಹಿವಾಟನ್ನು ಡಿಸಿಸಿ ಬ್ಯಾಂಕಿಗೆ ವರ್ಗಾವಣೆ ಮಾಡಿಕೊಂಡಿರುವ ಮಹಿಳೆಯರು ತಮ್ಮ ಉಳಿತಾಯದ ಹಣವನ್ನು ಬ್ಯಾಂಕಿಗೆ ತುಂಬಿದ್ದಾರೆ, ನಮಗೆ ಶೀಘ್ರ ಸಾಲ ಒದಗಿಸುವ ಮೂಲಕ ನಮ್ಮ ಆರ್ಥಿಕಸ್ಥಿತಿ ಉತ್ತಮಗೊಳ್ಳಲು ಸಹಕರಿಸಬೇಕು ಎಂದು ಕೋರಿದರು.

ಇದಕ್ಕೆ ಸ್ಪಂದಿಸಿದ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ನಿರ್ದೇಶಕ ನಾಗನಾಳ ಸೋಮಣ್ಣ, ಮಹಿಳೆಯರು ಸಂಘ ರಚನೆ ಮಾಡಿ 6 ತಿಂಗಳಾಗಿರಬೇಕೆಂಬ ನಿಯಮವಿದೆ. ಅದರಂತೆ ಸಂಘ ರಚನೆಯಾಗಿ 6 ತಿಂಗಳಾಗಿದೆ. ಉಳಿತಾಯದ ಹಣ ಬ್ಯಾಂಕಿನಲ್ಲಿಟ್ಟಿರುವ ಎಲ್ಲಾ ಮಹಿಳಾ ಸಂಘಗಳಿಗೂ ಜೂ.15 ರೊಳಗೆ ಶೂನ್ಯಬಡ್ಡಿ ಸಾಲ ಒದಗಿಸುವುದಾಗಿ ಭರವಸೆ ನೀಡಿದರು.

Advertisement

ಮಧ್ಯವರ್ತಿಗಳ ಮೊರೆ ಹೋಗದಿರಿ: ಬ್ಯಾಂಕಿನೊಂದಿಗೆ ನೀವು ವ್ಯವಹರಿಸುವಾಗ ಮಧ್ಯವರ್ತಿಗಳಲ್ಲಿಗೆ ಹೋಗದಿರಿ, ಬ್ಯಾಂಕ್‌ ¿ಾವುದೇ ಮಧ್ಯವರ್ತಿಯನ್ನು ನೇಮಿಸಿಕೊಂಡಿಲ್ಲ, ಮಧ್ಯವರ್ತಿಗಳಿಂದ ನಿಮಗೆ ತೊಂದರೆಯಾಗಿದ್ದರೆ ಕೂಡಲೇ ಮಾಹಿತಿ ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕೆಲವು ಮಹಿಳಾ ಸಂಘಗಳನ್ನು ಮಧ್ಯವರ್ತಿಗಳು ತಲಾ 500ರೂ, ಸಾವಿರ ರೂ ಪಡೆದು ವಂಚಿಸುತ್ತಿದ್ದಾರೆಂಬ ವದಂತಿಗಳ ಹಿನ್ನೆಲೆಯಲ್ಲಿ ಮಹಿಳೆಯರನ್ನು ಎಚ್ಚರಿಸಿದ ಅವರು, ನೀವು ಯಾರಿಗೂ ಒಂದು ನಯಾಪೈಸೆ ಲಂಚ ನೀಡದಿರಿ ಎಂದು ಕಿವಿಮಾತು ಹೇಳಿದರು.

ಬ್ಯಾಂಕಿನ ನಿರ್ದೇಶಕ ನಾಗನಾಳ ಸೋಮಣ್ಣ, ಇಪ್ಕೋ ಟೋಕಿಯೋ ವಿಮಾ ಕಂಪನಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶ್ರೀನಿವಾಸಗೌಡರು ವಿಮಾ ಕಂತನ್ನು ಮೂರು ವರ್ಷಗಳಿಗೆ ಕೇವಲ 60 ರೂಗೆ ನಿಗದಿ ಮಾಡಿಸಿದ್ದಾರೆ. ಇದರಿಂದ ಮಹಿಳೆಯರು ಹಾಗೂ ಬ್ಯಾಂಕಿಗೂ ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ಇಪ್ಕೋ ವಿಮಾ ಕಂಪನಿಯ ಜ್ಯೋತಿ ಕುಮಾರ್‌, ವಿವಿಧ ಮಹಿಳಾ ಸಂಘಗಳ ಪ್ರತಿನಿಧಿಗಳಾದ ಗ್ರೇಸ್‌ ಸಂತೋಷ್‌ಕುಮಾರಿ, ಕಮಲಾಬಾಯಿ, ಶಶಿಕಲಾ, ಯಾಸ್ಮಿàನ್‌ ತಾಜ್‌, ಇಂದ್ರಬಾಯಿ, ಜಮೀರ್‌, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next