Advertisement
ಕಳೆದ 7 ವರ್ಷದಿಂದ ಯರಗುಂಟೆ ಗ್ರಾಮದಲ್ಲಿ ಶ್ರೀ ಕರಿಬಸವೇಶ್ವರಸ್ವಾಮಿ ರಥೋತ್ಸವ ನಡೆಯುತ್ತಿದೆ. 6 ವರ್ಷದಿಂದ ಮಹಿಳೆಯರೇ ರಥ ಶ್ರೀ ಕರಿಬಸವೇಶ್ವರಸ್ವಾಮಿ ರಥ ಎಳೆಯುವುದು ವಿಶೇಷ. ಮೊದಲು ಎಲ್ಲಾ ಕಡೆಯಂತೆ ಪುರುಷರೇ ರಥ ಎಳೆಯುತ್ತಿದ್ದರು. ಯರಗುಂಟೆಯ ಶ್ರೀ ಪರಮೇಶ್ವರ ಸ್ವಾಮೀಜಿ, ಒಮ್ಮೆ ಉತ್ತರ ಕರ್ನಾಟಕಕ ಒಂದು ಪ್ರದೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಮಹಿಳೆಯರೇ ರಥ ಎಳೆಯುವುದನ್ನ ಕಂಡಂತಹ ಸ್ವಾಮೀಜಿ, ನಮ್ಮೆಲ್ಲೂ ಏಕೆ ಮಹಿಳೆಯರಿಂದಲೇ ರಥ ಎಳೆಸಬಾರದು ಅಂದುಕೊಂಡರು.ಅವರ ನಿರ್ಧಾರದ ಫಲವಾಗಿಯೇ ಕಳೆದ 6 ವರ್ಷದಿಂದ ಮಹಿಳೆಯರೇ ರಥ ಎಳೆಯುತ್ತಿದ್ದಾರೆ. ಆ ಮೂಲಕ ಸಮಾನತೆಯ ಸಾಧಿಸಲಾಗುತ್ತಿದೆ. ಭಾನುವಾರ ಯರಗುಂಟೆಯಲ್ಲಿ ನಡೆದ ಶ್ರೀ ಕರಿಬಸವೇಶ್ವರಸ್ವಾಮಿ ರಥೋತ್ಸವವನ್ನೇ ಮಹಿಳೆಯರೆ ನಿರ್ವಹಿಸುವ ಮೂಲಕ ಗಮನ ಸೆಳೆದರು. ರಥೋತ್ಸವದಲ್ಲಿ ಭಾಗವಹಿಸಲಿಕ್ಕಾಗಿಯೇ ದೂರದ ಊರುಗಳಿಂದ ಬಂದಂತಹ ಅನೇಕ ಮಹಿಳೆಯರು ಅತೀ ಉತ್ಸಾಹದಿಂದಲೇ ರಥ ಎಳೆದರು. ಮಹಿಳೆಯರೇ ರಥ ಎಳೆಯುವ ಕಾರ್ಯಕ್ಕೆ ಮೆಚ್ಚುಗೆ, ಸಂತಸ ವ್ಯಕ್ತಪಡಿಸಿದರು.
ಭಾರತ ಪುರುಷ ಪ್ರಧಾನ ಸಮಾಜ. ಮಹಿಳೆಯರಿಗೂ ಸಮಾನತೆ ಒದಗಿಸಿಕೊಡುವ ಉದ್ದೇಶದಿಂದ ಕಳೆದ 6 ವರ್ಷದಿಂದ ಮಹಿಳೆಯರಿಗೆ ರಥ ಎಳೆಯುವ ಅವಕಾಶ ಮಾಡಿಕೊಡಲಾಗಿದೆ. ಸೃಷ್ಟಿಗೆ ಕಾರಣವಾಗುವ ಮಹಿಳೆಯರು ಕೂಡಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಾಮುಖ್ಯ ವಹಿಸಬೇಕು ಎಂಬ ಸದಾಶಯದಿಂದ ಈ ಕಾರು ಪ್ರಾರಂಭಿಸಲಾಗಿದೆ ಎಂದು ಶ್ರೀ ಪರಮೇಶ್ವರ ಸ್ವಾಮೀಜಿ ತಿಳಿಸಿದರು.