Advertisement

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

08:42 PM Nov 29, 2024 | Team Udayavani |

ಪಡುಬಿದ್ರಿ: ಕಾಂಜರಕಟ್ಟೆಯ ಬ್ರೈಟ್‌ ಫ್ಲೆಕ್ಸ್‌ ಕೈಗಾರಿಕ ಘಟಕದಲ್ಲಿ ಸೇಲ್ಸ್‌ ಮ್ಯಾನೇಜರ್‌ ಆಗಿ ದುಡಿಯುತ್ತಿದ್ದ ಕಾರ್ಕಳ ತಾ| ಕಚೇರಿ ಬಳಿ ನಿವಾಸಿ ಪ್ರಶಾಂತ್‌ ಕಾಮತ್‌ (52) ಅವರು ನ. 28ರಂದು ಮಂಗಳೂರು ಕಚೇರಿಗೆ ಹೋಗಿ ಬರುವುದಾಗಿ ತಿಳಿಸಿ ಹೊರ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.

Advertisement

ಕಾಂಜರಕಟ್ಟೆ ಘಟಕಕ್ಕೆ ಬಂದು ಐದೇ ನಿಮಿಷಗಳಲ್ಲಿ ಅವರು ಹೊರಗೆ ಹೋಗಿದ್ದರು. ಮನೆಗೂ ಕರೆ ಮಾಡಿ ವಿಚಾರಿಸಿದಾಗ ಅಲ್ಲಿಗೂ ಹೋಗಿರಲಿಲ್ಲ. ಅವರಿಗೆ ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಯಿತ್ತು. ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

5.4 ಅಡಿ ಎತ್ತರ, ದುಂಡು ಮುಖ, ಗೋಧಿ ಮೈ ಬಣ್ಣದ ಇವರು ನೀಲಿ ಬಣ್ಣದ ಜೀನ್ಸ್‌ ಹಾಗೂ ಕಡು ನೀಲಿ ಬಣ್ಣದ ಶರ್ಟು ಧರಿಸಿದ್ದರು. ಕನ್ನಡ, ಇಂಗ್ಲೀಷ್‌, ಹಿಂದಿ ಹಾಗೂ ಕೊಂಕಣಿ ಭಾಷೆ ಮಾತಾಡುವ ಇವರ ಕುರಿತಾಗಿ ಯಾರಿಗಾದರೂ ಮಾಹಿತಿ ಲಭಿಸಿದ್ದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆ(0820-2555452)ಯನ್ನು ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.

ಕುದಿ: ವ್ಯಕ್ತಿ ನಾಪತ್ತೆ
ಹಿರಿಯಡಕ, ನ. 29: ಹಿರಿಯಡಕ ಪೊಲೀಸ್‌ ಠಾಣಾ ವ್ಯಾಪ್ತಿಯ ಕುದಿ ಗ್ರಾಮ ಕೊಂಡಾಡಿ ದರ್ಖಾಸು ನಿವಾಸಿ ವಾಸು ನಾಯ್ಕ (58) ನಾಪತ್ತೆಯಾಗಿದ್ದಾರೆ.

ಅವರು 5 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡಕ ಪೊಲೀಸ್‌ ಠಾಣೆ (9480805452) ಅಥವಾ ಬ್ರಹ್ಮಾವರ ವೃತ್ತ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next