Advertisement

Women’s Reservation Bill; ಮಹಿಳಾ ಮೀಸಲಾತಿಗೆ ಸಂಪುಟ ಅಸ್ತು

12:39 AM Sep 19, 2023 | Team Udayavani |

ಹೊಸದಿಲ್ಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅಂಗೀಕಾರ ನೀಡಿದ್ದು, ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ.

Advertisement

ಸಂವಿಧಾನದ (108ನೇ ತಿದ್ದುಪಡಿ) ಮಸೂದೆ, 2008 ಇದಾಗಿದ್ದು, ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ ಸ್ತ್ರೀಯರಿಗೆ ಶೇ. 33 ಪ್ರಾತಿನಿಧ್ಯದ ಮೀಸಲಾತಿ ಒದಗಿಸಲಿದೆ.

ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ ಕೇಂದ್ರ ಜಲಶಕ್ತಿ ಖಾತೆಯ ಸಹಾಯಕ ಸಚಿವ ಖಾತೆ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಈ ವಿಚಾರವನ್ನು ತಿಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿ (ಯು) ಸಂಸದ ರಾಮನಾಥ್‌ ಠಾಕೂರ್‌ ಸಹಿತ ಅನೇಕ ಸಂಸದರು ಸರಕಾರವನ್ನು ಆಗ್ರಹಿಸಿದ್ದರು.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಸ್ವಾಗaತಿಸಿದ್ದಾರೆ. ಈ ಮಸೂದೆನಯನ್ನು ಮಂಡಿಸಿ ಅಂಗೀಕಾರ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್‌ ಪಕ್ಷವು ದೀರ್ಘ‌ಕಾಲದಿಂದ ಆಗ್ರಹಿಸುತ್ತ ಬಂದಿದೆ. ಸಂಪುಟ ಸಭೆಯ ನಿರ್ಣಯವನ್ನು ನಾವು ಸ್ವಾಗತಿಸು ತ್ತೇವೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next