Advertisement

Women’s Premier League; ಬೆತ್‌ ಮೂನಿಗೆ ಮರಳಿ ಗುಜರಾತ್‌ ನಾಯಕತ್ವ

11:11 PM Feb 14, 2024 | Team Udayavani |

ಹೊಸದಿಲ್ಲಿ: ದ್ವಿತೀಯ ವನಿತಾ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾ ವಳಿಗಾಗಿ ಆಸ್ಟ್ರೇಲಿಯದ ಬೆತ್‌ ಮೂನಿ ಅವರನ್ನು ಮರಳಿ ಗುಜರಾತ್‌ ಜೈಂಟ್ಸ್‌ ತಂಡದ ನಾಯಕಿ ಯನ್ನಾಗಿ ನೇಮಿಸ ಲಾಗಿದೆ. ಸ್ನೇಹ್‌ ರಾಣಾ ಉಪನಾಯಕಿಯಾಗಿದ್ದಾರೆ.

Advertisement

ಗುಜರಾತ್‌ ತಂಡದ ಕೋಚ್‌ ಮೈಕಲ್‌ ಕ್ಲಿಂಗರ್‌, ಮೆಂಟರ್‌ ಮಿಥಾಲಿ ರಾಜ್‌ ಮತ್ತು ಸಹಾಯಕ ಕೋಚ್‌ ನೂಶಿನ್‌ ಅಲ್‌ ಖದೀರ್‌ ಸೇರಿ ಈ ನಿರ್ಧಾರಕ್ಕೆ ಬಂದರು.

ಕಳೆದ ವರ್ಷದ ಪ್ರಥಮ ಋತುವಿನಲ್ಲಿ ಬೆತ್‌ ಮೂನಿ ಅವರೇ ಗುಜರಾತ್‌ ಜೈಂಟ್ಸ್‌ ತಂಡದ ನಾಯಕಿಯಾಗಿದ್ದರು. ಆದರೆ ಮೊದಲ ಪಂದ್ಯದಲ್ಲೇ ಗಾಯಾಳಾಗಿ ಕೂಟದಿಂದ ಹೊರ ಬಿದ್ದರು. ಅನಂತರ ಸ್ನೇಹ್‌ ರಾಣಾ ತಂಡವನ್ನು ಮುನ್ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next