Advertisement

ಐಐಎಂನಿಂದ ಮಹಿಳಾ ನವೋದ್ಯಮ ಕಾರ್ಯಕ್ರಮ

12:31 PM Jan 09, 2018 | |

ಬೆಂಗಳೂರು: ಭಾರತೀಯ ನಿರ್ವಹಣ ಸಂಸ್ಥೆ (ಐಐಎಂ) ರಾಷ್ಟ್ರವ್ಯಾಪಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ಮಹಿಳಾ ನವೋದ್ಯಮ (ಸ್ಟಾರ್ಟ್‌ಪ್‌) ಕಾರ್ಯಕ್ರಮಕ್ಕೆ ಬನ್ನೇರುಘಟ್ಟ ರಸ್ತೆಯ ಐಐಎಂ ಬೆಂಗಳೂರು ಕೇಂದ್ರದಲ್ಲಿ ಸೋಮವಾರ ಚಾಲನೆ ನೀಡಿದೆ.

Advertisement

ಐಐಎಂ ಇಂಧೋರ್‌, ಐಐಎಂ ನಾಗ್ಪುರ, ಐಐಎಂ ಉದಯಪುರ, ಐಐಎಂ ವಿಶಾಖಪಟ್ಟಣಂ, ಅಹ್ಮದಾಬಾದ್‌ನ ಸಿಐಐಇ ಇನ್ನೋಸಿಟಿ ಹಾಗೂ ಕೋಲ್ಕತ್ತದ ಪ್ರಸಿಡೆನ್ಸಿ ಯೂನಿವರ್ಸಿಟಿ ಪಾಲುದಾರಿಕೆಯಲ್ಲಿ 2017-18ನೇ ಸಾಲಿನ ಮಹಿಳಾ ನವೋದ್ಯಮ ಕಾರ್ಯಕ್ರಮ ನಡೆಯಲಿದೆ.

ಐಐಎಂ ಬೆಂಗಳೂರಿನ ನಿರ್ದೇಶಕ ಪ್ರೊ.ಜಿ.ರಘುರಾಮ್‌, ಗೋಲ್ಡ್‌ಮೆನ್‌ ಸ್ಯಾಕ್ಸ್‌ ಮುಖ್ಯ ಆಡಳಿತಾಧಿಕಾರಿ ರವಿ ಕೃಷ್ಣನ್‌, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಲಹಗಾರ್ತಿ ಮತ್ತು ವಿಜ್ಞಾನಿ ಡಾ.ಅನಿತಾ ಗುಪ್ತ, ಹೆಮ್ಯಾಥ್‌ ಸಹ ಸಂಸ್ಥಾಪಕಿ ನಿರ್ಮಲಾ ಶಂಕರನ್‌, ಮಹಿಳಾ ನವೋದ್ಯಮ 2017-18ರ ನಿರ್ದೇಶಕ ಪ್ರೊ.ಸುರೇಶ್‌ ಮೊದಲಾದವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಯೋಜನೆಯಡಿ ದೇಶದ 12 ಸಾವಿರ ಆಕಾಂಕ್ಷಿ ಮಹಿಳಾ ಉದ್ಯಮಿಗಳಿಗೆ ಆನ್‌ಲೈನ್‌ ತರಬೇತಿ ನೀಡಲಾಗುತ್ತದೆ. ಅದರಲ್ಲಿ ಶ್ರೇಷ್ಠ 100 ಉದ್ಯಮ ಆಯ್ಕೆ ಮಾಡಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಗೋಲ್ಡ್‌ಮನ್‌ ಸ್ಯಾಕ್ಸ್‌ ಸಂಸ್ಥೆಯ ಮೂಲಕ ಅನುದಾನ ಒದಗಿಸಲಾಗುತ್ತದೆ ಎಂದು ಮಹಿಳಾ ನವೋದ್ಯಮ 2017-18ರ ನಿರ್ದೇಶಕ ಪ್ರೊ.ಸುರೇಶ್‌ ಮಾಹಿತಿ ನೀಡಿದರು.

ಆಯ್ಕೆ ಹೇಗೆ?: 12,000 ಆಕಾಂಕ್ಷಿ ಮಹಿಳಾ ಉದ್ಯಮಿಗಳಿಗೆ ಐದು ವಾರಗಳ “ಡು ಯುವರ್‌ ವೆಂಚರ್‌’ ಮಾಸ್‌ ಓಪನ್‌ ಆನ್‌ಲೈನ್‌ ಕೋರ್ಸ್‌ ನಡೆಸಲಾಗುತ್ತದೆ. ಮಹಿಳೆಯರು ವ್ಯವಸ್ಥಿತವಾಗಿ ಉದ್ಯಮ ಯೋಜನೆ ಗುರುತಿಸುವ ಮತ್ತು ಪರೀಕ್ಷಿಸುವ ಪರಿಣಾಮಕಾರಿ ತರಬೇತಿ ನೀಡಲಾಗುತ್ತದೆ.

Advertisement

ನಂತರ ಸಂಭವನೀಯ 300 ಮಹಿಳಾ ಉದ್ಯಮ ಆಯ್ಕೆ ಮಾಡಿ, ಸಮೀಪದ ಪಾಲುದಾರ ಸಂಸ್ಥೆಯಲ್ಲಿ ಬೂಟ್‌ ಕ್ಯಾಂಪ್‌ ಮೂಲಕ ಸಂವಹನ ಹಾಗೂ ಗ್ರಾಹಕರೊಂದಿಗೆ ನಡೆದುಕೊಳ್ಳುವ ಶಿಸ್ತಿನ ತರಬೇತಿ ನೀಡಲಾಗುತ್ತದೆ. ಈ 300 ಉದ್ಯಮಿಗಳಲ್ಲಿ 100 ಮಂದಿಯನ್ನು ಆಯ್ಕೆ ಮಾಡಿ, ಅವರಿಗೆ ಐಐಎಂ ಬೆಂಗಳೂರಿನಲ್ಲಿ ಎರಡನೇ ಬೂಟ್‌ ಕ್ಯಾಂಪ್‌ ನಡೆಸಲಾಗುತ್ತದೆ.

ಈ ಕ್ಯಾಂಪ್‌ನಲ್ಲಿ ಉದ್ಯಮ ಯೋಜನೆ ಸಿದ್ಧಪಡಿಸುವುದು, ವೆಚ್ಚ ಮತ್ತು ಬೆಲೆ ನಿಗದಿ, ಮಾರಾಟ ಮತ್ತು ಮಾರುಕಟ್ಟೆ ತಂತ್ರಗಳು, ಸಮಾಲೋಚನಾ ತಂತ್ರಗಾರಿಕೆ ಕಲಿಸಿಕೊಡಲಾಗುತ್ತದೆ. ಈ ಎಲ್ಲಾ ಶಿಬಿರ ಮುಕ್ತಾಯದ ನಂತರ ಮಹಿಳಾ ಉದ್ಯಮವನ್ನು ಪಾಲುದಾರ ಸಂಸ್ಥೆ ಮೂಲಕ ಪೋಷಿಸಲಾಗುತ್ತದೆ.

ಜತೆಗೆ ಪ್ರತಿ ಮಹಿಳೆಗೆ ಮಾಸಿಕ 30 ಸಾವಿರ ರೂ. ಹಣಕಾಸು ನೆರವೂ ದೊರೆಯಲಿದೆ. ಮಹಿಳಾ ಉದ್ಯಮಿಗಳು //wsp.nsrcel.org ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next