Advertisement
ಗೋವಾದ ಪೆಡ್ನೆ, ಪೊಂಡಾ, ಮುರಗಾಂವ, ವಾಸ್ಕೊ, ದಾಬೋಲಿಂ, ಕ್ಷೇತ್ರಗಳಲ್ಲಿ ಅತಿ ಹೆಚ್ಚು ಪುರುಷ ಮತದಾರರಿದ್ದಾರೆ. ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 11,47,545 ಜನ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಇವರಲ್ಲಿ 5,59,785 ಪುರುಷ ಮತದಾರರು ಮತ್ತು 5,87,787 ಮಹಿಳಾ ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಕೂಡ ರಾಜ್ಯದಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿತ್ತು.
Related Articles
Advertisement
ರಾಜ್ಯದಲ್ಲಿ 144 ಸೆಕ್ಷನ್ ಜಾರಿ
ಪಣಜಿ: ಪ್ರಸಕ್ತ ಗೋವಾ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಫೆ.14 ರ ಸಂಜೆ 6 ಗಂಟೆಯ ವರೆಗೆ ರಾಜ್ಯದಲ್ಲಿ 144 ನೇಯ ಕಲಂ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿಯಿಂದ ಮಾಹಿತಿ ಲಭ್ಯವಾಗಿದೆ.
ರಾಜ್ಯಾದ್ಯಂತ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯದು ಅಥವಾ ಐದಕ್ಕಿಂತ ಹೆಚ್ಚು ಜನರ ಸಭೆಗಳು, ಮೆರವಣಿಗೆಗಳು, ರ್ಯಾಲಿಗಳು, ಸಭೆಗಳನ್ನು ನಿಷೇಧಿಸಲಾಗಿದೆ. ಸಕ್ರಮ ಹಣ ವರ್ಗಾವಣೆ, ಮತ್ತು ಮದ್ಯ ವಿತರಣೆಯನ್ನು ತಡೆಯಲು ಚುನಾವಣಾ ದಿನದಂದು ಪರವಾನಗಿ ನೀಡಲಾದ ವಾಹನಗಳನ್ನು ಹೊರತುಪಡಿಸಿ ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ಅನುಮತಿಸಲಾದ ಎಲ್ಲಾ ವಾಹನಗಳ ಓಡಾದ ಬಂದ್ ಮಾಡಲು ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಅಕ್ರಮ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೋಲಿಸ್ ಇಲಾಖೆ ಮಾಹಿತಿ ನೀಡಿದೆ.
ಗೋವಾದಲ್ಲಿನ ಎಲ್ಲ ಮದ್ಯದಂಗಡಿಗಳನ್ನು ಫೆ.12 ರಂದು ಸಂಜೆ 6 ಗಂಟೆಯಿಂದ ಫೆ 14 ರವರೆಗೆ ಗೋವಾದಲ್ಲಿ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ.