Advertisement

Kabaddi: ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಕಬಡ್ಡಿ ಲೀಗ್..!

01:06 PM Mar 09, 2024 | Kavyashree |

ತೀರ್ಥಹಳ್ಳಿ : ಮಲೆನಾಡ ಮಹಿಳಾ ಟ್ರಸ್ಟ್ (ರಿ) ತೀರ್ಥಹಳ್ಳಿ ಇವರ ವತಿಯಿಂದ ತೀರ್ಥಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಅಹ್ವಾನಿತ

Advertisement

ತಂಡಗಳ ಹೊನಲು ಬೆಳಕಿನ ಲೀಗ್ ಮಾದರಿಯ ಮಹಿಳೆಯರ ಕಬಡ್ಡಿ ಪಂದ್ಯಾವಳಿ ಮಾ.9ರ ಶನಿವಾರ ತೀರ್ಥಹಳ್ಳಿಯ ಸಾಂಸ್ಕೃತಿಕ ಮಂದಿರದ ಆವರಣದಲ್ಲಿ ನಡೆಯಲಿದ್ದು, ಅಂತಿಮ ಸಿದ್ಧತೆ ನಡೆದಿದೆ.

ಮಾ.9ರಂದು ಶನಿವಾರ ತೀರ್ಥಹಳ್ಳಿಯ ಸಾಂಸ್ಕೃತಿಕ ಮಂದಿರದ ಆವರಣದಲ್ಲಿ ಕಬ್ಬಡಿ ಪಂದ್ಯಾವಳಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಒಟ್ಟು 10 ಕ್ಕೂ ಹೆಚ್ಚು ಮಹಿಳಾ ಕಬ್ಬಡಿ ತಂಡಗಳು ಭಾಗಿಯಾಗಲಿದ್ದು, ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 35,000, ದ್ವಿತೀಯ ಬಹುಮಾನ 25,000, ತೃತೀಯ ಬಹುಮಾನ 15,000 ಹಾಗೂ ಚತುರ್ಥ ಬಹುಮಾನ 10,000 ಪಡೆದುಕೊಳ್ಳಲಿದೆ.

ಪಂದ್ಯಾವಳಿಯ ಉದ್ಘಾಟನೆ ಇಂದು ಮಧ್ಯಾಹ್ನ 3:30ಕ್ಕೆ ಮಲೆನಾಡು ಮಹಿಳಾ ಟ್ರಸ್ಟ್ ಅಧ್ಯಕ್ಷೆ ನಯನ ಜಯಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಾಜಿ ಪಟ್ಟಣ ಪಂಚಾಯತ್‌ ಅಧ್ಯಕ್ಷ ಶಬನಂ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಸಂದೇಶ್ ಜವಳಿ, ಪ.ಪಂ. ಮಾಜಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಪ. ಪಂ. ಸದಸ್ಯೆ ಮಂಜುಳಾ ನಾಗೇಂದ್ರ, ಪ.ಪಂ. ಸದಸ್ಯರಾದ ಜ್ಯೋತಿ ಮೋಹನ್,  ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಿಂಚನ, ಸಾಧನ ಎಸ್, ದೀಕ್ಷಿತ ಹೆಚ್ ಎನ್, ನಾಗಶ್ರೀ ಕೆ. ಆಗಮಿಸಲಿದ್ದಾರೆ.

Advertisement

ವಿನಯ್ ಗುರೂಜಿಗಳ ಆಗಮನ

ಸಂಜೆ 6:30ಕ್ಕೆ ನಯನಾ ಜಯಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಲೆನಾಡು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಅವಧೂತ ಶ್ರೀ ವಿನಯ್ ಗುರೂಜಿಯವರ ಅಮೃತ ಹಸ್ತದಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ.

ವಿಶೇಷ ಆಹ್ವಾನಿತರಾಗಿ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷ ಡಾ. ಆರತಿ ಕೃಷ್ಣ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಆಗಮಿಸಲಿದ್ದಾರೆ.

ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಆರ್ ಎಂ ಮಂಜುನಾಥ್ ಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಕೆ. ಧರ್ಮೇಶ್, ಪ.ಪಂ. ಅಧ್ಯಕ್ಷ ಗೀತಾ ರಮೇಶ್, ಪ.ಪಂ. ಉಪಾಧ್ಯಕ್ಷ ರಹಮತ್ತುಲ್ಲಾ ಅಸಾದಿ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next