Advertisement

ಮಹಿಳಾ ಸ್ವಹಾಯ ಸಂಘಗಳಿಗೆ ಸಾಲವಿತರಣೆಯಲ್ಲಿ ರಾಜಕಾರಣ ಮಾಡುತ್ತಿಲ್ಲ: ಬ್ಯಾಲಹಳ್ಳಿ ಗೋವಿಂದಗೌಡ

07:37 PM Sep 12, 2020 | Mithun PG |

ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು ಮತ್ತು ಮಹಿಳಾ ಸಬಲೀಕರಣಕ್ಕೆ ಡಿಸಿಸಿ ಬ್ಯಾಂಕಿನಿಂದ ಉತ್ತೇಜನ ನೀಡುತ್ತಿದ್ದೇವೆ ಹೊರತು ರಾಜಕಾರಣ ಮಾಡುತ್ತಿಲ್ಲವೆಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

Advertisement

ನಗರದ ಡಿಸಿಸಿ ಬ್ಯಾಂಕಿಗೆ ಭೇಟಿ ನೀಡಿ ಬಳಿಕ ಸುಧ್ಧಿಗಾರರೊಂದಿಗೆ ಮಾತನಾಡಿದ ಅವರು ಸತತ ಬರಗಾಲದಿಂದ ತತ್ತರಿಸುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶ್ರಮಜೀವಿಗಳಾದ ರೈತರು ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಅವರ ಸಾಧನೆ ಮತ್ತು ಕಾರ್ಯವೈಖರಿಯನ್ನು ಪರಿಗಣಿಸಿ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಸಾಲ ಸೌಲಭ್ಯವನ್ನು ನೀಡುತ್ತಿದ್ದೇವೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳು ಮತ್ತು ಆರ್.ಬಿ.ಐ ಬ್ಯಾಂಕಿನ ಮಾನದಂಡಗಳನ್ನು ಪಾಲಿಸುವ ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯವನ್ನು ನೀಡುತ್ತಿದ್ದೇವೆ ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕಿನಲ್ಲಿ ನಡೆಸಿರುವ ವಹಿವಾಟು-ಉಳಿತಾಯ ಮೊತ್ತ ಮತ್ತು ನಿಯಮವಳಿ ಪ್ರಕಾರ ಸಭೆಗಳನ್ನು ನಡೆಸಿರುವುದನ್ನು ಗಮನಿಸಿ ಸಾಲ ಸೌಲಭ್ಯವನ್ನು ನೀಡುತ್ತಿದ್ದೇವೆ ಸಂಘಗಳ ಉಳಿತಾಯ ಮೊತ್ತದಲ್ಲಿ ಷೇರು ಕಟ್ಟಿಕೊಂಡು ಅವರಿಗೆ ಬಾಂಡ್ ನೀಡುತ್ತಿದ್ದೇವೆ ಸಾಲ ಮರುಪಾವತಿಯಾದ ಬಳಿಕ ಅವರ ಹಣವನ್ನು ವಾಪಸ್ಸು ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

100 ಕೋಟಿ ಷೇರುಹಣ ಕೊಡಿಸಲಿ: ಡಿಸಿಸಿ ಬ್ಯಾಂಕಿನಲ್ಲಿ 109 ಕೋಟಿ 49 ಲಕ್ಷ 29 ಸಾವಿರ ಷೇರು ಮೊತ್ತವಿದೆ ಅದರ ಜೊತೆಗೆ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ರಾಜ್ಯ ಸರ್ಕಾರದಲ್ಲಿ ಪ್ರಾಬಲ್ಯವನ್ನು ಹೊಂದಿದ್ದಾರೆ.  ಹೀಗಾಗಿ ಸರ್ಕಾರದಿಂದ 100 ಕೋಟಿ ರೂಗಳ ಷೇರು ಹಣವನ್ನು ಪಾವತಿಸಿದರೆ ಮಹಿಳಾ ಸ್ವಸಹಾಯ ಸಂಘಗಳಿಂದ ಉಳಿತಾಯ ಮೊತ್ತದಲ್ಲಿ ಷೇರು ಕಟ್ಟಿಸಿಕೊಳ್ಳುವ ಪದ್ದತಿಯನ್ನು ನಿಲ್ಲಿಸಲು ಅನುಕೂಲವಾಗುತ್ತದೆ. ಜೊತೆಗೆ ಮಹಿಳಾ ಸಂಘಗಳಿಗೆ ನೀಡಿರುವ ಸಾಲದ ಮೇಲಿನ 40 ಕೋಟಿ ರೂಗಳ ಬಡ್ಡಿ ಹಣ ಕೇಂದ್ರ ಸರ್ಕಾರದಿಂದ ಪಾವತಿಯಾಗಬೇಕಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಬಳಿ ಚರ್ಚಿಸಿ ಬಡ್ಡಿ ಹಣವನ್ನು ಬಿಡುಗಡೆ ಮಾಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸುಧ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಡಿಸಿಸಿ ಬ್ಯಾಂಕಿನಿಂದ ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವುದಿಲ್ಲ ಬದಲಿಗೆ ವಿ.ಎಸ್.ಎಸ್.ಎನ್ ಮತ್ತು ಎಸ್.ಎಫ್.ಸಿ.ಎಸ್ ಬ್ಯಾಂಕಿನ ಮೂಲಕ ಸಾಲ ವಿತರಣಾ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ ಯಾರು ಆಹ್ವಾನಿಸ್ತಾರೊ ಅಲ್ಲಿ ಭಾಗವಹಿಸುತ್ತೇನೆ ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಇಲ್ಲ ಹೀಗಾಗಿ ಭಾಗವಹಿಸಿಲ್ಲವೆಂದು ಸ್ಪಷ್ಟಪಡಿಸಿದರು.

Advertisement

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಮೋಹನ್‍ರೆಡ್ಡಿ,ಕೆ.ಎಸ್.ದ್ಯಾವಪ್ಪ,ಬಿ.ಆರ್.ಅಶ್ವತ್ಥಪ್ಪ,ಬ್ಯಾಂಕಿನ ವ್ಯವಸ್ಥಾಪಕಿ ಜ್ಯೋತಿ,ಮೇಲ್ವಿಚಾರಕಿ ವಸಂತ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು..

Advertisement

Udayavani is now on Telegram. Click here to join our channel and stay updated with the latest news.

Next